ಕಾರಿನಲ್ಲಿ ಸಾಗಿಸುತ್ತಿದ್ದ 1200 ಲೀಟರ್ ಸ್ಪಿರಿಟ್ ವಶ: ಮಂಜೇಶ್ವರ ನಿವಾಸಿ ಸಹಿತ ಇಬ್ಬರ ಸೆರೆ

ಕಾಸರಗೋಡು: ನೀಲೇಶ್ವರದಲ್ಲಿ ಪೊಲೀಸರು ನಡೆಸಿದ ಕಾರ್ಯಾ ಚರಣೆಯಲ್ಲಿ ಭಾರೀ ಪ್ರಮಾಣದ ಸ್ಪಿರಿಟ್ ವಶಪಡಿಸಿಕೊಂಡಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಇನ್ನೋವಾ ಕಾರಿನಲ್ಲಿ ಸಾಗಿಸುತ್ತಿದ್ದ 1200 ಲೀಟರ್ ಸ್ಪಿರಿಟ್ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ತೃಶೂರು ಎಡಕಳಿಯೂರ್ ಪುನ್ನಯೂರ್ ಸೌತ್‌ನ ಅರಕ್‌ಪರಂ ಬಿಲ್ ಹೌಸ್‌ನ ಎ.ಎಚ್. ಅನ್ಸಿಫ್ (40), ಮಂಜೇಶ್ವರ ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಸಮೀಪದ ಭೂಮಿಕಾ ನಿಲಯದ ಎ.ಆರ್. ಗಿರೀಶ್ (39) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಎಸ್.ಐ. ಜಿ. ವಿಷ್ಣು ಅವರ ನೇತೃತ್ವದಲ್ಲಿ ಇಂದು ಮುಂಜಾನೆ 1 …

ಅಸೌಖ್ಯ: ಯುವತಿ ಮೃತ್ಯು 

ಬೆಳ್ಳೂರು: ಅಡ್ವಳ ಕಾನ ನಿವಾಸಿ ಅಡ್ವಳಬೀಡು ಪುಷ್ಪಾ ಕುಮಾರಿ (45) ನಿನ್ನೆ ನಿಧನಹೊಂದಿದರು. ಕಜಮುಂಡ ಬಾಲಕೃಷ್ಣ ಬಲ್ಲಾಳ್-ಸುಶೀಲಮ್ಮ ದಂಪತಿ ಪುತ್ರಿಯಾಗಿದ್ದಾರೆ. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಇವರ ಪತಿ ಮಧುಸೂದನ ಬಲ್ಲಾಳ್ ಈ ಹಿಂದೆ ನಿಧನಹೊಂದಿದ್ದಾರೆ. ಮೃತರು ತಂದೆ, ತಾಯಿ, ಮಕ್ಕಳಾದ ನಿಶಾಂತ್, ನಿತೇಶ್, ಸಹೋದರರಾದ ಎ.ಬಿ. ಬಾಲ ಗೋಪಾಲ ಬಲ್ಲಾಳ್, ಎ.ಬಿ. ದಿವಾಕರ ಬಲ್ಲಾಳ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮದ್ಯದಮಲಿನಲ್ಲಿ ಚಲಾಯಿಸಿದ ಕಾರು ಬೈಕ್‌ಗೆ ಢಿಕ್ಕಿ ಹೊಡೆದು ಯುವಕ ಮೃತ್ಯು: ಕಾರು ಚಾಲಕನ ವಿರುದ್ಧ ನರಹತ್ಯಾ ಪ್ರಕರಣ ದಾಖಲು

ಕಾಸರಗೋಡು: ಕಾರು ಢಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ದಾರುಣ ಘಟನೆ ಚಿತ್ತಾರಿಯಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಮಲಪ್ಪುರಂ ಒಳುಕ್ಕೂರು ಪಲಿತ್ತಲ ಎಂಬಲ್ಲಿನ ಶಂಕರನ್‌ರ ಪುತ್ರ ಪಿ. ಅಖಿಲೇಶ್ (38)  ಮೃತಪಟ್ಟ ವ್ಯಕ್ತಿ.  ಘಟನೆಗೆ ಸಂಬಂಧಿಸಿ ಕಾರು ಚಲಾಯಿಸಿದ ಕಾಞಂಗಾಡ್ ಅಲಾಮಿಪಳ್ಳಿಯ ಎಚ್. ಉಲ್ಲಾಸ್ ಎಂಬಾತನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ರಾತ್ರಿ ೧೧.೩೦ರ ವೇಳೆ ಕಾಸರಗೋಡು ಭಾಗದಿಂದ ಅಪರಿಮಿತ ವೇಗದಲ್ಲಿ ಬಂದ ಕಾರು ಅಖಿಲೇಶ್ ಚಲಾಯಿಸುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದಿದೆ. ಗಂಭೀರಗಾ ಯಗೊಂಡ ಅಖಿಲೇಶ್‌ರನ್ನು ಸ್ಥಳೀಯರು …

