ಮುಖ್ಯಮಂತ್ರಿ ಸ್ಥಾನಕ್ಕೆ ವಿ.ಡಿ. ಸತೀಶನ್ ಮೊದಲ ಪರಿಗಣನೆ

ನವದೆಹಲಿ: ಕೇರಳದಲ್ಲಿ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಿರುವ ಚರ್ಚೆಗಳು  ಬಿರುಸಿನಿಂದ ನಡೆಯುತ್ತಿರುವಂತೆಯೇ ಮುಖ್ಯಮಂತ್ರಿ ಸ್ಥಾನ ವಿ.ಡಿ. ಸತೀಶನ್‌ರಿಗೆ ಲಭಿಸುವ ಸಾಧ್ಯತೆ ಇದೆಯೆಂದು ಸಂಬಂಧಪಟ್ಟ ವರದಿಗಳು ಸೂಚಿಸುತ್ತಿವೆ.  ಹೆಚ್ಚಿನ ಶಾಸಕರು ಕೆ.ಸಿ. ವೇಣುಗೋಪಾಲ್‌ರ ಪರ ಬೆಂಬಲ ವ್ಯಕ್ತಪಡಿಸಿದ್ದರೂ ಮುಖ್ಯಮಂತ್ರಿ ಸ್ಥಾನದ ರೇಸ್‌ನಿಂದ ಸ್ವಯಂ ಆಗಿ ಹಿಂದಕ್ಕೆ ಸರಿಯುವಂತೆ ಕಾಂಗ್ರೆಸ್ ಹೈಕಮಾಂಡ್ ಕೆ.ಸಿ. ವೇಣುಗೋಪಾಲ್‌ರ ಮೇಲೆ ಒತ್ತಡ ಹೇರುತ್ತಿರುವುದಾಗಿಯೂ ವರದಿಗಳು ಸೂಚಿಸುತ್ತಿವೆ. ಇದೇ ಸಂದರ್ಭದಲ್ಲಿ ಮುಸ್ಲಿಂ ಲೀಗ್ ಮತ್ತು ಯುಡಿಎಫ್‌ನ ಇತರ ಹೆಚ್ಚಿನ ಘಟಕ ಪಕ್ಷಗಳು ವಿ.ಡಿ. ಸತೀಶನ್‌ರಿಗೆ ಬೆಂಬಲ ಸೂಚಿಸಿವೆ.   …

ದೈವದ ಪಾತ್ರಿ ನಿಧನ

ಬೆಳ್ಳೂರು: ಬಸ್ತಿ ಭೂತಕೊಟ್ಯ ನಿವಾಸಿ ನಾರಾಯಣ ಗೌಡ (60) ನಿಧನ ಹೊಂದಿದರು. ಇವರು ಬೆಳ್ಳೂರು ಗ್ರಾಮ ದೈವದ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ ಇಂದಿರ, ಮಕ್ಕಳಾದ ಭರತ್ , ಅಜಿತ್, ಕವಿತ, ಅಳಿಯ ರಂಜಿತ್ ಉರಿಕ್ಯಾಡಿ, ಸಹೋದರಿ ಕಮಲ ಹಾಗೂ ಅಪಾರ ಬಂಧು ಮಿತ್ರರನ್ನು ಆಗಲಿದ್ದಾರೆ. ಸಹೋದರರಾದ ಐತಪ್ಪ, ರಾಮಣ್ಣ, ಸಹೋದರಿ ಪುಟ್ಟಕ್ಕ ಈ ಹಿಂದೆ ನಿಧನರಾಗಿದ್ದಾರೆ.

ಅಸೌಖ್ಯ: ಯುವತಿ ನಿಧನ

ಕುಂಬಳೆ: ಕುಂಟಂಗೇರಡ್ಕ ಲಕ್ಷ್ಯಂವೀಡುನಲ್ಲಿ ವಾಸಿಸುತ್ತಿದ್ದ ಯುವತಿ ಅಸೌಖ್ಯ ತಗಲಿ ನಿಧನ ಹೊಂದಿದರು. ದಿ| ಮೊಹಮ್ಮದ್ ಕುಂಞಿ- ಮುತ್ತು ಬೀವಿ ದಂಪತಿ ಪುತ್ರಿ ನೂರ್‌ಜಹಾನ್ (40) ನಿಧನ ಹೊಂದಿದವರು. ಅಸೌಖ್ಯ ತಗಲಿ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಮೃತರು ತಾಯಿ, ಪತಿ ಅಶ್ರಫ್, ಸಹೋದರರಾದ ಹಂಸ, ಮೊಯ್ದೀನ್ ಕುಂಞಿ, ಅಬ್ದುಲ್ ರಹ್ಮಾನ್, ಇಸ್ಮಾಯಿಲ್,  ಸಹೋ ದರಿಯರಾದ ಸೈನಬ, ಸಫಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ಅಶ್ರಫ್, ಸಹೋದರಿಯರಾದ ಸಫೀನ, ನೆಬೀಸ, ಫಾತಿಮ ಈ ಹಿಂದೆ …

