ರಾಜ್ಯದಲ್ಲಿ ಬೆಳಿಗ್ಗಿನಿಂದಲೇ ಭರ್ಜರಿ ಮತದಾನ: ಮಂಜೇಶ್ವರ ಕಯ್ಯಾರಿನ 128ನೇ ಮತಗಟ್ಟೆಯಲ್ಲಿ ನಕಲಿ ಮತದಾನ ಆರೋಪ: ಓರ್ವ ಸೆರೆ
ತಿರುವನಂತಪುರ: ಕೇರಳ ವಿಧಾನ ಸಭಾ ಚುನಾವಣೆಗಿರುವ ಮತದಾನ ಇಂದು ಬೆಳಿಗ್ಗೆ 7 ಗಂಟೆಗೆ ಆರಂಭಗೊಂಡ ಕ್ಷಣದಿಂದಲೇ ರಾಜ್ಯದಾದ್ಯಂತವಾಗಿ ಭರ್ಜರಿ ಮತದಾನ ನಡೆಯುತ್ತಿದೆ. ಬೆಳಿಗ್ಗೆ 12.45 ಗಂಟೆ ವೇಳೆಗೆ ರಾಜ್ಯದಲ್ಲಿ ಶೇ. 40.80ರಷ್ಟು ಮತದಾನ ನಡೆದಿದೆ. ಇದೇ ಸಮಯದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಶೇ.39.50 ಮತದಾನ ನಡೆದಿದೆ. ರಾಜ್ಯದ ಒಟ್ಟು 140 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಭಾರೀ ಸಾಲುಗಳೇ ಗೋಚರಿಸಿದ್ದು ಇದು ಜನರು ಅತ್ಯುತ್ತಮ ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆಂಬುದನ್ನು ಸೂಚಿಸುತ್ತದೆ. ಮತದಾನ ಪ್ರಕ್ರಿಯೆ ಈತನಕ ಶಾಂತರೀತಿಯಲ್ಲಿ ಮುಂದುವರಿದಿದೆ. ಎಲ್ಲಾ ಮತಗಟ್ಟೆಗಳಲ್ಲೂ …