ಅಸೌಖ್ಯ: ಮಹಿಳೆ ನಿಧನ

ಮಂಗಲ್ಪಾಡಿ: ಅಂಬಾರು ಚೆರುಗೋಳಿ ನಿವಾಸಿ ಪೂವಪ್ಪ ಚನಿಲು ರವರ ಪತ್ನಿ ಮುತ್ತು (82) ಅಲ್ಪ ಕಾಲದ ಅಸೌಖ್ಯದಿಂದ ನಿನ್ನೆ ಮಧ್ಯಾಹ್ನ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮೃತರು ಪತಿ, ಮಕ್ಕಳಾದ ಯೋಗೇಂದ್ರ, ಪುರುಷೆÆÃತ್ತಮ, ಕಮಲಾಕ್ಷಿ, ಕೋಟಿ, ಸೂರ್ಯ, ಸುಮತಿ, ಪುಷ್ಪ, ಭವಾನಿ, ಪರಮೆಶ್ವರಿ, ಜ್ಯೋತಿ, ಸೊಸೆಯಂದಿರಾದ ಸುಮತಿ, ಚಂದ್ರಾವತಿ, ದೀಕ್ಷ, ರೇವತಿ (ಮಂಗಲ್ಪಾಡಿ ಪಂಚಾಯತ್ ಮಾಜಿ ಸದಸ್ಯೆ), ಅಳಿಯಂದಿರಾದ ಲೋಕೇಶ, ಭಾಸ್ಕರ, ಚಂದ್ರಶೇಖರ, ವಿಶ್ವನಾಥ, ಸಹೋದರಿ ಕಮಲ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ವಿಕ್ರಮ್ ಎಲೆಕ್ಟ್ರೋನಿಕ್ಸ್ ಮಾಲಕ ಕೆ.ಪಿ. ರಾಮಚಂದ್ರನ್ ನಿಧನ

ಕಾಸರಗೋಡು: ನಗರದ ಹಳೆ ಬಸ್ ನಿಲ್ದಾಣ ಕ್ರಾಸ್ ರೋಡ್‌ನ  ವಿಕ್ರಂ ಇಲೆಕ್ಟ್ರಾನಿಕ್ಸ್ ಸಂಸ್ಥೆಯ ಮಾಲಕ, ಅಡ್ಕತ್ತಬೈಲ್ ನಿವಾಸಿ ಯಾದ ಕೆ.ಪಿ. ರಾಮಚಂದ್ರನ್(84) ನಿಧನ ಹೊಂದಿದರು. ಮಂಗಳೂರಿನ ಮನೆಯಲ್ಲಿ ನಿಧನ ಸಂಭವಿಸಿದೆ. ಮೃತರು ಪತ್ನಿ ಶೋಭಾ, ಮಕ್ಕಳಾದ ರೋಶ್ನಿ, ದಿವ್ಯಾ, ವಿಕ್ರಂ ಹಾಗೂ ಅಪಾರ ಬಂಧು-ಮಿತ್ರರನ್ನು ಗಲಿದ್ದಾರೆ.

ಡಿಸಿಸಿಯಿಂದ ಕಾಂಗ್ರೆಸ್ ನೇತಾರ ಕೆ. ವೆಳ್ತಂಬು ಸಂಸ್ಮರಣೆ

ಕಾಸರಗೋಡು: ಕೆ.ವೆಳ್ತಂಬು ಅವರು ಕಾಸರಗೋಡು ಜಿಲ್ಲೆಯ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ನೇತೃತ್ವ ನೀಡಿದ ನೇತಾರನಾಗಿದ್ದಾರೆ.ತನ್ನ ಜೀವನದ ಕೊನೆಯ ವರೆಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಒಗ್ಗಟ್ಟಿನಲ್ಲಿರಿಸಿದ ನೇತಾರನೂ ಆಗಿದ್ದಾರೆಂದು  ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ತಿಳಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಡಿಸಿಸಿ ಕಚೇರಿಯಲ್ಲಿ ನಡೆದ ಕೆ. ವೆಳ್ತಂಬು ಅವರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ನಡೆಸಿದ ಬಳಿಕ ಜರಗಿದ ಸಭೆಯಲ್ಲಿ  ಅಧ್ಯಕ್ಷತೆ ವಹಿಸಿ  ಅವರು ಮಾತನಾಡುತ್ತಿದ್ದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಾದ ಜವಾಹರ್ ಭವನ್ ನಿರ್ಮಿಸಿರುವುದು ವೆಳ್ತಂಬು ನೇತೃತ್ವದಲ್ಲಾಗಿದೆಯೆಂದೂ ಅವರು ತಿಳಿಸಿದರು. …

ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಆದ್ಯತೆ-ಶಾಸಕ

ಕಾಸರಗೋಡು: ಕಾಸರಗೋಡು ಮೆಡಿಕಲ್ ಕಾಲೇಜಿನ ಕಾಮಗಾರಿ ಶೀಘ್ರ ಪೂರ್ತಿಗೊಳಿಸಲು ಹಾಗೂ ಮೆಡಿಕಲ್ ಕಾಲೇಜಿನ ಭಾಗವಾಗಿ ತಾಯಿ ಹಾಗೂ ಮಗು ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಹೊಸ ಅಡ್ಮಿನಿಸ್ಟ್ರೇ ಟಿವ್ ಬ್ಲಾಕ್, ಸಿವೇಜ್ ಪ್ಲಾಂಟ್ ಎಂಬಿ ವುಗಳನ್ನು ನೂತನವಾಗಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದೆಂದು ಶಾಸಕ ಕಲ್ಲಟ್ರ ಮಾಹಿನ್ ತಿಳಿಸಿದ್ದಾರೆ. ಪ್ರತೀ ತಿಂಗಳ ಅವಲೋಕನದಂಗವಾಗಿ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್‌ರ ನೇತೃತ್ವದಲ್ಲಿ ಕಾಸರಗೋಡು ಮೆಡಿಕಲ್ ಕಾಲೇಜಿಗೆ ಸಂದರ್ಶನ  ನೀಡಿದ ಬಳಿಕ ಶಾಸಕರು ಈ ಬಗ್ಗೆ ತಿಳಿಸಿದ್ದಾರೆ. ಅಸೋಸಿಯೇಟ್ ಪ್ರೊಫೆಸರ್ ಸಹಿತ ಸೂಪರ್ …