ನೆಡುಂಕಂಡಂನಲ್ಲಿ 3ನೇ ಕೊಲೆ ಕೃತ್ಯ? ಮನೆ ಪರಿಸರದಿಂದ ತಲೆಬುರುಡೆ ಪತ್ತೆ; ನಾಪತ್ತೆಯಾದ ಮ್ಯಾಥ್ಯುವಿನದ್ದೆಂದು ಶಂಕೆ

ಇಡುಕ್ಕಿ: ನೆಡುಂಕಂಡಂನಲ್ಲಿ ತಾಯಿ ಹಾಗೂ ಸಹೋದರನನ್ನು ಕೊಂದು ಹೂತುಹಾಕಿದ ಘಟನೆಯಲ್ಲಿ ಸೆರೆಯಾದ ಸಜಿಯ ಮನೆ ಪರಿಸರದಿಂದ ಇತ್ತೀಚೆಗೆ ಮಣ್ಣು ತೆಗೆದು ನಡೆಸಿದ ತಪಾಸಣೆಯಲ್ಲಿ ಜೀರ್ಣಗೊಂಡ ಅಸ್ತಿಪಂಜರ ಹಾಗೂ ಬಟ್ಟೆಬರೆಗಳನ್ನು ಪತ್ತೆಹಚ್ಚಲಾಗಿದೆ. ೮ ವರ್ಷದ ಹಿಂದೆ ನಾಪತ್ತೆಯಾದ ತಂದೆ ಮ್ಯಾಥ್ಯುರ ಮೃತದೇಹದ ಅವಶಿಷ್ಟಗಳು ಇದಾಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಮ್ಯಾಥ್ಯುವನ್ನು ಕೂಡಾ ಸಜಿ ಕೊಲೆಗೈದು ಹೊಂಡ ತೋಡಿ ಹೂತು ಹಾಕಿರಬೇಕೆಂದು ಪೊಲೀಸರು ತಿಳಿಸುತ್ತಾರೆ. ಈ ಮೊದಲು ಹಟ್ಟಿ ಇದ್ದ ಭಾಗದಲ್ಲಿ ಲಭಿಸಿದ ಎಲುಬು ಆದ ಕಾರಣ ಇದು ಯಾವುದಾದರೂ ದನದ …

ನಿರಂತರ ಹೋರಾಟ ಫಲ ಬೀರಲಿಲ್ಲ: ಚೆರ್ಕಳ-ಅಡ್ಕಸ್ಥಳ ರಸ್ತೆ ಬೇಸಿಗೆ ಮಳೆಗೆ ಕೆಸರುಗದ್ದೆಯಾಗಿ ಮಾರ್ಪಾಡು

ಬದಿಯಡ್ಕ: ನಿರಂತರ ಜನರ ಪ್ರತಿಭಟನೆ, ಬೇಡಿಕೆ ಉಂಟಾಗಿದ್ದರೂ ಯಾವುದೇ ಫಲವಿಲ್ಲದ ಚೆರ್ಕಳ- ಅಡ್ಕಸ್ಥಳ ರಸ್ತೆ ಈಗ ಸಂಚಾರಕ್ಕೆ ಅಯೋಗ್ಯವಾದ ಸ್ಥಿತಿಗೆ ತಲುಪಿದೆ. ಈ ರಸ್ತೆಯ ಪಳ್ಳತ್ತಡ್ಕದಲ್ಲಿ ಬೃಹತ್ ಹೊಂಡ ಸೃಷ್ಟಿಯಾಗಿ ವಾಹನಗಳಿಗೆ ಸಂಚಕಾರ ಉಂಟುಮಾಡುತ್ತಿದೆ. ಚೆರ್ಕಳ- ಅಡ್ಕಸ್ಥಳ ರಸ್ತೆ ದುರಸ್ತಿಗೊಳಿ ಸಬೇಕೆಂದು ವಿವಿಧ ರಾಜಕೀಯ ಪಕ್ಷಗಳು, ವಿವಿಧ ಸಂಘಸಂಸ್ಥೆಗಳು ಹಲವು ಬಾರಿ ಹೋರಾಟ ನಡೆಸಿದ್ದವು. ಆದರೆ ಶಾಸಕರಿಂದಾಗಲೀ, ಲೋಕೋ ಪಯೋಗಿ ಇಲಾಖೆಯಿಂದಾಗಲೀ ಸೂಕ್ತ ಕ್ರಮ ಇದುವರೆಗೂ ಉಂಟಾಗಲಿಲ್ಲ. ರಸ್ತೆ ದುರಸ್ತಿಗೆ ಟೆಂಡರ್ ಕರೆಯಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ …

