ರಾಜ್ಯದಲ್ಲಿ ಹೋಟೆಲ್, ಬೇಕರಿ ಬಂದ್ ಪೂರ್ಣ
ತಿರುವನಂತಪುರ: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆಯನ್ನು ಪ್ರತಿಭಟಿಸಿ ಹೋಟೆಲ್ ಆಂಡ್ ರೆಸ್ಟೋರೆಂಟ್ ಅಸೋಸಿ ಯೇಶನ್ ನೀಡಿರುವ ಆಹ್ವಾನದಂತೆ ರಾಜ್ಯದಲ್ಲಿ ಇಂದು ಹೋಟೆಲ್, ರೆಸ್ಟೋರೆಂಟ್‌ಗಳು, ಬೇಕರಿಗಳು ಮತ್ತು ಕ್ಯಾಂಟೀನ್‌ಗಳನ್ನು ಮುಚ್ಚುಗಡೆಗೊಳಿಸಿ ಮುಷ್ಕರ ನಡೆಸಲಾಗುತ್ತಿದೆ. ಇಂದು ಬೆಳಿಗ್ಗೆ ಆರಂಭಗೊಂಡಿರುವ ಮುಷ್ಕರ ದಿಂದ ರಾಜ್ಯದ ಹೋಟೆಲ್, ರೆಸ್ಟೋ ರಂಟ್ ಮತ್ತು ಬೇಕರಿ ವಲಯಗಳ ಎಲ್ಲಾ ವ್ಯವಹಾರಗಳು ಸ್ತಬ್ದಗೊಂಡಿದೆ. ಆನ್‌ಲೈನ್ ಮೂಲಕದ ಆಹಾರ ವಿತರಣೆಯೂ ಮೊಟಕುಗೊಂಡಿದೆ. ಇದರ ಪರಿಣಾಮ ಜನರು ಆಹಾರಕ್ಕಾಗಿ ತೀವ್ರ ಸಂಕಷ್ಟ ಎದುರಿಸಬೇಕಾಗಿ ಬಂದಿದೆ. ಇಂದಿನ ಮುಷ್ಕರಕ್ಕೆ ಕೇರಳ …