ಟಿಪ್ಪರ್ ಲಾರಿ ಹಿಂಬದಿಗೆ ಬೈಕ್ ಢಿಕ್ಕಿ: ಯುವಕನ ಸಾವಿನಿಂದ ಶೋಕಸಾಗರ

ಉಪ್ಪಳ: ವಾಹನ ಅಪಘಾತದಲ್ಲಿ ಹೋಟೆಲ್ ನೌಕರನಾದ ಯುವಕ ಮೃತಪಟ್ಟ ಘಟನೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ. ಉಪ್ಪಳ ನಯಾಬಜಾರ್ ಬಳಿಯ ಯು.ಕೆ. ಫ್ಲಾಟ್‌ನಲ್ಲಿ ವಾಸಿಸುವ ಐಮಾನುಲ್ಲ (19) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಐಮಾನುಲ್ಲ  ಹೊಸಂಗಡಿಯಲ್ಲಿ ಹೋಟೆಲ್ ನೌಕರನಾಗಿದ್ದರು. ನಿನ್ನೆ ಮಧ್ಯಾಹ್ನ  1 ಗಂಟೆ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ  ವಾಮಂಜೂರು ಸೇತುವೆ ಬಳಿ ಸರ್ವೀಸ್ ರಸ್ತೆಯ ದ್ವಾರದಲ್ಲಿ ಅಪಘಾತವುಂಟಾಗಿದೆ. ಐಮಾನುಲ್ಲ ಚಲಾಯಿಸುತ್ತಿದ್ದ ಬೈಕ್ ಟಿಪ್ಪರ್ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಟಿಪ್ಪರ್ ಲಾರಿ ಹೊಸಂಗಡಿಯಿಂದ ಉಪ್ಪಳ ಭಾಗಕ್ಕೆ …

ಮುಂಜಾನೆ ನಡೆದ ಭೀಕರ ಘಟನೆ: ಯುವಕನನ್ನು ಕಡಿದು ಬರ್ಬರ ಕೊಲೆ; ಕೊಲೆಗಾರರಿಗಾಗಿ ತನಿಖೆ ತೀವ್ರ

ತಲಪಾಡಿ: ಬೈಕ್‌ನ್ನು ತಡೆದು ನಿಲ್ಲಿಸಿ ಯುವಕನನ್ನು ತಂಡವೊಂದು ಇರಿದು ಕೊಲೆಗೈದ ಘಟನೆ ತೊಕ್ಕೊಟ್ಟುನಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಮೂಲತಃ ಕುದ್ರೋಳಿ ನಿವಾಸಿ ಹಾಗೂ ಕಳೆದ ಹಲವಾರು ವರ್ಷಗಳಿಂದ ತಲಪಾಡಿ ಬಳಿಯ ಉಚ್ಚಿಲ ಅಜ್ಜಿನಡ್ಕ ಮುಳ್ಳುಗುಡ್ಡೆಯಲ್ಲಿ ವಾಸವಾಗಿರು ಆರೀಫ್ ಹುಸೈನ್ ಯಾನೆ ಟ್ಯಾಬ್ಲೆಟ್ ಆರೀಫ್ (42)ನನ್ನು ಬರ್ಬರವಾಗಿ ಕೊಲೆಗೈಯ್ಯಲಾಗಿದೆ. ಮಂಗಳೂರಿನ ಧಕ್ಕೆಯಲ್ಲಿ ಮೀನು ವ್ಯಾಪಾರಿಯಾಗಿರುವ ಆರೀಫ್ ಹುಸೈನ್ ಇಂದು ಮುಂಜಾನೆ ಬೈಕ್‌ನಲ್ಲಿ ಮಂಗಳೂರಿಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ತೊಕ್ಕೊಟ್ಟು ಫ್ಲೈಓವರ್‌ಗೆ ತಲುಪಿದಾಗ ಕಾರಿನಲ್ಲಿ ತಲುಪಿದ ತಂಡವೊಂದು ಬೈಕನ್ನು …

