ಕಾರಡ್ಕ ಬೀಡು ಗಿರಿಜಮ್ಮ ಚಿಪ್ಪಾರು ಅರಮನೆ ನಿಧನ

ಚಿಪ್ಪಾರು: ವಿಟ್ಲ ಅರಮನೆ ದಿ| ಮರಿಯಯ್ಯನವರ ಪತ್ನಿ ಕಾರಡ್ಕ ಬೀಡು ಗಿರಿಜಮ್ಮ ಚಿಪ್ಪಾರು ಅರಮನೆ (90) ನಿನ್ನೆ ನಿಧನ ಹೊಂದಿದರು. ಮೃತರು ಮಕ್ಕಳಾದ ಕೆ. ನರಸಿಂಹ ಬಲ್ಲಾಳ್ (ನಿವೃತ್ತ ಅಧ್ಯಾಪಕರು), ಕೆ.ಮುರಳೀಧರ ಬಲ್ಲಾಳ್ (ನಿವೃತ್ತ, ಬ್ಯಾಂಕ್ ಚೀಫ್ ಮ್ಯಾನೇಜರ್), ಕೆ. ಪ್ರವೀಣ್ ಚಂದ್ರ ಬಲ್ಲಾಳ್ ( ಪೈವಳಿಕೆ ಪಂ. ಮಾಜಿ ಸದಸ್ಯ), ಕೆ. ಶಿವ ಕುಮಾರ್ ಬಲ್ಲಾಳ್ (ನಿವೃತ್ತ ಮುಖ್ಯೋಪಾಧ್ಯಾಯ), ಕೆ. ರವಿರಾಜ್ ಬಲ್ಲಾಳ್, ಆಶಾದೇವಿ, ಪೂರ್ಣಿಮಾ, ಅಳಿಯಂದಿರಾದ ಕೆ.ಸುದರ್ಶನ ಪಾಣಿ ಬಲ್ಲಾಳ್ (ನಿವೃತ್ತ ಬ್ಯಾಂಕ್ ಉದ್ಯೋಗಿ), …

ಕೇಂದ್ರ ಸಚಿವ ಸುರೇಶ್ ಗೋಪಿ ಕುಂಬಳೆಗೆ: ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಪರ ಗೋಡೆಬರಹ

ಕುಂಬಳೆ: ಮಂಜೇಶ್ವರ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಪರ ಪ್ರಚಾರಾರ್ಥ ಕೇಂದ್ರ ಸಚಿವ ಸುರೇಶ್‌ಗೋಪಿ ಇಂದು ಬೆಳಿಗ್ಗೆ ಕುಂಬಳೆಗೆ ಆಗಮಿಸಿ ದ್ದಾರೆ. ಕುಂಬಳೆಯಲ್ಲಿ  ಕೆ. ಸುರೇಂದ್ರನ್‌ರಿಗೆ  ಮತ ಯಾಚಿಸಿ ಸುರೇಶ್ ಗೋಪಿ  ಗೋಡೆ ಬರಹ ನಡೆಸಿದರು.  ಈ ವೇಳೆ ಅಭ್ಯರ್ಥಿ ಕೆ.ಸುರೇಂದ್ರನ್, ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ನೇತಾರರು ಸಹಿತ ಹಲವರು ಕಾರ್ಯಕರ್ತರು ಉಪಸ್ಥಿತರಿದ್ದರು. ಬಳಿಕ ಸುರೇಶ್ ಗೋಪಿ ಕಾಸರಗೋಡಿಗೆ ತೆರಳಿದರು. ಕಾಸರಗೋಡು ಮಂಡಲದಲ್ಲಿ ಬಿಜೆಪಿಯ ಗೆಲುವಿಗಾಗಿ ಗೋಡೆ ಬರಹ ನಡೆಸಲಿದ್ದಾರೆ. ಮಂಜೇಶ್ವರದಲ್ಲಿ ಕೆ. …

