ನಿಲ್ಲಿಸಿದ್ದ ಲಾರಿ ಕಳವುಗೈದ ಇಬ್ಬರ ಬಂಧನ
ಕುಂಬಳೆ: ಬಂದ್ಯೋಡು ಬಳಿಯ ಅಡ್ಕದಿಂದ ಲಾರಿಯನ್ನು ಕಳವುಗೈದ ಪ್ರಕರಣದ ಆರೋಪಿ ಗಳನ್ನು ಗಂಟೆಗಳೊಳಗೆ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಕಳವಿಗೀಡಾದ ಲಾರಿಯನ್ನು ಸೀತಾಂಗೋಳಿ ಬಳಿಯಿಂದ ಪತ್ತೆಹಚ್ಚಲಾಗಿದೆ. ಕೊಡ್ಯಮ್ಮೆ ಇಚ್ಲಂಪಾಡಿ ಮುಳಿಯಡ್ಕ ನಿವಾಸಿ ಅಬ್ದುಲ್ಲ ಎ.ಪಿ. (32), ಎಡನಾಡು ಮುಕಾರಿಖಂಡದ ಮೊಹಮ್ಮದ್ ರಿಸ್ವಾನ್ (27) ಎಂಬಿವರನ್ನು ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಬೈಜು ಕೆ. ಜೋಸ್, ಎಸ್‌ಐ ಸನಿತ್ ಎಂಬಿವರು ಬಂಧಿಸಿದ್ದಾರೆ. ಅಡ್ಕ ಝಡ್‌ಎಂಎಸ್ ಫಿಶ್ ಸರ್ವೀಸ್ ಕಚೇರಿಯ ಮುಂಭಾಗ ದಲ್ಲಿ ಲಾರಿಯನ್ನು ಮಾರ್ಚ್ 21ರಂದು ರಾತ್ರಿ ನಿಲ್ಲಿಸಲಾಗಿತ್ತು. 22ರಂದು ಬೆಳಿಗ್ಗೆ …