ಮಂಜೇಶ್ವರದಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಸ್ಪರ್ಧಾಕಣಕ್ಕೆ

ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಒಕ್ಕೂಟಗಳಿಗೆ ತೀವ್ರ ಸವಾಲೊಡ್ಡಿ ಎಸ್‌ಡಿಪಿಐ ಅಭ್ಯರ್ಥಿ  ಸ್ಪರ್ಧಾಕಣದಲ್ಲಿದ್ದಾರೆ. ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯನಾದ ಕೆ.ಎಂ. ಅಶ್ರಫ್ ಸ್ಪರ್ಧಿಸಲಿದ್ದಾರೆಂದು ಜಿಲ್ಲಾಧ್ಯಕ್ಷ ಸಿ.ಎ. ಸವಾದ್ ತಿಳಿಸಿದ್ದಾರೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಎಸ್‌ಡಿಪಿಐ ಸ್ಪರ್ಧಿಸುತ್ತಿದೆ.

ಯುಡಿಎಫ್ ಅಭ್ಯರ್ಥಿಯಾಗಿ  ಹಾಲಿ ಶಾಸಕ ಎಕೆಎಂ ಅಶ್ರಫ್, ಎನ್‌ಡಿಎ ಅಭ್ಯರ್ಥಿಯಾಗಿ ಬಿಜೆಪಿಯ ಕೆ. ಸುರೇಂದ್ರನ್ ಹಾಗೂ ಎಲ್‌ಡಿಎಫ್ ಅಭ್ಯರ್ಥಿಯಾಗಿ ಸಿಪಿಎಂನ ಕೆ.ಆರ್. ಜಯಾನಂದ ಈ ಮಂಡಲದಲ್ಲಿ ಈಗಾಗಲೇ ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.

You cannot copy contents of this page