ನೀರ್ಚಾಲು ಗೋಳಿಯಡ್ಕದಿಂದ ಹುಳಿರಸ, ಬಾಡೂರಿನಿಂದ ಕರ್ನಾಟಕ ಮದ್ಯ ವಶ: ಇಬ್ಬರ ಬಂಧನ

ಕುಂಬಳೆ: ಕರ್ನಾಟಕ ಮದ್ಯ ಹಾಗೂ ಸಾರಾಯಿ ತಯಾರಿಸುವ ಹುಳಿರಸ ಸಹಿತ ಇಬ್ಬರನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಕನ್ಯೆಪ್ಪಾಡಿಯ ಜಿ.ಕೆ. ಸಂತೋಷ್ (35) ಎಂಬಾತನನ್ನು 50 ಲೀಟರ್ ಸಾರಾಯಿ ಹುಳಿರಸ ಸಹಿತ ಗೋಳಿಯಡ್ಕದಿಂದ ಬದಿಯಡ್ಕ ರೇಂಜ್ ಅಬಕಾರಿ ಇನ್ಸ್‌ಪೆಕ್ಟರ್ ಜಿಷ್ಣು ಪಿ.ಆರ್. ನೇತೃತ್ವದ ತಂಡ ಬಂಧಿಸಿದೆ. ಅಬಕಾರಿ ತಂಡದಲ್ಲಿ ಅಸಿಸ್ಟೆಂಟ್ ಇನ್ಸ್‌ಪೆಕ್ಟರ್ ಎ.ಕೃಷ್ಣ, ಪ್ರಿವೆಂಟಿವ್ ಆಫೀಸರ್‌ಗಳಾದ ಕೆ. ಸಾಬು, ಮಂಜುನಾಥ ಆಳ್ವ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಪಿ. ಸದಾ ನಂದನ್, ಟಿ. ಧನ್ಯ ಎಂಬಿವರಿದ್ದರು. ಇನ್ನೊಂದು ಪ್ರಕರಣದಲ್ಲಿ ಬಾಡೂರು …

25 ಕ್ಷೇತ್ರಗಳಲ್ಲಿ ಮುಸ್ಲಿಂಲೀಗ್ ಸ್ಪರ್ಧೆ: ಕಾಸರಗೋಡಿನಲ್ಲಿ ಕಲ್ಲಟ್ರ ಮಾಹಿನ್ ಹಾಜಿ

ಕಾಸರಗೋಡು: ವಿಧಾನಸಭಾ ಚುನಾವಣೆಯಲ್ಲಿ ಕಾಸರಗೋಡು ಕ್ಷೇತ್ರದ ಯುಡಿಎಫ್ (ಮುಸ್ಲಿಂ ಲೀಗ್)ನ ಅಭ್ಯರ್ಥಿಯಾಗಿ ಯುಡಿಎಫ್ ಜಿಲ್ಲಾಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿಯವರನ್ನು ಮುಸ್ಲಿಂಲೀಗ್ ಕಣಕ್ಕಿಳಿಸಿದೆ. ಇವರು ಕಳೆದ ಐವತ್ತು ವರ್ಷಗಳಿಂದ ಮುಸ್ಲಿಂ ಲೀಗ್‌ನ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಇವರು ಮುಸ್ಲಿಂ ಲೀಗ್‌ನ ಜಿಲ್ಲಾ ಉಪಾಧ್ಯಕ್ಷ, ಕೋಶಾಧಿಕಾರಿ ಇತ್ಯಾದಿ ಸ್ಥಾನಗಳನ್ನು ವಹಿಸಿದ್ದರು. ಇವರು ಮೇಲ್ಪರಂಬ ಕಟ್ಟೆಕ್ಕಾಲ್ ನಿವಾಸಿಯಾಗಿದ್ದಾರೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ (ಮುಸ್ಲಿಂ ಲೀಗ್) ಅಭ್ಯರ್ಥಿಯಾಗಿ ಹಾಲಿ ಶಾಸಕ ಎಕೆಎಂ ಅಶ್ರಫ್‌ರ ಹೆಸರನ್ನು ಮುಸ್ಲಿಂಲೀಗ್ ಪ್ರಕಟಿಸಿದೆ. …

ಸ್ಕೂಟರ್ ವಿದ್ಯುತ್ ಕಂಬಕ್ಕೆ ಬಡಿದು ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಮೃತ್ಯು