ಹಳದಿ ಕಾಮಾಲೆ: ನೆಲ್ಕಳ ನಿವಾಸಿ ನಿಧನ

ಕಾಸರಗೋಡು: ವಿದ್ಯಾನಗರ ನೆಲ್ಕಳ ಶ್ರೀ ಅಯ್ಯಪ್ಪ ಭಜನಾ ಮಂದಿರ ಸಮೀಪದ ಸೆಕೆಂಡ್ ಕ್ರಾಸ್ ರಸ್ತೆಯ ನಿವಾಸಿ ಕೆ.ಜಿ. ಪ್ರಸಾದ್ ಕುಮಾರ್ (52) ನಿಧನ ಹೊಂದಿ ದರು. ಹಳದಿ ಕಾಮಾಲೆ ಹಿನ್ನೆಲೆ ಯಲ್ಲಿ ಕಳೆದ ಒಂದು ವಾರದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಲ್ಲಿದ್ದರು. ನಿನ್ನೆ ಸಂಜೆ ನಿಧನ ಸಂಭ ವಿಸಿದೆ. ದಿ| ಗೋಪಾಲಕೃಷ್ಣನ್- ಸಬಿತ ದಂಪತಿ ಪುತ್ರನಾಗಿದ್ದಾರೆ. ಮೃತರು ತಾಯಿ, ಸಹೋದರರಾದ ಜೋಗೀಂದ್ರನಾಥ್, ಹೇಮಚಂ ದ್ರನ್, ಶಿವಪ್ರಕಾಶ್, ಸಹೋದರಿ ಜಯಶ್ರೀ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಇನ್ನು ಅಬ್ಬರದ ಪ್ರಚಾರ ದಿನಗಳು: ಜಿಲ್ಲೆಯಲ್ಲಿ 32 ಮಂದಿ ಸೇರಿದಂತೆ ರಾಜ್ಯದಲ್ಲಿ 890 ಅಭ್ಯರ್ಥಿಗಳು

ಕಾಸರಗೋಡು: ಕೇರಳ ವಿಧಾನ ಸಭೆಗೆ ಎಪ್ರಿಲ್ 9ರಂದು ನಡೆಯಲಿರುವ ಚುನಾವಣೆಗೆ ಸಲ್ಲಿಸಿರುವ ನಾಮಪತ್ರ ಗಳನ್ನು ಹಿಂಪಡೆಯುವ ಪ್ರಕ್ರಿಯೆಗಳು ನಿನ್ನೆ ಪೂರ್ಣಗೊಂಡಿರುವಂತೆಯೇ ಅಂತಿಮ ಚುನಾವಣಾ ಕಣದಲ್ಲಿ  ಕಾಸರ ಗೋಡು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 32 ಅಭ್ಯರ್ಥಿಗಳಿದ್ದಾರೆ. ಅದೇ ರೀತಿ ರಾಜ್ಯದಲ್ಲಿ ಒಟ್ಟು 140 ವಿಧಾನಸಭಾ  ಕ್ಷೇತ್ರದಲ್ಲಿ 890 ಮಂದಿ ಉಳಿದುಕೊಂಡಿದ್ದಾರೆ. ಈಬಾರಿ ಒಟ್ಟು 1254 ಮಂದಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರಗಳ ಸೂಕ್ಷ್ಮ ಪರಿಶೀಲನೆ ಬಳಿಕ ರಾಜ್ಯದಲ್ಲಿ ೯೮೫ ಮಂದಿ ಅಭ್ಯರ್ಥಿಗಳು ಉಳಿದುಕೊಂಡಿದ್ದರು. ಇದರಲ್ಲಿ 95 ಮಂದಿ ನಿನ್ನೆ …

