ಬಿಜೆಪಿ ಮಂಗಲ್ಪಾಡಿ ಪಂಚಾಯತ್ ಕಾರ್ಯಕರ್ತರ ಸಮಾವೇಶ

ಉಪ್ಪಳ:  ಬಿಜೆಪಿ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಗೊಳಪಟ್ಟ ಕಾರ್ಯಕರ್ತರ ಸಮಾವೇಶ ನಿನ್ನೆ ಸಂಜೆ ಸೋಂಕಾಲಿನಲ್ಲಿರುವ ಮಂಜೇಶ್ವರ ವಿಧಾನ ಸಭಾ  ಚುನಾವಣಾ ಕಚೇರಿಯಲ್ಲಿ ನಡೆಯಿತು.  ಬಿಜೆಪಿ ಮಾಜಿ ರಾಜ್ಯ ಉಪಾಧ್ಯಕ್ಷ,  ಜಿಲ್ಲಾ ಬಿಜೆಪಿ ಪ್ರಭಾರಿ ರಘುನಾಥ್ ಚುನಾವಣೆ  ಬಗ್ಗೆ ಮಾರ್ಗದರ್ಶನ ನೀಡಿದರು. ಬಿಜೆಪಿ ಮಂಗಲ್ಪಾಡಿ ಪಂಚಾಯತ್ ಸಮಿತಿ ಉತ್ತರ ವಲಯ ಅಧ್ಯಕ್ಷ ಭರತ್ ರೈ, ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ್ ಮಯ್ಯ, ಮಹಿಳಾ ಮೋರ್ಚಾ ಕುಂಬಳೆ ಮಂಡಲ ಅಧ್ಯಕ್ಷೆ ಸುಧಾ ಗಣೇಶ್, ಮೈನೋರಿಟಿ ಮೋರ್ಚಾ ಜಿಲ್ಲಾ ಉಪಾಧ್ಯಾಕ್ಷ ಅಶ್ರಫ್ ಅಬ್ದುಲ್ಲ  ಉಪಸ್ಥಿತರಿದ್ದರು. 

ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ  ಕಾರ್ಯಕರ್ತರು, ಬೂತ್ ಪದಾಧಿಕಾರಿಗಳು, ಮಾತೆಯರು ಸಹಿತ ನೂರಾರು ಮಂದಿ ಉಪಸ್ಥಿತರಿದ್ದರು. ಕಿಶೋರ್ ಕುಮಾರ್ ಸ್ವಾಗತಿಸಿ, ವಂದಿಸಿದರು.

You cannot copy contents of this page