ಮಂಜೇಶ್ವರ ಸಮುದ್ರ ತೀರದಲ್ಲಿ ಒಣಗಿದ ಮರದಿಂದ ಅಪಾಯ ಭೀತಿ
ಮಂಜೇಶ್ವರ: ಮಂಜೇಶ್ವರ ಸಮುದ್ರ ತೀರದಲ್ಲಿರುವ ಓಷನ್ ವಾಟರ್ ಪಾರ್ಕ್ನ ಮುಂಭಾಗದಲ್ಲಿರುವ ಬೃಹತ್ ಮರ ಯಾವುದೇ ಕ್ಷಣದಲ್ಲಿ ಧರೆಗುರುಳುವ ಸ್ಥಿತಿಯಲ್ಲಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಒಣಗಿದ ಈ ಮರ ಭಾರಿ ಅನಾಹುತಕ್ಕೆ ಕಾರಣವಾಗಬಹುದೆಂದು ಸ್ಥಳೀಯರು ಮತ್ತು ಪ್ರವಾಸಿಗರು ಆತಂಕ ವ್ಯಕ್ತಪಡಿಸಿದ್ದಾರೆ. ವಾಟರ್ ಪಾರ್ಕ್ನ ಎದುರಿನ ಸಣ್ಣ ಅಂಗಡಿ ಸಮೀಪವೇ ಈ ಮರವಿದ್ದು, ಪ್ರತಿದಿನ ಸಂಜೆಯ ವೇಳೆ ಕಡಲ ತಂಗಾಳಿಯನ್ನು ಸವಿಯಲು ಮತ್ತು ಸಮಯ ಕಳೆಯಲು ನೂರಾರು ಜನರು ಇಲ್ಲಿಗೆ ಬರುತ್ತಾರೆ. ಜನನಿಬಿಡ ಪ್ರದೇಶವಾಗಿರುವುದರಿಂದ ಈ ಮರ ಯಾವುದೇ ಸಮಯದಲ್ಲಿ …