ಕಚೇರಿ ಮುಂದೆ ನಿಲುಗಡೆಗೊಳಿಸಲಾದ ಲಾರಿ ಕಳವು

ಕುಂಬಳೆ: ಕಚೇರಿಯ ಮುಂದೆ ನಿಲುಗಡೆಗೊಳಿಸಲಾಗಿದ್ದ ಲಾರಿ ಕಳವಿಗೀಡಾದ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಮಂಗಲ್ಪಾಡಿ ಅಡ್ಕ ಶಮೀಮಾ ಮಂಜಿಲ್‌ನ ಝಕರಿಯಾ ಎಂ. ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮಾರ್ಚ್ 21ರಂದು ರಾತ್ರಿ 11.30 ಮತ್ತು 22ರಂದು ಬೆಳಿಗ್ಗೆ 8.30ರ ಮಧ್ಯೆ ಈ ಲಾರಿಯನ್ನು ಕಳವುಗೈಯ್ಯಲಾಗಿದೆ. 15 ಲಕ್ಷ ರೂ. ಮೌಲ್ಯದ ಈ ಲಾರಿಯನ್ನು ನಾನು ಅಡ್ಕದ ಝಡ್.ಎಂ.ಎಸ್ ಫಿಶ್ ಸರ್ವೀಸ್ ಕಚೇರಿಯ ಎದುರುಗಡೆ ನಿಲುಗಡೆಗೊಳಿಸಿದ್ದೆ. …

ಪಯ್ಯನ್ನೂರು ಆಸ್ಪತ್ರೆ ತ್ಯಾಜ್ಯ ಅನಂತಪುರದಲ್ಲಿ:  ಎಸೆದವರಿಂದಲೇ ಹೆಕ್ಕಿಸಿದ ಪಂ. ಸದಸ್ಯ, ನಾಗರಿಕರು

ಕುಂಬಳೆ:  ಕಾಸರಗೋಡಿನ ತ್ಯಾಜ್ಯಗಳನ್ನು ಎಲ್ಲಿ ಎಸೆಯಬೇಕು, ಸಂಸ್ಕರಿಸಬೇಕು ಎಂದು ತಿಳಿಯದೆ ಸಮಸ್ಯೆಗೀಡಾಗಿರುವಾಗ ದೂರದ ಪಯ್ಯನ್ನೂರಿನ ಆಸ್ಪತ್ರೆಯೊಂದರ ತ್ಯಾಜ್ಯಗಳು ಅನಂತಪುರದಲ್ಲಿ ಎಸೆದಿರುವುದು ಪತ್ತೆಯಾಗಿದೆ. ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ಕ್ಷೇತ್ರಕ್ಕಿರುವ ರಸ್ತೆಯಲ್ಲಿ ದೊಡ್ಡ ಪ್ಲಾಸ್ಟಿಕ್ ಚೀಲಗಳಲ್ಲಿ ತ್ಯಾಜ್ಯ ಕಂಡುಬಂದಿತ್ತು. ಇದು ಗಮನಕ್ಕೆ ಬಂದ ಪುತ್ತಿಗೆ ಪಂಚಾಯತ್‌ನ ಹನ್ನೊಂದನೇ ವಾರ್ಡ್ ಸದಸ್ಯ ಸತೀಶ್ ಪಂಚಾಯತ್‌ನ ನೌಕರರನ್ನು ಸ್ಥಳಕ್ಕೆ ತಲುಪಿಸಿ ಗೋಣಿ ತೆರೆದು ನೋಡಿದಾಗ ಅದರಲ್ಲಿ ಪಯ್ಯನ್ನೂರಿನ ಬಿ.ಕೆ.ಎಂ. ಆಸ್ಪತ್ರೆಯ ರಶೀದಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಅಧಿಕಾರಿಗಳೊಂದಿಗೆ ವಿಚಾರಿಸಿದಾಗ ಅಲ್ಲಿಂದ …

