ಬಿಜೆಪಿ ಮಂಗಲ್ಪಾಡಿ ಪಂಚಾಯತ್ ಕಾರ್ಯಕರ್ತರ ಸಮಾವೇಶ

ಉಪ್ಪಳ:  ಬಿಜೆಪಿ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಗೊಳಪಟ್ಟ ಕಾರ್ಯಕರ್ತರ ಸಮಾವೇಶ ನಿನ್ನೆ ಸಂಜೆ ಸೋಂಕಾಲಿನಲ್ಲಿರುವ ಮಂಜೇಶ್ವರ ವಿಧಾನ ಸಭಾ  ಚುನಾವಣಾ ಕಚೇರಿಯಲ್ಲಿ ನಡೆಯಿತು.  ಬಿಜೆಪಿ ಮಾಜಿ ರಾಜ್ಯ ಉಪಾಧ್ಯಕ್ಷ,  ಜಿಲ್ಲಾ ಬಿಜೆಪಿ ಪ್ರಭಾರಿ ರಘುನಾಥ್ ಚುನಾವಣೆ  ಬಗ್ಗೆ ಮಾರ್ಗದರ್ಶನ ನೀಡಿದರು. ಬಿಜೆಪಿ ಮಂಗಲ್ಪಾಡಿ ಪಂಚಾಯತ್ ಸಮಿತಿ ಉತ್ತರ ವಲಯ ಅಧ್ಯಕ್ಷ ಭರತ್ ರೈ, ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ್ ಮಯ್ಯ, ಮಹಿಳಾ ಮೋರ್ಚಾ ಕುಂಬಳೆ ಮಂಡಲ ಅಧ್ಯಕ್ಷೆ ಸುಧಾ ಗಣೇಶ್, …

ಜಿಲ್ಲೆಯಲ್ಲಿ ಡೀಲ್ ನಡೆದಿದ್ದು ಎನ್‌ಡಿಎ ಮತ್ತು ಯುಡಿಎಫ್ ಮಧ್ಯೆ-ಎಂ.ವಿ. ಜಯರಾಜನ್

ಕಾಸರಗೋಡು: ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಜಿಲ್ಲೆಯಲ್ಲಿ ಡೀಲ್ ನಡೆದದ್ದು ಎಡರಂಗ ಮತ್ತು ಎನ್‌ಡಿಎ ಮಧ್ಯೆ ಅಲ್ಲ, ಬದಲಾಗಿ ಯುಡಿಎಫ್ ಮತ್ತು ಎನ್‌ಡಿಎ ನಡುವೆ ಎಂದು ಸಿಪಿಎಂ ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ಎಂ.ವಿ. ಜಯರಾಜನ್ ಹೇಳಿದ್ದಾರೆ. ಕಾಸರ ಗೋಡಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು. ಕಾಸರಗೋಡಿನಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಶಾನವಾಸ್ ಪಾದೂರುರನ್ನು ಎಡರಂಗದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಳಿಸಿದ್ದು, ಬಿಜೆಪಿಗೆ ಸಹಾಯ ಒದಗಿಸುವ ಉದ್ದೇಶದಿಂದ  ಎಡರಂಗ ಮತ್ತು ಬಿಜೆಪಿ ಮಧ್ಯೆ ಮಾಡಿಕೊಳ್ಳಲಾದ ಒಂದು ಡೀಲ್ ಆಗಿದೆಯೆಂದು ಯುಡಿಎಫ್ ಆರೋಪಿಸಿದ್ದು, …