ಕಲ್ಲಿಕೋಟೆ:  ಇಲೆಕ್ಟ್ರಿಕ್ ಸ್ಕೂಟರ್ ವಿದ್ಯುತ್ ಕಂಬಕ್ಕೆ ಬಡಿದು ಸಂಭವಿಸಿದ ಅಪಘಾತದಲ್ಲಿ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಮೃತಪಟ್ಟ ದಾರುಣ ಘಟನೆ ನಡೆದಿದೆ. ಇಂದು ಮುಂಜಾನೆ 2.30ರ ವೇಳೆ ಕೊಯಿಲಾಂಡಿಯಲ್ಲಿ  ಅಪಘಾತ ಸಂಭವಿಸಿದೆ.  ಅಪಘಾತ ಸಂಭವಿಸಿ ರುವುದಾಗಿ ಹೇಳಲಾಗುತ್ತಿದೆ. ಕಲ್ಲಿಕೋಟೆ  ಮಲಬಾರ್ ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿಗಳಾದ ಅವ್ಯಾನ್, ನಂದಕಿಶೋರ್, ಅಭಿನವ್ ಎಂಬಿ ವರು ಮೃತಪಟ್ಟವರಾಗಿ ದ್ದಾರೆಂದು ತಿಳಿದುಬಂದಿದೆ. ಮೃತದೇಹಗಳನ್ನು  ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸ ಲಾಗಿದೆ. ಮೂವರು ವಿದ್ಯಾರ್ಥಿ ಗಳೂ ಅಪಘಾತ ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು  ಪೊಲೀಸರು …

ಸಂಸದರಿಗೆ ಟಿಕೆಟಿಲ್ಲ: ಕಾಂಗ್ರೆಸ್‌ನಲ್ಲಿ ಅಸಂತೃಪ್ತಿ ಹೊಗೆ ತಾರಕಕ್ಕೆ

ತಿರುವನಂತಪುರ: ವಿಧಾನಸಭಾ ಚುನಾವಣೆಯಲ್ಲಿ  ತಮ್ಮ ಯಾವುದೇ ಸಂಸದರನ್ನು ಕಣಕ್ಕಿಳಿಸುವಂತಿಲ್ಲವೆಂಬ ಅಚಲ ತೀರ್ಮಾನವನ್ನು ಕಾಂಗ್ರೆಸ್ ಹೈಕಮಾಂಡ್ ಕೈಗೊಂಡಿರುವುದನ್ನು ಪ್ರತಿಭಟಿಸಿ, ಕಣ್ಣೂರು ಸಂಸದ ಕೆ. ಸುಧಾ ಕರನ್ ಪ್ರತ್ಯಕ್ಷವಾಗಿ ರಂಗಕ್ಕಿಳಿದಿರುವ ಬೆನ್ನಲ್ಲೇ ಕಾಂಗ್ರೆಸ್‌ನ ಇತರ ಸಂಸದರ ಪೈಕಿ ಶಶಿ  ತರೂರ್, ಎಂ.ಕೆ. ರಾಘವನ್ ಮತ್ತು ಅಡೂರ್ ಪ್ರಕಾಶ್ ಕೂಡಾ ಅಸಂತೃಪ್ತಿ ವ್ಯಕ್ತಪಡಿಸಿ ರಂಗಕ್ಕಿಳಿದಿದ್ದಾರೆ. ಅಭ್ಯರ್ಥಿಗಳ ನಿರ್ಣಯ ವಿಷಯದಲ್ಲಿ ನನ್ನ ಅಭಿಪ್ರಾಯವನ್ನು ಪಕ್ಷ ಕೇಳಿಲ್ಲವೆಂದು ತಿರುವನಂತಪುರ ಸಂಸದ ಶಶಿ ತರೂರ್ ಆರೋಪಿಸಿದ್ದಾರೆ. ಮಾತ್ರವಲ್ಲ ಅಭ್ಯರ್ಥಿಗಳ ಯಾದಿ ಬಗ್ಗೆ ಅವರು ಅಸಂತೃಪ್ತಿಯನ್ನು ವ್ಯಕ್ತಪಡಿಸಿ …