70.175 ಗ್ರಾಂ ಎಂಡಿಎಂಎ ಸಹಿತ ಓರ್ವ ಸೆರೆ

ಕಾಸರಗೋಡು: ಭಾರೀ ಪ್ರಮಾಣದ ಎಂಡಿಎಂಎ ಮಾದಕ ವಸ್ತು ಕೈವಶವಿರಿಸಿಕೊಂಡಿದ್ದ ವ್ಯಕ್ತಿಯನ್ನು ಕಾಸರಗೋಡು ಅಬಕಾರಿ ಸ್ಪೆಶಲ್ ಸ್ಕ್ವಾಡ್ ಬಂಧಿಸಿದೆ. ಉಪ್ಪಳ ರೈಲ್ವೇ ನಿಲ್ದಾಣ ರಸ್ತೆಯ ಶಹಬಾಸ್ ಮಂಜಿಲ್‌ನ ಹಸೈನಾರ್ ವಿ. (42) ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ. ಈತನ ಕೈಯಿಂದ 70.175 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ಎಕ್ಸೈಸ್ ಇನ್‌ಸ್ಪೆಕ್ಟರ್ ವಿಷ್ಣುಪ್ರಕಾಶ್ ನೇತೃತ್ವದ ತಂಡ ಕಾಸರಗೋಡು ಅಡ್ಕತ್ತಬೈಲ್‌ನಲ್ಲಿ ನಡೆಸಿದ ಕಾರ್ಯಾ ಚರಣೆ ವೇಳೆ ಹಸೈನಾರ್‌ನ ಕೈಯಿಂದ ಎಂಡಿಎಂಎ ವಶಪಡಿಸಲಾಗಿದೆ. ಅಸಿಸ್ಟೆಂಟ್ ಎಕ್ಸೈಸ್‌ಇನ್‌ಸ್ಪೆಕ್ಟರ್ ಸಿ.ಕೆ.ಇ. ಸುರೇಶ್, ಪ್ರಿವೆಂಟೀವ್ ಆಫೀಸರ್ ಕೆ.ವಿ. ರಂಜಿತ್, ಅತುಲ್ …

ವಿಧಾನಸಭಾ ಚುನಾವಣೆ: ಜಿಲ್ಲೆಯಲ್ಲಿ ಶನಿವಾರ ಸಲ್ಲಿಸಿದ ಹದಿನಾರು ಅಭ್ಯರ್ಥಿಗಳು ಸೇರಿದಂತೆ ಒಟ್ಟು 29 ಮಂದಿಯಿಂದ ನಾಮಪತ್ರ ಸಲ್ಲಿಕೆ

ಕಾಸರಗೋಡು: ಜಿಲ್ಲೆಯಲ್ಲಿ ಶನಿವಾರ 16 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಇದರೊಂದಿಗೆ ಮೊನ್ನೆವರೆಗೆ ನಾಮಪತ್ರ ಸಲ್ಲಿಸಿದವರ ಸಂಖ್ಯೆ 28ಕ್ಕೇರಿದೆ.  ಮಂಜೇಶ್ವರ ವಿಧಾನಸಭಾ ಮಂಡಲದಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಸಿಪಿಎಂ ಅಭ್ಯರ್ಥಿ ಕೆ.ಆರ್. ಜಯಾನಂದ, ವಿಠಲ ರೈ ಎಂಬಿವರು 2 ಸೆಟ್ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಕೂಡಾ ಎರಡು ಸೆಟ್ ನಾಮಪತ್ರಗಳನ್ನು ಸಲ್ಲಿಸಿದ್ದು, ಸ್ವತಂತ್ರ ಅಭ್ಯರ್ಥಿಯಾಗಿ ಅಬ್ದುಲ್ಲ ಕೆ ಎರಡು ಸೆಟ್  ನಾಮಪತ್ರ ಸಲ್ಲಿಸಿದ್ದಾರೆ. ಮಂಜೇಶ್ವರ ಮಂಡಲದಲ್ಲಿ 8 ಮಂದಿ ಈಗಾಗಲೇ ನಾಮಪತ್ರ …

ಕೆ. ಸುರೇಂದ್ರನ್‌ರಿಂದ ಮಂಜೇಶ್ವರ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ

