ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಆದ್ಯತೆ-ಶಾಸಕ

ಕಾಸರಗೋಡು: ಕಾಸರಗೋಡು ಮೆಡಿಕಲ್ ಕಾಲೇಜಿನ ಕಾಮಗಾರಿ ಶೀಘ್ರ ಪೂರ್ತಿಗೊಳಿಸಲು ಹಾಗೂ ಮೆಡಿಕಲ್ ಕಾಲೇಜಿನ ಭಾಗವಾಗಿ ತಾಯಿ ಹಾಗೂ ಮಗು ಆಸ್ಪತ್ರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಹೊಸ ಅಡ್ಮಿನಿಸ್ಟ್ರೇ ಟಿವ್ ಬ್ಲಾಕ್, ಸಿವೇಜ್ ಪ್ಲಾಂಟ್ ಎಂಬಿ ವುಗಳನ್ನು ನೂತನವಾಗಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದೆಂದು ಶಾಸಕ ಕಲ್ಲಟ್ರ ಮಾಹಿನ್ ತಿಳಿಸಿದ್ದಾರೆ. ಪ್ರತೀ ತಿಂಗಳ ಅವಲೋಕನದಂಗವಾಗಿ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್‌ರ ನೇತೃತ್ವದಲ್ಲಿ ಕಾಸರಗೋಡು ಮೆಡಿಕಲ್ ಕಾಲೇಜಿಗೆ ಸಂದರ್ಶನ  ನೀಡಿದ ಬಳಿಕ ಶಾಸಕರು ಈ ಬಗ್ಗೆ ತಿಳಿಸಿದ್ದಾರೆ. ಅಸೋಸಿಯೇಟ್ ಪ್ರೊಫೆಸರ್ ಸಹಿತ ಸೂಪರ್ ಸ್ಪೆಶಾಲಿಟಿ ಚಿಕಿತ್ಸೆಗೆ ಅಗತ್ಯವುಳ್ಳ ಹುದ್ದೆಗಳನ್ನು ಮಂಜೂರು ಮಾಡಲು ಸರಕಾರವನ್ನು ಒತ್ತಾಯಿಸಲಾಗು ವುದು. ಎಂಡೋಸಲ್ಫಾನ್ ಸಂತ್ರಸ್ತರಿಗೆ ನ್ಯೂರೋ ವಿಭಾಗದ ಸೇವೆಗಳನ್ನು ಒದಗಿಸಲು  ಆದ್ಯತೆ ನೀಡಲಾಗು ವುದು. ಈ ಆಸ್ಪತ್ರೆ ನಿರ್ಮಾಣ ಪೂರ್ಣಗೊಂಡು ಕಾರ್ಯಾರಂಭಗೊಳ್ಳುವುದರೊಂದಿಗೆ ಕಾಸರಗೋಡಿನ ಮಲೆನಾಡು ಪ್ರದೇಶದ ಜನರಿಗೆ ಹಾಗೂ ಎಂಡೋಸಲ್ಫಾನ್ ಸಂತ್ರಸ್ತರಿಗೆ ಹೆಚ್ಚಿನ ಪ್ರಯೋಜನ ಲಭಿಸಲಿದೆಯೆಂದು ಶಾಸಕ ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅರ್ಜುನ್ ಪಾಂಡ್ಯನ್ ಕಾಸರಗೋಡು ಮೆಡಿಕಲ್ ಕಾಲೇಜು ಸಂದರ್ಶಿಸು ವುದು ಇದು ಮೂರನೇ ಬಾರಿಯಾಗಿದೆ. ಆಸ್ಪತ್ರೆಯ ಕೆಲಸ ಕಾರ್ಯಗಳನ್ನು ವೀಕ್ಷಿಸಿದ ಬಳಿಕ ಮೆಡಿಕಲ್ ಕಾಲೇಜು ಇಂಟರ್ನಲ್ ರಸ್ತೆ ಹಾಗೂ   ಕಟ್ಟಡಗಳ ಕಾಮಗಾರಿ ಯನ್ನು ತ್ವರಿತಗೊಳಿಸುವಂತೆ ಅವರು ನಿರ್ದೇಶಿಸಿದರು. ಕುಡಿಯುವ ನೀರು ಸೌಕರ್ಯ ಏರ್ಪಡಿಸಿರುವುದಾಗಿ  ವಾಟರ್ ಅಥೋರಿಟಿ ಅಧಿಕಾರಿಗಳು ತಿಳಿಸಿದರು. ಶಿಕ್ಷಣ ಮುಗಿದು ಬರುವ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಕರ್ಯ ಏರ್ಪಡಿಸಲಾಗು ವುದು. ಇಲ್ಲಿ ವಾಸ ಸೌಕರ್ಯ ಕ್ರಮಗಳು ಪೂರ್ಣಗೊಂ ಡಿದೆ ಎಂದು ಅವರು ತಿಳಿಸಿದರು.  ಕಳೆದ ತಿಂಗಳ ಅವಲೋಕನ ಸಭೆಯಲ್ಲಿ ಹಾಸ್ಟೆಲ್ ತೆರೆಯುವಂತೆ ತೀರ್ಮಾನಿಸಲಾಗಿತ್ತು.   ಸಭೆಯಲ್ಲಿ ಮೆಡಿಕಲ್ ಕಾಲೇಜು ಪ್ರಿನ್ಸಿಪಾಲ್ ಎ. ಅರುಣ್ ಕುಮಾರ್, ವೈಸ್ ಪ್ರಿನ್ಸಿಪಾಲ್ ಪಿ.ಜಿ. ಸಿಂಧು, ಮೆಡಿಕಲ್ ಕಾಲೇಜು ಸುಪರಿನ್‌ಟೆಂ ಡೆಂಟ್ ಡಾ| ಪ್ರವೀಣ್, ನರ್ಸಿಂಗ್ ಕಾಲೇಜು ವೈಸ್ ಪ್ರಿನ್ಸಿಪಾಲ್ ಶೋಭಾ, ಡೆಪ್ಯುಟಿ ಕಲೆಕ್ಟರ್ (ಎಲ್‌ಎ) ಲಿಪು ಎಸ್ ಲೋರೆನ್ಸ್, ಕೇರಳ ವಾಟರ್ ಅಥೋರಿಟಿ, ಕೆಎಸ್ ಇಬಿ, ಪಿಡಬ್ಲ್ಯುಡಿ, ಕಿಟ್‌ಕೋ, ಯುಎಲ್‌ಸಿಸಿ, ಹಾರ್ಬರ್ ಇಂಜಿನಿ ಯರಿಂಗ್ ವಿಭಾಗದ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡರು.

You cannot copy contents of this page