ಭಾರೀ ಬಿಸಿ: ಮತ್ಸ್ಯ ಸಂಪತ್ತು ವಂಶನಾಶ; ಬೆದರಿಕೆಯಲ್ಲಿ; ಮೀನುಕಾರ್ಮಿಕರಿಗೆ ಸಂಕಷ್ಟ

ಕುಂಬಳೆ: ಬೇಸಿಗೆ ಬಿಸಿಯಲ್ಲಿ ಸಮುದ್ರತೀರ ವಲಯ ಬರದತ್ತ ಸಾಗುತ್ತಿದೆ. ಮೀನುಕಾರ್ಮಿಕರು ಇಷ್ಟರ ಮಟ್ಟಿಗೆ ಬರಕ್ಕೆ ತುತ್ತಾದ, ಸಂದಿಗ್ದತೆಗೀಡಾದ ಕಾಲ ಇರಲಿಲ್ಲವೆಂದು ಮೀನು ಕಾರ್ಮಿಕರು ತಿಳಿಸುತ್ತಾರೆ. ಕಳೆದ ವರ್ಷದ ಮಳೆಗಾಲ, ಟ್ರೋಲಿಂಗ್ ನಿಷೇಧ ಎಲ್ಲ ಮುಗಿದು ಸಮುದ್ರಕ್ಕೆ ತೆರಳಿದ ಮೀನು ಕಾರ್ಮಿಕರು ನಿರಾಶೆಹೊಂದಿದ್ದರು.  ಮೀನಿನ ಲಭ್ಯತೆಯ ಕೊರತೆ, ಕಡಲಬ್ಬರ, ಅಸಹನೀಯವಾದ ಬಿಸಿಯಿಂದ ಮೀನು ಸಂಪತ್ತು ನಾಶವಾದ ಹಿನ್ನೆಲೆಯಲ್ಲಿ ಈ ವರ್ಷ ಸಮುದ್ರತೀರ ನಿವಾಸಿಗಳು ಉಪವಾಸದಲ್ಲಿದ್ದಾರೆ. ಮೀನುಗಾರಿಕೆ ಯನ್ನು ಕೈಬಿಡುವ ಸನ್ನಿವೇಶ ಪ್ರಸ್ತುತ ಇದೆ ಎಂದು ಪರಂಪರಾಗತ ಮೀನುಕಾರ್ಮಿಕರು ನುಡಿಯುತ್ತಾರೆ.  …

ಬರಡು ನೆಲದಲ್ಲಿ ಕೃಷಿ ಸಾಧನೆ: ಡಾ. ರತ್ನಾಕರ ಮಲ್ಲಮೂಲೆಯವರಿಗೆ ವನಮಿತ್ರ ಪುರಸ್ಕಾರ

ನೀರ್ಚಾಲು : ಇಲ್ಲಿಗೆ ಸಮೀಪದ ಬುರುಡಡ್ಕ ಎಂಬ ಬರಡು ಬಂಜರು ನೆಲವನ್ನು ಹದಗೊಳಿಸಿ, ಕೃಷಿಭೂಮಿಯನ್ನಾಗಿ ಪರಿವರ್ತಿಸಿದ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಹಾಗೂ ಸಂಶೋಧಕ ಡಾ. ರತ್ನಾಕರ ಮಲ್ಲಮೂಲೆ ಕೇರಳ ಸರಕಾರದ ಅರಣ್ಯ ಇಲಾಖೆ ನೀಡುವ ಪ್ರತಿಷ್ಠಿತ ವನಮಿತ್ರ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಇವರು ಮೂರ್ನಾಲ್ಕು ವರ್ಷಗಳ ಕಠಿಣ ಪರಿಶ್ರಮದಿಂದ ಬನವಾಸಿ ಎಂಬ ಹೆಸರಿನಲ್ಲಿ ರೂಪಿಸಿದ ಈ ಸ್ಥಳ ಈಗ ಹಸಿರಿನಿಂದ ಕಂಗೊಳಿಸುತ್ತಿದ್ದು, ಪರಿಸರ ಜಾಗೃತಿಯ ಸ್ಥಳವಾಗಿ ರೂಪುಗೊಂಡಿದೆ. ಅದೇ ರೀತಿಯಲ್ಲಿ ಇವರ ಪರಿಸರಸ್ನೇಹಿ ಮನೆ ಜನರ …