ಉಪ್ಪಳ: ಮಂಜೇಶ್ವರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಕೆ. ಸುರೇಂದ್ರನ್ ಶನಿವಾರ ಉಪ್ಪಳದಲ್ಲಿರುವ ಮಂಜೇಶ್ವರ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಉಪ್ಪಳ ಪೇಟೆಯಿಂದ ಬಿಜೆಪಿ ಮುಖಂಡರು, ಕಾರ್ಯಕರ್ತರ ಸಹಿತ ಮೆರವಣಿಗೆ ಮೂಲಕ ಸಾಗಿ ನಾಮಪತ್ರ ಸಲ್ಲಿಸಿದ್ದಾರೆ.  ಈ ವೇಳೆ ಮಾತನಾಡಿದ ಅವರು ತಾಲೂಕು ಕಚೇರಿ ಖಾಸಗಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು ಅವ್ಯವಸ್ಥೆ ಯಿಂದ ಕೂಡಿದೆ.  ರಾಜ್ಯದಲ್ಲಿ ಅದಲಿ ಬದಲಿ ಸರಕಾರ ಆಡಳಿತ ನಡೆಸಿದರೂ ಯಾವ ರೀತಿಯ ಅಭಿವೃದ್ಧಿಯೂ ಉಂಟಾಗಿಲ್ಲ ಎಂಬುದಕ್ಕೆ ತಾಲೂಕು ಕಚೇರಿ ಉದಾಹರಣೆಯಾಗಿದೆ ಎಂದರು. ಈ …

ಮಂಜೇಶ್ವರದಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಸ್ಪರ್ಧಾಕಣಕ್ಕೆ

ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಒಕ್ಕೂಟಗಳಿಗೆ ತೀವ್ರ ಸವಾಲೊಡ್ಡಿ ಎಸ್‌ಡಿಪಿಐ ಅಭ್ಯರ್ಥಿ  ಸ್ಪರ್ಧಾಕಣದಲ್ಲಿದ್ದಾರೆ. ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯನಾದ ಕೆ.ಎಂ. ಅಶ್ರಫ್ ಸ್ಪರ್ಧಿಸಲಿದ್ದಾರೆಂದು ಜಿಲ್ಲಾಧ್ಯಕ್ಷ ಸಿ.ಎ. ಸವಾದ್ ತಿಳಿಸಿದ್ದಾರೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಎಸ್‌ಡಿಪಿಐ ಸ್ಪರ್ಧಿಸುತ್ತಿದೆ. ಯುಡಿಎಫ್ ಅಭ್ಯರ್ಥಿಯಾಗಿ  ಹಾಲಿ ಶಾಸಕ ಎಕೆಎಂ ಅಶ್ರಫ್, ಎನ್‌ಡಿಎ ಅಭ್ಯರ್ಥಿಯಾಗಿ ಬಿಜೆಪಿಯ ಕೆ. ಸುರೇಂದ್ರನ್ ಹಾಗೂ ಎಲ್‌ಡಿಎಫ್ ಅಭ್ಯರ್ಥಿಯಾಗಿ ಸಿಪಿಎಂನ ಕೆ.ಆರ್. ಜಯಾನಂದ ಈ ಮಂಡಲದಲ್ಲಿ ಈಗಾಗಲೇ ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.

ಸತತ ಪ್ರತಿನಿಧೀಕರಿಸುವ ಮುಸ್ಲಿಂಲೀಗ್ ಮಂಡಲವನ್ನು ಅಭಿವೃದ್ಧಿಗೊಳಿಸದೆ ವಂಚನೆ-ಎಂ.ಎಲ್. ಅಶ್ವಿನಿ

ಮುಳ್ಳೇರಿಯ: ಕಾಸರಗೋಡು ಮಂಡಲದಿಂದ ವಿಧಾನಸಭೆಗೆ ದಶಕ ಗಳಿಂದ ಸತತವಾಗಿ ಪ್ರತಿನಿಧೀಕರಿಸುವ  ಟ್ರಿಪ್ಪಲ್ ಎಂಜಿನ್ ಆಡಳಿತದಲ್ಲೂ ಅಭಿವೃದ್ಧಿ ಯೋಜನೆಗಳು ಜ್ಯಾರಿಯಾ ಗದೆ ಮುಸ್ಲಿಂ ಲೀಗ್ ಜನರನ್ನು ವಂಚಿ ಸುತ್ತಿದೆಯೆಂದು ಎನ್‌ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಆರೋಪಿಸಿದರು.  ಕಾರಡ್ಕ ಪಂಚಾಯತ್‌ನ ಬಿಜೆಪಿ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಆರೋಗ್ಯ, ಶಿಕ್ಷಣ, ಉದ್ಯೋಗ ವಲಯದ ಸಮಸ್ಯೆಗಳಿಗೆ ಪರಿಹಾರ ಕಾಣಲು, ಕುಡಿಯುವ ನೀರು, ರಸ್ತೆ ಸಹಿತದ ಮೂಲಭೂತ ಬೇಡಿಕೆಗಳನ್ನು ಈಡೇರಿ ಸಲು ಮುಸ್ಲಿಂ ಲೀಗ್‌ಗೆ ಹಾಗೂ  ಘಟಕ ಪಕ್ಷವಾದ ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ …