ಚುನಾವಣೆ ಪೂರ್ವಭಾವಿ ಸಿದ್ಧತೆ: ಬಿಜೆಪಿ ಕಾಸರಗೋಡು ಮಂಡಲ ಸಮಿತಿ ಕಾರ್ಯಾಗಾರ

ಕಾಸರಗೋಡು: ಚುನಾವಣೆಯ ಪೂರ್ವಭಾವಿಯಾಗಿ ಬಿಜೆಪಿ ಕಾಸರ ಗೋಡು ಮಂಡಲ ಸಮಿತಿ ಕಾರ್ಯಾ ಗಾರ ನಡೆಯಿತು. ಮಂಡಲದ ಚುನಾವಣೆ ಚಟುವಟಿಕೆಗಳ ಹೊಣೆ ವಹಿಸಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು. ಮಂಡಲ ಅಧ್ಯಕ್ಷ ಗುರುಪ್ರಸಾದ್ ಪ್ರಭು ಅಧ್ಯಕ್ಷತೆ ವಹಿಸಿದರು. ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ, ಜಯಪ್ರಕಾಶ್, ಸುಕುಮಾರ ಕುದ್ರೆಪ್ಪಾಡಿ, ಚಂದ್ರಶೇಖರ, ಶ್ರೀಧರ ಕೂಡ್ಲು ಮಾತನಾಡಿದರು.

ಶ್ರೀ ಸತ್ಯಸಾಯಿ ಪ್ರೇಮಪ್ರವಾಹಿನಿ ರಥಯಾತ್ರೆಗೆ ತಾಳಿಪಡ್ಪುನಲ್ಲಿ ಸ್ವಾಗತ

ಕಾಸರಗೋಡು: ಭಗವಾನ್ ಶ್ರೀ ಸತ್ಯಸಾಯಿ ಬಾಬಾರ ಜನ್ಮಶತಾಬ್ದಿ ಆಚರಣೆಯಂಗವಾಗಿ ದೇಶವ್ಯಾಪಕವಾಗಿ ಸಂಚರಿಸುವ ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆಗೆ ತಾಳಿಪಡ್ಪು ಸತ್ಯಸಾಯಿ ಅಭಯನಿಕೇತನದ ಆಶ್ರಯದಲ್ಲಿ ಸ್ವಾಗತ ನೀಡಲಾಯಿತು. ನಗರದ ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ಪರಿಸರದಿಂದ ಆರಂಭಗೊಂಡ ಶೋಭಾಯಾತ್ರೆಗೆ ಉಜ್ವಲ ಸ್ವಾಗತವನ್ನು ನೀಡಲಾಗಿದ್ದು, ಬಳಿಕ ಪಾದುಕ ದರ್ಶನ, ಸತ್ಸಂಗ, ಧಾರ್ಮಿಕ ಸಭೆ ನಡೆಯಿತು. ಶ್ರೀ ಸತ್ಯಸಾಯಿ ಸೇವಾ ಕರ್ನಾಟಕ ರಾಜ್ಯ ಕೋ-ಆರ್ಡಿ ನೇಟರ್ ಜಗನ್ನಾಥ್ ನಾಡಿಗೇರ ಪ್ರಧಾನ ಭಾಷಣ ಮಾಡಿದರು. ಸತ್ಯಸಾಯಿ ಜಿಲ್ಲಾಧ್ಯಕ್ಷ ಎಚ್. ಮಹಾಲಿಂಗ ಭಟ್, ತಾಳಿಪಡ್ಪು …

ಲಿಟ್ಲ್ ಲಿಲ್ಲಿ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಕುಂಬಳೆ: ಕೇರಳ ಸಯನ್ಸ್ ಅಕಾಡೆಮಿ ಆಶ್ರಯದಲ್ಲಿ ಕೃತಕ ಬುದ್ದಿಮತ್ತೆ ಮತ್ತು ಭೂ ವಿಜ್ಞಾನ ಬಗ್ಗೆ ನಾಯ್ಕಾಪು ಲಿಟ್ಲ್ ಲಿಲ್ಲಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ  ತರಗತಿ ನಡೆಸಲಾಯಿತು. ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಚೆಯರ್ ಪರ್ಸನ್ ಸರಸ್ವತಿ ಎ. ಉದ್ಘಾಟಿಸಿದರು. ಸೆಂಟ್ರಲ್ ಯೂನಿ ವರ್ಸಿಟಿಯ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಜಾಸ್ಮಿನ್ ಎಂ. ಶಾ ಅಧ್ಯಕ್ಷತೆ ವಹಿಸಿದರು. ಶಾಲೆಯ ಪ್ರಾಂಶುಪಾಲ ಚಂದ್ರ ಬೋಸ್ ಎಂ.ಜಿ. ಸ್ವಾಗತಿಸಿದರು. ಪ್ರೊಫೆಸರ್ ಸಿಜಿನ್ ಕುಮಾರ್ ಎ.ವಿ, ಡಾ. ಆದಿತ್ಯ ವಿ. …