ಹಿರಿಯ ಕೃಷಿಕ ನಿಧನ

ಮಂಜೇಶ್ವರ: ಪಾವೂರು ರೆಂಜ ಪಡ್ಪು ನಿವಾಸಿ ಹಿರಿಯ ಕೃಷಿಕ ಲಕ್ಷ್ಮಣ ಮೂಲ್ಯ (70) ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಲೀಲಾ, ಮಕ್ಕಳಾದ ದಿನೇಶ್, ಶಶಿಕಲಾ, ವಿನೋದ್ (ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ), ಸೊಸೆಯಂದಿರಾದ ವಸಂತಿ, ಕಮಲಾಕ್ಷಿ. ಕೆ (ಮಂಜೇಶ್ವರ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ), ಅಳಿಯ ನಾರಾಯಣ, ಸಹೋದರಿ ಯರಾದ ಲೀಲಾ, ಸುಶೀಲ, ಸಹೋದರ ಶ್ರೀಧರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿ ದ್ದಾರೆ. ಓರ್ವ ಸಹೋದರ ವಾಮನ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರ …

ವಾಮಂಜೂರು ಶ್ರೀ ಶಾಸ್ತಾವೇಶ್ವರ ಕ್ಷೇತ್ರ ಜೀರ್ಣೋದ್ಧಾರಕ್ಕೆ ಚಾಲನೆ

ಮಂಜೇಶ್ವರ: ವಾಮಂಜೂರು ಶ್ರೀ ಶಾಸ್ತಾವೇಶ್ವರ ದೇವಸ್ಥಾನದ ಜೀರ್ಣೋದ್ದಾರ ಕಾರ್ಯದ ಪ್ರಥಮ ಹಂತದ ಕಾಮಗಾರಿಗಳ ಪ್ರಯುಕ್ತ ಗುದ್ದಲಿಪೂಜೆಯನ್ನು ನಿನ್ನೆ ಬೆಳಗ್ಗೆ ಐಲ ಕ್ಷೇತ್ರದ ಆಡಳಿತ ಮೊಕ್ತೇಸರ, ಪುನರ್ ನಿರ್ಮಾಣ ಸಮಿತಿ ಸಲಹೆಗಾರ ಕೋಡಿಬೈಲು ನಾರಾಯಣ ಹೆಗ್ಡೆ ನೆರವೇರಿಸಿದರು.ಗುರುನರಸಿಂಹ ದತ್ತಿ ಮಂಡಳಿಯ ಸದಸ್ಯರು, ಸೇವಾ ಸಮಿತಿ ಸದಸ್ಯರು, ಪುನರ್ ನಿರ್ಮಾಣ ಮಂಡಳಿಯ ಸದಸ್ಯರು ಹಾಗೂ ಊರ ಭಕ್ತರು ಭಾಗವಹಿಸಿದರು.

ಸ್ಕೂಟರ್‌ನಿಂದ ಎಸೆಯಲ್ಪಟ್ಟು ಗಾಯಗೊಂಡಿದ್ದ ಮಹಿಳೆ ಮೃತ್ಯು

ಹೊಸದುರ್ಗ: ಸ್ಕೂಟರ್‌ನಿಂದ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಯುವತಿ ಮೃತಪಟ್ಟರು. ಅಂಬಲತ್ತರ ಪರಕ್ಕಳಾಯಿ ವಲಿಯಡ್ಕದ ಪಿ. ಕುಂಞಂಬುರ ಪತ್ನಿ ಶೋಭ (48) ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪತಿಯ ಸಹೋದರ ಅರ್ಜುನ್ ಚಲಾಯಿಸುತ್ತಿದ್ದ ಸ್ಕೂಟರ್‌ನ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಮಧ್ಯೆ ಸೋಮವಾರ ಇರಿಯ ಲಾಲೂರಿನಲ್ಲಿ ಅಪಘಾತ ಸಂಭವಿಸಿತ್ತು. ಮಕ್ಕಕ್ಕೋಡನ್ ಕಣ್ಣನ್- ಮೂಳನೇ ವೀಟಿಲ್ ನಾರಾಯಣಿ ದಂಪತಿ ಪುತ್ರಿಯಾಗಿದ್ದಾರೆ ಶೋಭಾ. ಮೃತರು ಮಕ್ಕಳಾದ ಶರತ್, ಶರಣ್ಯ, ಅಳಿಯ ಅನೂಪ್, ಸಹೋದರ ಬಾಬು, ಸಹೋದರಿಯರಾದ ಶ್ಯಾಮಲ, ಉಷಾ ಹಾಗೂ …