ವಾಣಿಜ್ಯ ಅಡುಗೆ ಅನಿಲ ಬೆಲೆ ಹೆಚ್ಚಳ: ಕುಂಬಳೆಯಲ್ಲಿ ಕೆಎಚ್‌ಆರ್‌ಎಯಿಂದ ಪಂಜಿನ ಮೆರವಣಿಗೆ
ಕುಂಬಳೆ: ವಾಣಿಜ್ಯ ಅಗತ್ಯ ಗಳಿಗಾಗಿರುವ ಗ್ಯಾಸ್ ಸಿಲಿಂಡರ್‌ನ ಬೆಲೆ ಹೆಚ್ಚಿಸಿದ ಕೇಂದ್ರ ಸರಕಾರದ ನಿಲುವನ್ನು ಪ್ರತಿಭಟಿಸಿ ಕೇರಳ ಹೋಟೆಲ್ ಆಂಡ್ ರೆಸ್ಟೋರೆಂಟ್ ಅಸೋಸಿಯೇಶನ್ ಕುಂಬಳೆ ಯೂನಿಟ್ ಘಟಕ ಕುಂಬಳೆಯಲ್ಲಿ ಪಂಜಿನ ಮೆರವಣಿಗೆ ನಡೆಸಿತು. ಈ ವೇಳೆ ಮಾತನಾಡಿದ ಕೆಎಚ್‌ಆರ್‌ಎ ಜಿಲ್ಲಾ ಕಾರ್ಯದರ್ಶಿ ಬಿಜು ಚುಳ್ಳಿಕ್ಕರ ಸಿಲಿಂಡರ್‌ನ ಅಪರಿಮಿತ ಬೆಲೆ ಹೆಚ್ಚಳದಿಂದ ಹೋಟೆಲ್ ಆಹಾರ ಪದಾರ್ಥಗಳಿಗೆ ಬೆಲೆ ಹೆಚ್ಚಿಸಬೇಕಾದ ಸನ್ನಿವೇಶವಿದೆ ಎಂದು ಕೇಂದ್ರ ಸರಕಾರದ ಈ ನಿಲುವನ್ನು ಪ್ರತಿಭಟಿಸಿ ಹೋಟೆಲ್‌ಗಳನ್ನು ಮುಚ್ಚುವಂತಹ ಪ್ರತಿಭಟನೆಗಳನ್ನು ನಡೆಸಲಾಗುವುದೆಂದು ತಿಳಿಸಿದರು. ಪಂಜಿನ ಮೆರವಣಿಗೆಯನ್ನು …
Read more “ವಾಣಿಜ್ಯ ಅಡುಗೆ ಅನಿಲ ಬೆಲೆ ಹೆಚ್ಚಳ: ಕುಂಬಳೆಯಲ್ಲಿ ಕೆಎಚ್‌ಆರ್‌ಎಯಿಂದ ಪಂಜಿನ ಮೆರವಣಿಗೆ”