ಅಭಿವೃದ್ಧಿಯಲ್ಲಿ ಮಾತ್ರವಲ್ಲ ಕ್ರೀಡಾರಂಗದಲ್ಲೂ ಮಂಜೇಶ್ವರ ಮಂಡಲದ ಕಡೆಗಣನೆ- ಪಿ.ಟಿ. ಉಷಾ

ಹೊಸಂಗಡಿ: ಮಂಜೇಶ್ವರ ಅಭಿವೃದ್ಧಿಯಲ್ಲಿ ಮಾತ್ರವಲ್ಲ, ಕ್ರೀಡಾರಂಗದಲ್ಲಿಯೂ ಸಂಪೂರ್ಣ ಕಡೆಗಣಿಸಲ್ಪಟ್ಟ ಮಂಡಲವಾಗಿದ್ದು, ಇಲ್ಲಿ ಪ್ರತಿಭಾವಂತ ಕ್ರೀಡಾಳುಗಳಿಗೆ ಅಭ್ಯಾಸ ನಡೆಸಲು ಮೈದಾನಗಳಿಲ್ಲ, ಅಂತಾ ರಾಷ್ಟ್ರೀಯ ಮಾನ್ಯತೆಯ ಸ್ಟೇಡಿಯಂ ಗಳಿಲ್ಲವೆಂದು ರಾಜ್ಯಸಭಾ ಸದಸ್ಯೆ, ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆ ಪದ್ಮಶ್ರೀ ಪಿ.ಟಿ. ಉಷಾ ನುಡಿದರು. ಹೊಸಂಗಡಿ ಪ್ರೇರಣಾದಲ್ಲಿ ಕ್ರೀಡಾಭಾರತಿ ಕಾಸರಗೋಡು ಹಮ್ಮಿಕೊಂಡ  ಯುವ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಭಾಷಾ ಪ್ರಾವೀಣ್ಯತೆಯ ಮಂಜೇಶ್ವರದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಳುಗಳು ತಯಾರಾಗುತ್ತಿಲ್ಲ, ಪ್ರತಿಭಾವಂತ ಯುವ ಕ್ರೀಡಾಪಟುಗಳಿಗೆ ತರಬೇತಿ ಲಭಿಸುತ್ತಿಲ್ಲವೆಂದು ಅವರು ಆಪಾದಿಸಿದರು. ಮೀರಾ ಟೀಚರ್ ಅಧ್ಯಕ್ಷತೆ …

ಬಿರುಸುಗೊಂಡ ಮಂಜೇಶ್ವರ ಕ್ಷೇತ್ರ ವಿವಿಧ ಪಕ್ಷ ಅಭ್ಯರ್ಥಿಗಳ ಪರ್ಯಟನೆ

ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ವಿವಿಧ ಪಕ್ಷಗಳ ಅಭ್ಯರ್ಥಿಗಳ ಬಿರುಸಿನ ಪ್ರಚಾರ ಮುಂದುವರಿಯುತ್ತಿದೆ. ಬಿಜೆಪಿಯ ಕೆ. ಸುರೇಂದ್ರನ್ ನಿನ್ನೆ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಮತದಾರರನ್ನು ಭೇಟಿಯಾದರು. ಸಂಜೆ ವೇಳೆ ಹನುಮಾನ್‌ನಗರ ತೀರ ಪ್ರದೇಶಕ್ಕೆ ಭೇಟಿ ನೀಡಿ ಮೀನುಗಾರರ ಸಮಸ್ಯೆ ಬಗ್ಗೆ ಆಲಿಸಿದರು.  ತೀವ್ರ ಕಡಲ್ಕೊರೆತ ಸಮಯದಲ್ಲೂ ಮೀನುಗಾರರು ತಮ್ಮ ಮನೆಗಳನ್ನು ಕಳೆದುಕೊಂಡಾಗಲೂ ತಿರುಗಿ ನೋಡದ ಶಾಸಕರಾಗಿದ್ದಾರೆ ಮಂಜೇಶ್ವರದಲ್ಲಿರುವುದೆಂದು ಸುರೇಂದ್ರನ್ ಆರೋಪಿಸಿದರು. ಬಿಜೆಪಿ ದಕ್ಷಿಣಕನ್ನಡ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, …

ಪತ್ನಿಯನ್ನು ಇರಿದು ಕೊಲೆಗೈಯ್ಯಲೆತ್ನ ತಡೆಯಲೆತ್ನಿಸಿದ ಪುತ್ರಿಗೂ ಗಾಯ

ಕಾಸರಗೋಡು: ಗೃಹಿಣಿಯನ್ನು ಇರಿದು ಕೊಲೆಗೈಯ್ಯಲೆತ್ನಿಸಿದ್ದು, ಈ ವೇಳೆ ಪುತ್ರಿಯೂ ಇರಿತದಿಂದ ಗಾಯ ಗೊಂಡಿದ್ದಾಳೆ. ಘಟನೆಯ ಬಳಿಕ ಬೇಕಲ ಪೊಲೀಸ್ ಠಾಣೆಯಲ್ಲಿ ಶರಣಾದ ಆರೋಪಿಗೆ ಹೃದಯಾಘಾತವುಂ ಟಾಗಿದ್ದು, ಈ ಹಿನ್ನೆಲೆಯಲ್ಲಿ ಆತನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಪಳ್ಳಿಕೆರೆ ಪಾಕಂ ಚೇರ್ಕಪ್ಪಾರ ಎಂಬಲ್ಲಿ ನಿನ್ನೆ ಮಧ್ಯಾಹ್ನ ಈ ಘಟನೆ ನಡೆದಿದೆ. ಚೇರ್ಕಪ್ಪಾರ ಮಞಂಗಾಡ್ ಅರ್ಚನ ನಿವಾಸ್‌ನ ಕೆ.ಎ. ಯಶೋಧ (67), ಪುತ್ರಿ ಶೈಜಿ ಮೋಳ್ (30) ಎಂಬಿವರು ಇರಿತದಿಂದ ಗಾಯಗೊಂಡಿದ್ದಾರೆ. ಇವರನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿ ಸಲಾಗಿದೆ. …