ಮಂಗಳೂರಿನಲ್ಲಿ ಪಾಲೆಮಾರ್ ಕನ್ವೆನ್ಶನ್ ಸೆಂಟರ್‌ಗಳ ಲೋಕಾರ್ಪಣೆ

ಮಂಗಳೂರು: ಕರಾವಳಿಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಅತ್ಯಾಧುನಿಕ ಸೌಕರ್ಯಗಳಿಂದೊಡಗೂಡಿದ ನಾಲ್ಕು ಅದ್ದೂರಿ ಪಾಲೆಮಾರ್ ಸಭಾಂಗಣಗಳ ಲೋಕಾರ್ಪಣೆ ಇಂದು ಬೆಳಿಗ್ಗೆ ನಡೆಯಿತು. ಮಂಗಳೂರಿನ ಮೇರಿಹಿಲ್ ನಲ್ಲಿರುವ ಪಾಲೆಮಾರ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಆಂಧ್ರಪ್ರದೇಶದ ರಾಜ್ಯಪಾಲ ಎಸ್. ಅಬ್ದುಲ್ ನಜೀರ್ ಸಭಾಂಗಣಗಳ ಲೋಕಾರ್ಪಣೆ ನೆರವೇರಿಸಿದರು. ಮಾಜಿ ಸಚಿವ, ಲ್ಯಾಂಡ್‌ಲಿಂಕ್ಸ್ ಗ್ರೂಪ್‌ನ ಅಧ್ಯಕ್ಷರಾದ ಕೃಷ್ಣ ಜೆ. ಪಾಲೆಮಾರ್ ಅಧ್ಯಕ್ಷತೆ ವಹಿಸಿದರು. ಕೇಂದ್ರ ಸಚಿವ ವಿ. ಸೋಮಣ್ಣ, ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್, …

ಚಿರತೆ ಭೀತಿಯಿಂದ ಇನ್ನೂ ಮುಕ್ತವಾಗದ ಆಲಂತಡ್ಕ ಜನತೆ

ಮುಳ್ಳೇರಿಯ: ಮುಳ್ಳೇರಿಯಾಕ್ಕೆ ಸಮೀಪದ ಆಲಂತಡ್ಕದ ಜನರಲ್ಲಿ ಆವರಿಸಿರುವ ಚಿರತೆ ಭೀತಿ ಶಮನಗೊಳ್ಳದೆ ಇನ್ನೂ ಅದೇ ರೀತಿ ಮುಂದುವರಿಯುತ್ತಿದೆ. ಆಲಂತಡ್ಕದ ದಾಮೋದರನ್ ನಾಯರ್ ಎಂಬವರ ಮನೆಯ ನಾಯಿಯನ್ನು ದಿನಗಳ ಹಿಂದೆ  ಚಿರತೆ ಕೊಂದು ಅದರ ಅರ್ಧ ಮಾಂಸವನ್ನು ತಿಂದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.ಈ ಪ್ರದೇಶದಲ್ಲಿ ನೂರಾರು ಮನೆಗಳಿದ್ದು, ಕಳೆದ ಒಂದು ವಾರದಲ್ಲಿ ಹಲವು ಮನೆಗಳ ಸಾಕುನಾಯಿಗಳನ್ನು ಚಿರತೆ ಹಿಡಿದು ಸಾಗಿಸಿದೆ. ಅರಣ್ಯ ಇಲಾಖೆ ಈ ಪರಿಸರದಲ್ಲಿ ಸ್ಥಾಪಿಸಿದ್ದ ಕ್ಯಾಮರಾಗಳಲ್ಲಿ ಚಿರತೆಯ ದೃಶ್ಯವೂ ಗೋಚರಿಸಿದೆ. ಇದು ಈ ಇಡೀ ಪ್ರದೇಶದವರಲ್ಲಿ ತೀವ್ರ …

ಎಬೋಲ ವೈರಸ್: ಕೇರಳದಲ್ಲಿ ಕಟ್ಟೆಚ್ಚರ; ವಿಮಾನ ನಿಲ್ದಾಣಗಳಲ್ಲಿ ತೀವ್ರ ನಿಗಾ

ತಿರುವನಂತಪುರ: ಕೊರೋನಾ ಕರಾಳ ದಿನಗಳು ಇನ್ನೂ ಮಾಸಿಲ್ಲ. ಮಾಸ್ಕ್, ಕ್ವಾರಂಟೈನ್, ಲಾಕ್‌ಡೌನ್ ನೆನಪುಗಳು ಈಗಲೂ ಜನರ ಮನದಲ್ಲಿ ಹಚ್ಚಹಸಿರಾಗಿ ಉಳಿದುಕೊಂಡಿರುವ ವೇಳೆಯಲ್ಲೇ ಎಬೋಲ ವೈರಸ್‌ನ ಭೀತಿ ಉಂಟಾಗಿದ್ದು, ಅದು ಜನರನ್ನು ಮತ್ತೆ ಬೆಚ್ಚಿ ಬೀಳಿಸುವಂತೆ ಮಾಡಿದೆ. ಇದರಂತೆ ಕೇಂದ್ರ ಆರೋಗ್ಯ ಇಲಾಖೆ ನೀಡಿದ ನಿರ್ದೇಶ ಪ್ರಕಾರ ಕೇರಳದಲ್ಲೂ ಕಟ್ಟೆಚ್ಚರ ವಹಿಸಲಾಗುತ್ತಿದೆ. ಇದರ ಅಂಗವಾಗಿ ಎಲ್ಲಾ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಕೋಂಗೊ, ಉಗಾಂಡ ಮತ್ತು ಸೌತ್ ಸುಡಾನ್ ಎಂಬೀ ಆಫ್ರಿಕನ್ ರಾಷ್ಟ್ರ ಗಳಲ್ಲಿ …

ಶಾಲೆಯಿಂದ ಲ್ಯಾಪ್‌ಟಾಪ್ ಕಳವು: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಬದಿಯಡ್ಕ: ಶಾಲೆಯಿಂದ ಲ್ಯಾಪ್‌ಟಾಪ್  ಕಳವುಗೈದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸೆರೆಗೀಡಾಗಿದ್ದಾನೆ. ಪೈವಳಿಕೆ ನಿವಾಸಿ ರಾಧಾಕೃಷ್ಣ (42) ಎಂಬಾತನನ್ನು ಬದಿಯಡ್ಕ ಪೊಲೀಸ್ ಠಾಣೆ ಎಎಸ್‌ಐ ಪ್ರಸಾದ್ ನೇತೃತ್ವದಲ್ಲಿ ಕರ್ನಾಟಕದ ಪುತ್ತೂರಿನಿಂದ ಬಂಧಿಸಲಾಗಿದೆ. ೨೦೧೯ರಲ್ಲಿ ಪೆರಡಾಲ ಶಾಲೆಯ ಬೀಗ ಮುರಿದು ಒಳನುಗ್ಗಿ ಲ್ಯಾಪ್‌ಟಾಪ್ ಕಳವು ಗೈದ ಪ್ರಕರಣದಲ್ಲಿ ರಾಧಾಕೃಷ್ಣ ಆರೋಪಿಯಾಗಿದ್ದಾನೆ. ಈ ಪ್ರಕರಣದಲ್ಲಿ ಸೆರೆಗೀಡಾದ ಈತ ಜಾಮೀನು ಪಡೆದು ಹೊರ ಬಂದಿದ್ದನು. ಬಳಿಕ ನ್ಯಾಯಾಲಯದಲ್ಲಿ ಹಾಜರಾಗದೆ  ತಲೆಮರೆಸಿಕೊಂಡಿದ್ದನು. ಈತನಿಗಾಗಿ ಪೊಲೀಸರು ಶೋಧ ನಡೆಸುತ್ತಿರುವ ವೇಳೆ ಈತ ಪುತ್ತೂರಿನಲ್ಲಿರುವ ಬಗ್ಗೆ ಬದಿಯಡ್ಕ …

ಆಯುರ್ವೇದ ವಿದ್ಯಾರ್ಥಿನಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಆಯು ರ್ವೇದ ವಿದ್ಯಾರ್ಥಿನಿಯೋರ್ವೆ ಮನೆಯ ಬೆಡ್‌ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ವೆಳ್ಳರಿಕುಂಡ್ ಪೊಲೀಸ್ ಠಾಣೆ ವ್ಯಾಪ್ತಿಯ ಮಾಲೋಮ್ ವಲಿಯ ಪಾಮತಟ್ಟ್ ತುಂಬೆ ಮಠಂ ನಿವಾಸಿ ಬಿನೀಶ್ ಎಂಬವರ ಪುತ್ರಿ ಟಿ.ವಿ. ಆರ್ಯ (18) ಸಾವಿಗೀಡಾದ ಯುವತಿಯಾಗಿ ದ್ದಾಳೆ. ನಿನ್ನೆ ರಾತ್ರಿ 7.30ರ ವೇಳೆ ಆರ್ಯ ಬೆಡ್‌ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಳು. ಕೂಡಲೇ ಆಕೆಯನ್ನು ಕೆಳಗಿಳಿಸಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಈ ಬಗ್ಗೆ ತಂದೆ ನೀಡಿದ …