ಅಡುಗೆ ಅನಿಲ ಕ್ಷಾಮ: ಕುಂಬಳೆಯಲ್ಲಿ 10ರಷ್ಟು ಹೋಟೆಲ್‌ಗಳು ಮುಚ್ಚುಗಡೆ

ಕುಂಬಳೆ: ಅಡುಗೆ ಅನಿಲ ಕ್ಷಾಮ ತೀವ್ರಗೊಂಡಿದ್ದು, ಇದರಿಂದ  ಕುಂಬಳೆಯಲ್ಲಿ 10ರಷ್ಟು ಹೋಟೆಲ್ ಗಳನ್ನು ಮುಚ್ಚುಗಡೆಗೊಳಿಸಲಾಗಿದೆ.  ಕುಂಬಳೆ ಪೇಟೆಯಲ್ಲಿರುವ ಹೋಟೆಲ್ ತಾಜ್, ಗೋಕುಲ್ ರೆಸ್ಟೋರೆಂಟ್, ಮುಬಾರಕ್, ಮಿರ್ಚಿ ಮಸಾಲ,  ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆ ಬಳಿಯ ಕ್ಯಾಂಟೀನ್ ಸಹಿತ 10ರಷ್ಟು ಹೋಟೆಲ್‌ಗಳು ಇಂದು ತೆರೆಯಲಿಲ್ಲ. ಇತ್ತೀಚೆಗಿನಿಂದ ಅಡುಗೆ ಅನಿಲ ಸಿಲಿಂಡರ್ ವಿತರಣೆ ಮೊಟಕುಗೊಂಡಿ ರುವುದೇ ಇದಕ್ಕೆ ಕಾರಣವಾಗಿದೆ. ಅಡುಗೆ ಅನಿಲ ಲಭ್ಯವಾಗದಿದ್ದಲ್ಲಿ ಇನ್ನೂ ಹಲವು ಹೋಟೆಲ್‌ಗಳು ಮುಚ್ಚುಗಡೆಗೊಳ್ಳುವ ಸಾಧ್ಯತೆ ಯಿದೆಯೆಂದು ಹೇಳಲಾಗುತ್ತಿದೆ. ಇದೇ ವೇಳೆ ಹೋಟೆಲ್‌ಗಳು ಮುಚ್ಚು ಗಡೆಗೊಂಡಿರುವುದರಿಂದ …

ಎರಡು ಉದ್ಘಾಟನೆ ನಡೆದರೂ ರಾಷ್ಟ್ರೀಯ ಹೆದ್ದಾರಿ ಟೋಲ್‌ಗೇಟ್ ಬೋರ್ಡ್‌ಗಳ ತೆರವಿಗೆ ಕ್ರಮವಿಲ್ಲ: ವಾಹನ ಚಾಲಕರಿಗೆ ಗೊಂದಲ

ಕುಂಬಳೆ: ದೂರವ್ಯಾಪ್ತಿಯನ್ನು ಉಲ್ಲಂಘಿಸಿ ಸ್ಥಾಪಿಸಿದ ಕುಂಬಳೆ ಆರಿಕ್ಕಾಡಿ  ಟೋಲ್‌ಗೇಟ್ ಮುಚ್ಚುಗಡೆಗೊಳಿಸಿದರೂ ರಾಷ್ಟ್ರೀಯ ಹೆದ್ದಾರಿಯ ವಿವಿಧೆಡೆ  ಸ್ಥಾಪಿಸಿದ ಟೋಲ್‌ಗೇಟ್ ಸೂಚನಾ ಫಲಕಗಳು ಅದೇ ರೀತಿ ಉಳಿದುಕೊಂಡಿವೆ.  ಆರಿಕ್ಕಾಡಿಯಲ್ಲಿ ಹಾಗೂ ಕುಂಬಳೆ ಬದರ್ ಸುಮಾ ಮಸೀದಿ ಸಮೀಪ ಟೋಲ್‌ಗೇಟ್‌ನ ಸೂಚನಾ ಫಲಕಗಳನ್ನು ಸ್ಥಾಪಿಸಲಾಗಿದೆ. ಟೋಲ್ ಬೂತ್ ರದ್ದುಗೊಳ್ಳುವುದರೊಂದಿಗೆ ಫಲಕಗಳನ್ನು ತೆರವುಗೊಳಿಸಬೇಕಾಗಿತ್ತು. ಆದರೆ ಅಧಿಕಾರಿಗಳು ಅದಕ್ಕೆ ಸಿದ್ಧವಾಗದಿರುವುದು ವಾಹನ ಚಾಲಕರಿಗೆ ಗೊಂದಲ ಸೃಷ್ಟಿಸುತ್ತಿದೆ. ಕಳೆದ ವಾರ ಕಾಮಗಾರಿ ಪೂರ್ತಿಗೊಳಿಸಿದ ತಲಪಾಡಿ -ಚೆಂಗಳ ರೀಚ್ ರಾಷ್ಟ್ರೀಯ ಹೆದ್ದಾರಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಕೊಚ್ಚಿಯಲ್ಲಿ …

