ಬೈಕ್- ಬಸ್ ಢಿಕ್ಕಿ ಹೊಡೆದು ಸಾರಣೆ ಕಾರ್ಮಿಕ ಮೃತ್ಯು

ಹೊಸದುರ್ಗ: ಅಂಬಲತ್ತರ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಇರಿಯದಲ್ಲಿ ಬಸ್- ಬೈಕ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟರು. ಮೂರನೇಮೈಲು ಪುದಂಗಾನಂ ವಟ್ಟಕ್ಕಯ ನಿವಾಸಿ ನಾರಾಯಣನ್‌ರ ಪುತ್ರ ರಾಘವನ್ (49) ಮೃತಪಟ್ಟವರು. ನಿನ್ನೆ ರಾತ್ರಿ 8.30ರ ವೇಳೆ ಕಾಞಂಗಾಡ್- ಪಾಣತ್ತೂರು ರಾಜ್ಯ ಹೆದ್ದಾರಿಯ  ಇರಿಯ ಬಂಗ್ಲಾವ್ ಸಮೀಪದಲ್ಲಿ ಅಪಘಾತ ಸಂಭವಿಸಿದೆ. ರಾಘವನ್ ಸಂಚರಿಸಿದ್ದ ಬೈಕ್ ಹಾಗೂ ಖಾಸಗಿ ಬಸ್ ಢಿಕ್ಕಿ ಹೊಡೆದು ಅಪಘಾತವುಂಟಾಗಿದೆ. ಕೂಡಲೇ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ.  ಸಾರಣೆ ಕಾರ್ಮಿಕನಾಗಿದ್ದಾರೆ. ಕೆಲಸ …