ಯುದ್ದದ ನಡುವೆ ದರ ಏರಿಕೆಗೆ ಬ್ರೇಕ್ ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಕಡಿತಗೊಳಿಸಿದ ಕೇಂದ್ರ ಸರಕಾರ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಲ್ಭಣಿಸಿರುವ ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಭೀತಿಯಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕಚ್ಛಾ ತೈಲ ದರ ಏರಿಕೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ರಾಷ್ಟ್ರೀಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಗಗನಕ್ಕೇರದಂತೆ ತಡೆಯಲು ಕೇಂದ್ರ ಸರಕಾರ ಮಹತ್ತರ ಕ್ರಮ ಕೈಗೊಂಡಿದ್ದು ಇದರಂತೆ ಪೆಟ್ರೋಲ್ ಮತ್ತು ಡೀಸೆಲ್ ಇತ್ಯಾದಿ ಇಂಧನ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (ಎಸ್‌ಎಇಡಿ)ವನ್ನು ಕಡಿತಗೊಳಿಸಿದೆ. ಜಾಗತಿಕವಾಗಿ  ತೈಲ ಪೂರೈಕೆ ಯಲ್ಲಿ  ವ್ಯತ್ಯಯ ಉಂಟಾಗುವ ಆತಂಕವಿದ್ದರೂ ಇಂಧನಗಳ ಸುಂಕ ಕಡಿತಗೊಳಿಸಿದ ಕೇಂದ್ರ ಸರಕಾರದ …

ಕಾಸರಗೋಡಿಗೆ ಕಾರಿನಲ್ಲಿ ಸಾಗಿಸುತ್ತಿದ್ದ 285 ಲೀಟರ್ ಕರ್ನಾಟಕ ಮದ್ಯ ವಶ: ಸಾಗಾಟಗಾರ ಪರಾರಿ

ಕಾಸರಗೋಡು: ಕಾಸರಗೋಡು ಭಾಗಕ್ಕೆ ಕಾರಿನಲ್ಲಿ ಸಾಗಿಸುತ್ತಿದ್ದ 285.12 ಲೀಟರ್ ಕರ್ನಾಟಕ ಮದ್ಯವನ್ನು  ಅಬಕಾರಿ ಅಧಿಕಾರಿಗಳು ವಶಪಡಿಸಿ ಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಕಾರಿನಲ್ಲಿದ್ದ ವ್ಯಕ್ತಿ ಓಡಿ ಪರಾರಿಯಾ ಗಿದ್ದಾನೆ. ಆತನ ಪತ್ತೆಗಾಗಿ  ತನಿಖೆ ತೀವ್ರ ಗೊಳಿಸಲಾಗಿದೆ.  ಇಲೆಕ್ಷನ್ ಸ್ಪೆಷಲ್ ಡ್ರೈವ್‌ನಂಗವಾಗಿ ಕಾಸರಗೋಡು ಅಬಕಾರಿ ಸ್ಪೆಷಲ್ ಸ್ಕ್ವಾಡ್‌ನ ಎಕ್ಸೈಸ್ ಪ್ರಿವೆಂಟೀವ್ ಆಫೀಸರು ರಂಜಿತ್ ಕೆ.ವಿನೇತೃತ್ವದ ತಂಡ ನಿನ್ನೆ ಮೊಗ್ರಾಲ್ ಪುತ್ತೂರಿನಲ್ಲಿ ನಡೆಸಿದ ಕಾರ್ಯಾಚರಣೆ ವೇಳ ಮದ್ಯ ಸಾಗಾಟ ಪತ್ತೆಯಾಗಿದೆ. ಕುಂಬಳೆ ಭಾಗದಿಂದ ಬಂದ ಕಾರನ್ನು ಅಬಕಾರಿ ಅಧಿಕಾರಿಗಳು ತಡೆದು ನಿಲ್ಲಿಸಿದ್ದು, …

