2.8 ಕಿಲೋ ಎಂಡಿಎಂಎ ವಶ: ಯುವತಿ ಸಹಿತ ಇಬ್ಬರ ಬಂಧನ
ಕಾಸರಗೋಡು: ಕಾಸರಗೋಡು ಜಿಲ್ಲಾ ಕ್ರೈಂ ಬ್ರಾಂಚ್ ಡಿವೈಎಸ್ಪಿಯಾ ಗಿದ್ದ ಟಿ. ಉತ್ತಮ್ ದಾಸ್‌ರ ನೇತೃತ್ವದಲ್ಲಿ ನಡೆದ ಕಾರ್ಯಾ ಚರಣೆಯಲ್ಲಿ ಭಾರೀ ಪ್ರಮಾಣದ ಮಾದಕವಸ್ತು ವಶಪಡಿಸಲಾಗಿದೆ. ಈ ಸಂಬಂಧ ಯುವತಿ ಸಹಿತ ಇಬ್ಬರನ್ನು ಬಂಧಿಸಲಾಗಿದೆ. ಮುಕ್ಕಂ ಪುಳಪೊ ಯಿಲ್ ಪುಲ್ಲಂಬಾಡಿ ಪರಂಬಿಲ್ ಪಿ. ಮುಹಮ್ಮದ್ ಹನೀಫ (36), ಕಲ್ಲಿಕೋಟೆ ಬೇಪೂರಿನ ರೈಹಾನತ್ (45) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಇವರ ಕೈಯಿಂದ 2.8 ಕಿಲೋ ಎಂಡಿಎಂಎ ವಶಪಡಿಸಲಾಗಿದೆ. ಕಲ್ಲಿಕೋಟೆ ರೂರಲ್ ಎಸ್ಪಿಗೆ ಲಭಿಸಿದ ಮಾಹಿತಿ ಯ ಆಧಾರದಲ್ಲಿ ನಾರ್ಕೋಟಿಕ್ ಸೆಲ್ …