ಸಾವಿತ್ರಿ ಅಮ್ಮನಿಧನ

ಬದಿಯಡ್ಕ: ಕೊಲ್ಲಂಗಾನ ಸಮೀಪದ ಪಜ್ಜ ಶಿವನಿಲಯದ ದಿ| ರಾಮಕೃಷ್ಣ ಭಟ್‌ರ ಪತ್ನಿ ಸಾವಿತ್ರಿ ಅಮ್ಮ (81) ಸ್ವ-ಗೃಹದಲ್ಲಿ ನಿಧನರಾದರು. ಮೃತರು ಮಕ್ಕಳಾದ ಗೋವಿಂದ ಶರ್ಮ(ಹರಿಹರ), ಸದಾಶಿವ ಶರ್ಮ ಕೋಳಾರಿ, ತಿರುಮಲೇಶ್ವರ ಭಟ್ ಪಜ್ಜ, ಶೈಲಜಾ ಮಲಪ್ಪುರಂ ಕೋಟೆಕ್ಕಡವು, ಸೊಸೆಯಂದಿರಾದ ರಾಜೇಶ್ವರಿ, ಸೌಮ್ಯಾ, ಅಳಿಯ ಪ್ರೇಮ್ ಕುಮಾರ್ ಕೋಟೆಕ್ಕಡವು ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

 ಟಿ.ವಿ. ಬಾಲಕೃಷ್ಣನ್ ನಿಧನ

ಮಧೂರು: ಇಲ್ಲಿನ ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ನೌಕರ ಟಿ.ವಿ. ಬಾಲಕೃಷ್ಣನ್ (62) ನಿಧನ ಹೊಂದಿದರು. ದಿ| ನಾರಾಯಣ ಮಾರಾರ್- ಕಲ್ಯಾಣಿ ದಂಪತಿ ಪುತ್ರನಾಗಿದ್ದಾರೆ. ಮೃತರು ಪತ್ನಿ ರಮಾದೇವಿ, ಮಕ್ಕಳಾದ ಧನಂಜಯನ್ (ಮಧೂರು ಸೇವಾ ಸಹಕಾರಿ ಬ್ಯಾಂಕ್), ಮಹೇಶ್, ಸಹೋದರಿಯರಾದ ಸರೋಜಿನಿ, ಶಾಂತ, ಭಾರ್ಗವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಾಯಿತು: ಕಾಸರಗೋಡಿನಲ್ಲಿ ಸಂಚಾರ ತಡೆಗೆ ಪರಿಹಾರವಿಲ್ಲ

ಕಾಸರಗೋಡು: ಅಣಂಗೂರಿ ನಿಂದ ಆರಂಭಗೊಂಡು ಹೊಸ ಬಸ್ ನಿಲ್ದಾಣ- ಚಂದ್ರಗಿರಿ ಟ್ರಾಫಿಕ್ ಜಂಕ್ಷನ್‌ವರೆಗೆ ವಾಹನ ಸಂಚಾರ ತಡೆ ತೀವ್ರಗೊಳ್ಳುತ್ತಿದೆ. ಇದು ಪ್ರಯಾಣಿಕರಿಗೆ ಸಂಕಷ್ಟ ತರುತ್ತಿದೆ. ಬೆಳಿಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ಹೆಚ್ಚಾಗಿ ವಾಹನ ದಟ್ಟಣೆ ಕಂಡುಬರುತ್ತಿದ್ದು, ಸಂಚಾರ ತಡೆ ಉಂಟಾಗುತ್ತಿದೆ. ಉತ್ಸವ, ಆಚರಣೆ, ವ್ಯಾಪಾರ ಸೀಸನ್ ಸಮಯಗಳಲ್ಲಿ ಸಂಚಾರತಡೆ ತಾರಕಕ್ಕೇರುತ್ತಿದೆ. ಈ ಮಧ್ಯೆ ಹೊಸ ಬಸ್ ನಿಲ್ದಾಣದಿಂದ ಹಳೆ ಬಸ್ ನಿಲ್ದಾಣಕ್ಕೆ ಯಾವುದಾದರೂ ಸಂಘಟನೆಗಳು, ರಾಜಕೀಯ ಪಕ್ಷ ಜಾಥಾ ನಡೆಸಿದರೆ ಆ ದಾರಿಯಲ್ಲಿ ಸಂಚಾರ ದುಸ್ತರವಾಗುತ್ತಿದೆ. ಇದು …