ಧರ್ಮತ್ತಡ್ಕ- ಬಾಯಾರು ರಸ್ತೆ ಬದಿ ಹೊಂಡಗಳು: ವಾಹನ ಪ್ರಯಾಣಿಕರಲ್ಲಿ ಭೀತಿ

ಪೈವಳಿಕೆ: ಧರ್ಮತ್ತಡ್ಕ- ಸಜಂಕಿಲ- ಬಾಯಾರು ಲೋಕೋಪಯೋಗಿ ನೂತನ ರಸ್ತೆಯ ಬದಿ ವಿವಿಧೆಡೆ ಹೊಂಡಗಳಿದ್ದು, ಇದು ವಾಹನ ಪ್ರಯಾಣಿಕರಿಗೆ ಭೀತಿಯೊಡ್ಡುತ್ತಿದೆ. ಪ್ರತೀದಿನ ಬಸ್ ಸಹಿತ ನೂರಾರು ವಾಹನಗಳು ಸಂಚರಿಸುವ ಪ್ರಧಾನ ರಸ್ತೆ ಇದಾಗಿದೆ. ರಸ್ತೆ ನಿರ್ಮಾಣ ವೇಳೆ ಅಪಾಯಕಾರಿ ರಸ್ತೆಯ ಬದಿ ಹೊಂಡವಿರುವಲ್ಲಿ ತಡೆಬೇಲಿ ನಿರ್ಮಿಸದಿರುವುದು ಅಪಾಯಭೀತಿಗೆ ಕಾರಣವಾಗಿದೆ.  ಸಜಂಕಿಲ, ಸರ್ಕುತ್ತಿ ಸಹಿತ ವಿವಿಧೆಡೆ ರಸ್ತೆ ಬದಿ ಹೊಂಡಗಳಿದ್ದು, ಇದು ವಾಹನ ಪ್ರಯಾಣಿಕರಲ್ಲಿ ಆತಂಕ ಮೂಡಿಸುತ್ತಿದೆ. ಸಂಬಂಧಪಟ್ಟ ಗುತ್ತಿಗೆದಾರ ಕೂಡಲೇ ರಸ್ತೆ ಬದಿ ಸಮತಟ್ಟುಗೊಳಿಸಬೇಕು ಅಥವಾ ತಡೆಬೇಲಿ ನಿರ್ಮಿಸಿ …

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ: ಚಟ್ಟಂಚಾಲ್- ಚೆರ್ಕಳ ರಸ್ತೆ 2 ವಾರಕ್ಕೆ ಮುಚ್ಚುಗಡೆ; ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಂಗವಾಗಿ ಚಟ್ಟಂಚಾಲ್- ಚೆರ್ಕಳ ರಸ್ತೆಯನ್ನು ಎರಡು ವಾರಕ್ಕೆ ಮುಚ್ಚುಗಡೆಗೊಳಿಸಲು ನಿರ್ಧರಿಸಲಾಗಿದೆ. ಇದರಂತೆ ನಾಳೆಯಿಂದ ಎರಡು ವಾರಕ್ಕೆ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿಯಂತ್ರಣ ಹೇರಲಾಗುವುದು. ಆದರೆ ರಂಜಾನ್ ಪರಿಗಣಿಸಿ ಎರಡು ದಿನಕ್ಕೆ ನಿರ್ಧಾರವನ್ನು ಮುಂದೂಡಲು ಸಾಧ್ಯತೆ ಇದೆ ಎಂಬ ಸೂಚನೆಯಿದೆ. ಪ್ರಸ್ತುತ ಕೈಗೊಂಡ ತೀರ್ಮಾನ ಪ್ರಕಾರ ಕಣ್ಣೂರು ಭಾಗದಿಂದ ಬರುವ ವಾಹನಗಳು ಚಟ್ಟಂಚಾಲ್ ಮೇಲ್ಸೇತುವೆಗೆ ಪ್ರವೇಶಿಸದೆ ಸರ್ವೀಸ್ ರಸ್ತೆ ಮೂಲಕ ಚಟ್ಟಂಚಾಲ್- ಪರವನಡ್ಕ ರಸ್ತೆಯ ಮೂಲಕ ಸಂಚರಿಸಿ ಕೆಎಸ್‌ಟಿಪಿ ರಸ್ತೆಯಲ್ಲಿ ಕಾಸರಗೋಡಿಗೆ ತೆರಳಬೇಕು. …