ಮಂಜೇಶ್ವರದ ವಿವಿಧೆಡೆ ಕರ್ನಾಟಕ ಬಿಜೆಪಿ ಮುಖಂಡರಿಂದ ಮತ ಯಾಚನೆ

ಉಪ್ಪಳ: ವಿಧಾನ ಸಭಾ ಕ್ಷೇತ್ರದ ಚುನಾವಣೆಯ ಕಾವು ಬಿರುಸುಗೊಂಡಿರುವAತೆ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ ಸುರೇಂದ್ರನ್‌ರ ಪರ ಪ್ರಚಾರಾರ್ಥವಾಗಿ ಕರ್ನಾಟಕದ ಬಿಜೆಪಿ ಮುಖಂಡರು ಮಂಜೇಶ್ವರ ಮಂಡಲದಲ್ಲಿ ನಿನ್ನೆ ವಿವಿಧೆಡೆ ಮತಯಾಚನೆ ನಡೆಸಿದರು. ಮಂಗಲ್ಪಾಡಿಯ ಹೇರೂರಿನಲ್ಲಿ, ಪೈವಳಿಕೆ ಪಂಚಾಯತ್‌ನ ತಾಳ್ತಾಜೆ ಪರಿಶಿಷ್ಟ ವರ್ಗದ ಕಾಲನಿಗೆ ಬಿಜೆಪಿ ಕಾರ್ಯಕರ್ತರ ಜೊತೆ ಕರ್ನಾಟಕ ಮಾಜಿ ಸಚಿವ ಅಂಗಾರ ಭೇಟಿ ಮಾಡಿ ಮತಯಾಚನೆ ನಡೆಸಿದರು. ಈ ವೇಳೆ ಪಂಚಾಯತ್ ಸದಸ್ಯ ರಾಮ ಏದಾರ್, ಗಣೇಶ ಚೇರಾಲು, ಕಾರ್ಯಕರ್ತರು ಉಪಸ್ಥಿತ …

ಐಕ್ಯರಂಗ ಪೈವಳಿಕೆ ಪಂಚಾಯತ್ ಚುನಾವಣಾ ಸಮಾವೇಶ

ಪೈವಳಿಕೆ: ವಿಧಾನಸಭಾ ಚುನಾ ವಣೆಯಲ್ಲಿ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಐಕ್ಯ ಪ್ರಜಾಪ್ರಭುತ್ವ ರಂಗದ ಅಭ್ಯರ್ಥಿ ಎ.ಕೆ.ಎಂ. ಅಶ್ರಫ್‌ರ ವಿಜಯಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ದುಡಿಯಬೇಕೆಂದು ಜಿಲ್ಲಾ ಪಂಚಾಯತ್ ಸದಸ್ಯ ಸೋಮ ಶೇಖರ ಜೆ.ಎಸ್. ಹೇಳಿದರು. ಪೈವಳಿಕೆ ಪಂ. ಯು.ಡಿ. ಎಫ್. ಚುನಾವಣಾ ಸಮಾವೇಶ ಉದ್ಘಾ ಟಿಸಿ ಅವರು ಮಾತನಾಡಿದರು. ಯು.ಡಿ.ಎಫ್. ಪಂ. ಸಮಿತಿ ಚೆಯರ್‌ಮ್ಯಾನ್ ವಸಂತ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಯು.ಡಿ.ಎಫ್. ಕ್ಷೇತ್ರ ಸಂಚಾಲಕ ಆಸೀಸ್ ಮರಿಕ್ಕೆ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಗಳಾದ ಡಿ.ಎಂ ಕೆ ಮೊಹಮ್ಮದ್, ಲಕ್ಷ್ಮಣ …

ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ 32 ಮಂದಿ ಸ್ಪರ್ಧಾಕಣದಲ್ಲಿ

ಕಾಸರಗೋಡು: ವಿಧಾನಸಭಾ ಚುನಾವಣೆಯ ಜಿಲ್ಲೆಯ 5 ಮಂಡಲಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಸಂಖ್ಯೆ ೩೨ಕ್ಕೆ ಸೀಮಿತಗೊಂಡಿದೆ. ನಿನ್ನೆ ನಾಮಪತ್ರ ಹಿಂತೆಗೆಯಲು ಕೊನೆಯ ದಿನವಾಗಿದ್ದು, ಆ ಬಳಿಕ ಸ್ಪರ್ಧಾಕಣದಲ್ಲಿ 32 ಮಂದಿ ಉಳಿದುಕೊಂಡಿದ್ದಾರೆ. ಅತ್ಯಂತ ಹೆಚ್ಚು ಮಂದಿ ಸ್ಪರ್ಧಾಕಣದಲ್ಲಿ ಇರುವುದು ಮಂಜೇಶ್ವರ ಮಂಡಲದಲ್ಲಾಗಿದೆ. ಇಲ್ಲಿ 11 ಮಂದಿ ಸ್ಪರ್ಧಾಳುಗಳಿದ್ದರೆ, ಕಾಞಂಗಾಡ್ ಮಂಡಲದಲ್ಲಿ ಅತ್ಯಂತ ಕಡಿಮೆ (4) ಸ್ಪರ್ಧಾಳುಗಳಿದ್ದಾರೆ. ಮಂಜೇಶ್ವರದಲ್ಲಿ ಮೂರು ಮಂದಿ ನಾಮಪತ್ರ ಹಿಂತೆಗೆದಿದ್ದಾರೆ. ಎಸ್‌ಡಿಪಿಐಯ ಅಭ್ಯರ್ಥಿ ಕೆ.ಎಂ. ಅಶ್ರಫ್, ಸ್ವತಂತ್ರ ಅಭ್ಯರ್ಥಿಗಳಾದ ಮುಹಮ್ಮದ್ ರಫೀಕ್, ಎನ್. ಕೇಶವ ನಾಯಕ್ …

ಎಸ್‌ಪಿನಗರ- ಹಿದಾಯತ್‌ನಗರ ರಸ್ತೆ ನವೀಕರಣೆ: ಧೂಳಿನ ಸಮಸ್ಯೆಗೆ ಪರಿಹಾರ ಡಾಮರೀಕರಣಕ್ಕೆ ಚಾಲನೆ

ವಿದ್ಯಾನಗರ: ಊರಿನಲ್ಲಿ ಉಂಟಾಗಿರುವ ಧೂಳಿನ ಸಮಸ್ಯೆಗೆ ಮೋಕ್ಷ ಉಂಟಾಯಿತು. ಎಸ್‌ಪಿನಗರ- ಹಿದಾಯತ್‌ನಗರ- ಕೋಪ ರಸ್ತೆ ಡಾಮರೀಕರಣ ಆರಂಭಗೊಂಡಿತು. ನವೀಕರಣೆಗಾಗಿ ಅಗೆದು ಹಾಕಿದ್ದ ರಸ್ತೆಯ ಕಾಮಗಾರಿ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಧೂಳಿನ ಸಮಸ್ಯೆಯಿಂದ ಜನರಿಗೆ  ತೊಂದರೆಯಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯೂ ಪ್ರಕಟಗೊಂಡಿತ್ತು. ಈ ಹಿನ್ನೆಲೆಯಲ್ಲಿ ಈಗ ಡಾಮರೀಕರಣದ ಕೆಲಸ ಆರಂಭಿಸಲಾಗಿದೆ. ವಾಹನಗಳು ಸಾಗುವಾಗ ಏಳುವ ಕಗ್ಗಲ್ಲಿನ ಹುಡಿಯ ಸಮಸ್ಯೆ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ವಾಸಿಸುತ್ತಿದ್ದವರಿಗೆ ಶ್ವಾಸ ಸಮಸ್ಯೆ, ಕಣ್ಣಿನ ಸಮಸ್ಯೆ, ರೋಗಾಣುಬಾಧೆ ಮೊದಲಾದ ಹಲವಾರು ಆರೋಗ್ಯ ಸಮಸ್ಯೆಗಳು ಕಂಡು …