ಪೂಚಕ್ಕಾಡ್‌ನಲ್ಲಿ ರೈಲಿಗೆ ಕಲ್ಲೆಸೆತ: ಮಹಿಳೆಗೆ ಗಾಯ

ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪಳ್ಳಿಕೆರೆ ಪೂಚಕ್ಕಾಡ್ ನಲ್ಲಿ ರೈಲಿಗೆ ಕಲ್ಲೆಸೆತ ಉಂಟಾಗಿದೆ. ಜನರಲ್ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಗಾಯವುಂಟಾಗಿದೆ. ಕಣ್ಣಿಗೆ ಗಾಯಗೊಂಡ ನೀಲೇಶ್ವರ ಆಲಿಂಗೀಳ್ ನಿವಾಸಿ ಪಿ.ವಿ. ಕುಂಞಿಕೃಷ್ಣನ್‌ರ ಪತ್ನಿ ಅನಿತ (58)ರನ್ನು ಕಾಞಂಗಾಡ್ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಮಧ್ಯಾಹ್ನ ಕೊಯಂಬತ್ತೂರ್‌ಗೆ ತೆರಳುತ್ತಿದ್ದ ಇಂಟರ್‌ಸಿಟಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ಗೆ ಕಲ್ಲೆಸೆತ ಉಂಟಾಗಿದೆ. ಮಹಿಳೆ ಮಂಗಳೂರಿ ನಿಂದ ನೀಲೇಶ್ವರಕ್ಕೆ ಪ್ರಯಾಣಿಸುತ್ತಿದ್ದರು. ಇವರ ಬಲಕಣ್ಣಿಗೆ ಕಲ್ಲೆಸೆತದಿಂದ ಗಾಯವುಂಟಾಗಿದೆ. ಘಟನೆಯಲ್ಲಿ ಕಾಸರಗೋಡು ರೈಲ್ವೇ ಪೊಲೀಸರು ಕೇಸು ದಾಖಲಿಸಿದ್ದಾರೆ. …

ಮೂನಾರ್‌ಗೆ ಕೆಲಸಕ್ಕೆ ಹೋದ ಯುವಕ ನಾಪತ್ತೆ

ಕಾಸರಗೋಡು: ಮೂನಾರ್‌ಗೆ ಕೆಲಸಕ್ಕೆಂದು ತಿಳಿಸಿ ಮನೆಯಿಂದ ಹೋದ ಯುವಕ ನಾಪತ್ತೆಯಾಗಿ ರುವುದಾಗಿ ದೂರಲಾಗಿದೆ. ಪನಯಾಲ್ ಪೆರಿಯಾಟಡ್ಕದ ರಾಮದಾಸ್‌ರ ಪುತ್ರ ಕೆ.ವಿ. ಉಮೇಶ್ (36) ನಾಪತ್ತೆಯಾದ ಯುವಕನಾಗಿದ್ದಾನೆ. ಈ ಬಗ್ಗೆ ಪತ್ನಿ ನೀಡಿದ ದೂರಿನಂತೆ ಬೇಕಲ ಪೊಲೀ ಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. 2026 ಫೆಬ್ರವರಿ 6ರಂದು ಮೂನಾರ್‌ಗೆ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೋದ ಉಮೇಶ್ ಬಳಿಕ ಮರಳಿ ಬಂದಿಲ್ಲ. ಅಲ್ಲದೆ ಅವರ ಕುರಿತಾಗಿ ಯಾವುದೇ ಮಾಹಿತಿ ಇಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ. ಇದೇ ವೇಳೆ ಉಮೇಶ್‌ರ …

ಪೈವಳಿಕೆಯಲ್ಲಿ ರಾಜೀವ್ ಗಾಂಧಿ ಸಂಸ್ಮರಣೆ

ಪೈವಳಿಕೆ: ಮಾಜಿ ಪ್ರಧಾನಿ, ಇಂಡಿಯನ್ ನೇಶನಲ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ದಿವಂಗತ ರಾಜೀವ್ ಗಾಂಧಿಯವರ ೩೬ನೇ ಪುಣ್ಯತಿಥಿಯನ್ನು ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಆಚರಿಸಲಾಯಿತು. ಮಂಡಲ ಅಧ್ಯಕ್ಷÀ ವಸಂತ ಕುಮಾರ್ ಉದ್ಘಾಟಿಸಿದರು. ಉಪಾಧ್ಯಕ್ಷ ಚನಿಯಪ್ಪ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಪೈವಳಿಕೆ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜೀವ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ನಾರಾಯಣ ಏದಾರ್, ಸಚ್ಚಿದಾನಂದ ರೈ, ಗಂಗಾಧರ ನಾಯಕ್, ಎಡ್ವರ್ಡ್ ಡಿ ಸೋಜ, ಅಬ್ದುಲ್ಲ ಶಾ ಉಪಸ್ಥಿತರಿದ್ದರು. ಶಿವರಾಮ ಶೆಟ್ಟಿ ಸ್ವಾಗತಿಸಿ, ರಸಾಕ್ ಪಟ್ಲ …

