ಟ್ರಾಫಿಕ್ ರೆಗ್ಯುಲೇಟರಿ ಸಮಿತಿ ತೀರ್ಮಾನ ಕುಂಬಳೆಯಲ್ಲಿ ಜ್ಯಾರಿಯಾಗಲಿಲ್ಲ: ಮರ್ಚೆಂಟ್ಸ್ ಯೂತ್ ವಿಂಗ್ ಪ್ರತಿಭಟನೆಗೆ

ಕುಂಬಳೆ: ಟ್ರಾಫಿಕ್ ರೆಗ್ಯುಲೇಟರಿ ಸಮಿತಿಯ ತೀರ್ಮಾನಗಳು ಕುಂಬಳೆ ಯಲ್ಲಿ ಜ್ಯಾರಿಯಾಗದಿರುವುದಕ್ಕೆ ಮರ್ಚೆಂಟ್ ಯೂತ್ ವಿಂಗ್ ಪ್ರತಿಭಟಿಸಿದೆ. ಬಸ್ ಪ್ರಯಾಣಿಕರಿಗೆ, ವ್ಯಾಪಾರಿಗಳಿಗೆ ಸಂಕಷ್ಟ ತರುವ ಪರಿಷ್ಕಾರವನ್ನು ಪುನರ್ ಪರಿಶೀಲಿ ಸಬೇಕೆಂಬ ಕುಂಬಳೆ ಪಂಚಾಯತ್ ಆಡಳಿತ ಸಮಿತಿ ತೀರ್ಮಾನ ಕೂಡಾ ಜ್ಯಾರಿಯಾಗದಿ ರುವುದರಲ್ಲಿ ಸಭೆ ರೋಷಗೊಂಡಿದೆ. ಪೇರಾಲ್ ಕಣ್ಣೂರು, ಸೀತಾಂಗೋಳಿ, ಪೆರ್ಲ, ಸುಳ್ಯ, ಬದಿಯಡ್ಕ, ಮುಳ್ಳೇರಿಯ ಭಾಗಗಳಿಗೆ ತೆರಳುವ ಬಸ್‌ಗಳು ಪ್ರಯಾಣಿಕರ ಸೌಕರ್ಯಾರ್ಥ ಕುಂಬಳೆಯ ಮುರಿದು ತೆಗೆದ ಹಳೆಯ ಬಸ್ ನಿಲ್ದಾಣದಲ್ಲಿ ೫ ನಿಮಿಷ ನಿಲುಗಡೆ ಮಾಡಬೇಕೆಂದು ಪಂಚಾಯತ್ ಆಡಳಿತ …