ಪೇರಾಲ್‌ನಲ್ಲಿ ಎರಡು ದಶಕಗಳಿಂದ ದುರಸ್ತಿಯಾಗದೆ ರಸ್ತೆ ಶೋಚನೀಯ ಸ್ಥಿತಿಯಲ್ಲಿ ಅಭಿವೃದ್ಧಿಯೆಂದರೆ ಇದಾಗಿದೆಯೇ ಎಂದು ಪ್ರಶ್ನಿಸುತ್ತಿರುವ ನಾಗರಿಕರು
ಕುಂಬಳೆ: ನಾಡಿನ ಅಭಿವೃದ್ಧಿಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೂ ಜವಾಬ್ದಾ ರಿಯಿಲ್ಲವೇ ಎಂದು ನಾಗರಿಕರು ಪ್ರಶ್ನಿಸ ತೊಡಗಿ ದ್ದಾರೆ. ನಾಡಿನಲ್ಲಿ ಪರಿಹರಿಸ ಲಾಗದ ಹಲವು ಸಮಸ್ಯೆಗಳಿದ್ದು, ವಿಧಾನಸಭಾ ಚುನಾವಣೆಯ ಈ ಸಂದರ್ಭದಲ್ಲಿ ನಾಗರಿಕರು ಈ ಬಗ್ಗೆ ಪ್ರಶ್ನಿಸುತ್ತಿರುವು ದು ರಾಜಕೀಯ ಪಕ್ಷ ಗಳಿಗೆ ತಲೆನೋವಾಗಿ ಪರಿಣಮಿಸಿದೆ. ಕುಂಬಳೆ ಪೇರಾಲ್ ವಾರ್ಡ್‌ನ ‘ತಾಯಲ್’ ಶಾಲೆ ರಸ್ತೆಯನ್ನು ಸಂಚಾರಯೋಗ್ಯಗೊಳಿಸಬೇಕೆಂದು ನಾಗರಿಕರು ಕಳೆದ ಎರಡು ದಶಕಗಳಿಂದಲೇ ಬೇಡಿಕೆ ಮುಂದಿರಿಸಿ ದ್ದಾರೆ. ಹಲವು ವರ್ಷಗಳಿಂದ ಮರು ಡಾಮರೀಕರಣ ನಡೆಯದ ಈ ರಸ್ತೆ ಇದೀಗ ಶೋಚನೀಯ ಸ್ಥಿತಿಯಲ್ಲಿದೆ. …