ಕಾಸರಗೋಡು ಬೀಚ್ ರನ್ ನಾಳೆ : ಪರಿಸರ ಶುಚೀಕರಣ

ಕಾಸರಗೋಡು: ಕಾಸರಗೋಡು ನಗರಸಭೆ, ಜಿಲ್ಲಾಡಳಿತ, ಜಿಲ್ಲಾ ಟೂರಿಸಂ ಪ್ರಮೋಷನ್ ಕೌನ್ಸಿಲ್ ಎಂಬಿವುಗಳ ಜಂಟಿ ಆಶ್ರಯದಲ್ಲಿ ನಾಳೆ ನೆಲ್ಲಿಕುಂಜೆ ಬೀಚ್‌ನಲ್ಲಿ ನಡೆಯಲಿರುವ ಕಾಸರಗೋಡು ಬೀಚ್ ರನ್ ಅಂಗವಾಗಿ ಬೀಚ್‌ನ್ನು ಶುಚೀಕರಿಸಲಾಯಿತು. ನಗರಸಭಾ ಉಪಾಧ್ಯಕ್ಷ ಕೆ.ಎಂ. ಹನೀಫ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಹಮೀದ್ ಬೆದಿರ, ಮೆಹರುನ್ನಿಸ ಹಮೀದ್, ಜಾಫರ್ ಕಮಾಲ್, ಕೌನ್ಸಿಲರ್‌ಗಳಾದ ತಶ್ರಿಫ್ ಬಷೀರ್, ಆಯಿಷಾ ಸಲಾಂ, ಅಬ್ದುಲ್ ರಹ್‌ಮಾನ್, ಉಮೇಶನ್, ಹರೀಶ್, ರಾಮಕೃಷ್ಣ ಹೊಳ್ಳ, ರೇಷ್ಮ, ಕಾರ್ಯದರ್ಶಿ ಶಾಜು, ನಗರಸಭಾ ಆರೋಗ್ಯ ವಿಭಾಗ ಅಧಿಕಾರಿಗಳಾದ ಮಧು, ಶೀನಾ, ವಿದ್ಯಾ, …

ಜಿಲ್ಲೆಯ ವಿಕೋಪ ನಿವಾರಣೆಯ ಚಟುವಟಿಕೆಗಳನ್ನು ಶೀಘ್ರವೇ ಪೂರ್ತಿಗೊಳಿಸಲು ಅವಲೋಕನ ಸಭೆಯಲ್ಲಿ ತೀರ್ಮಾನ

ಕಾಸರಗೋಡು: ಮಳೆಗಾಲದ ಪೂರ್ವಭಾವಿಯಾಗಿ ಜಿಲ್ಲೆಯ ದುರಂತ ನಿವಾರಣೆ ಚಟುವಟಿಕೆಗಳ ಸಿದ್ಧತೆ ಕ್ರಮಗಳನ್ನು ಶೀಘ್ರವೇ ನಡೆಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಆಬ್ರಹಾಂ ನುಡಿದರು. ಸ್ಥಳೀಯಾಡಳಿತ ಇಲಾಖೆ ಜೊಯಿಂಟ್ ಡೈರಕ್ಟರ್‌ರ ಕಾರ್ಯಾಲಯದಲ್ಲಿ ಜರಗಿದ ಅವಲೋಕನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಮಳೆಗಾಲಕ್ಕೆ ಮುಂಚಿತವಾಗಿ ಜಿಲ್ಲೆಯ ಎಲ್ಲಾ ವಿದ್ಯಾಲಯಗಳಲ್ಲೂ ಶುಚೀಕರಣ ಚಟುವಟಿಕೆಗಳು ನಡೆಸಬೇಕು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಲಯದಲ್ಲಿ ವೆಚ್ಚಮಾಡುವ ಫಂಡ್‌ಗಳ ವಿನಿಯೋಗ ಕಾಲ ವಿಳಂಬವಿಲ್ಲದೆ ದಕ್ಷತೆಯಿಂದ ನಡೆಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರು ನುಡಿದರು. ಜಿಲ್ಲೆಯಲ್ಲಿನ ಒಟ್ಟು …