ಎಲ್ಲಾ ರೈತರಿಗೆ ಉಚಿತ ವಿದ್ಯುತ್ ನೀಡಲು  ಕಲ್ಲಗ ಚಂದ್ರಶೇಖರ ರಾವ್ ಸಚಿವರಿಗೆ ಮನವಿ

ಬೆಳ್ಳೂರು: ಕೇರಳದಲ್ಲಿ ಕೃಷಿ ನೀರಾವರಿ ಉದ್ದೇಶಗಳಿಗಾಗಿ ನೀಡಲಾಗುತ್ತಿರುವ ಉಚಿತ ವಿದ್ಯುತ್ ಸೌಲಭ್ಯವನ್ನು ಇನ್ನಷ್ಟು ವಿಸ್ತರಿಸುವಂತೆ ಆಗ್ರಹಿಸಿ ವಿದ್ಯುತ್ ಇಲಾಖೆ ಸಚಿವ ಸನ್ನಿ ಜೋಸೆಫ್‌ರಿಗೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಲ್ಲಗ ಚಂದ್ರಶೇಖರ್ ರಾವ್ ಮನವಿ ಸಲ್ಲಿಸಿದ್ದಾರೆ. ಜಿಲ್ಲೆಯ ಅಡಕೆ ಬೆಳೆಗಾರರ ಸಂಕಷ್ಟಗಳನ್ನು ವಿವರಿಸಿ ಈ ಮನವಿ ಸಲ್ಲಿಸಲಾಗಿದೆ. ಈಗ ಕೇರಳದಲ್ಲಿ ೫ ಹೆಕ್ಟೇರ್ ಕೃಷಿ ಭೂಮಿ ಹೊಂದಿರುವ ರೈತರಿಗೆ ಮಾತ್ರವೇ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದನ್ನು ಹೆಚ್ಚು ಭೂಮಿ ಹೊಂದಿರುವ ಹಿಡುವಳಿಧಾರರಿಗೂ ವಿಸ್ತರಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಕರ್ನಾಟಕದಲ್ಲಿ …

ಚಿಲ್ಲರೆ ಡೀಸೆಲ್ ಮಾರಾಟ ನಿಯಂತ್ರಣ ಹಿಂತೆಗೆಯಬೇಕು-ಕೇರಳ ವ್ಯಾಪಾರಿ ವ್ಯವಸಾಯಿ  ಏಕೋಪನ ಸಮಿತಿ

ಕಾಸರಗೋಡು: ಕೈಗಾರಿಕಾ ಸಂಸ್ಥೆಗಳಿಗೆ ಚಿಲ್ಲರೆ ಮಾರಾಟ ಮಾಡುವ ಪೆಟ್ರೋಲ್ ಬಂಕ್‌ಗಳಿಂದ ನೇರವಾಗಿ ಡೀಸೆಲ್, ಪೆಟ್ರೋಲ್ 2026 ಜೂನ್ 11ರಿಂದ ಖರೀದಿಸಬಾರದು ಎಂಬ ಆದೇಶದಿಂದಾಗಿ ವ್ಯಾಪಾರಿ, ಕೈಗಾರಿಕೆಗಳು ಸಂದಿಗ್ಧತೆಯಲ್ಲಿದೆಯೆಂದು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಆರೋಪಿಸಿದೆ. ವಿದ್ಯುತ್ ಮೊಟಕು ಎದುರಿಸುವಾಗ ಸಂಸ್ಥೆಗಳಲ್ಲಿ ಜನರೇಟರ್‌ಗಳನ್ನು ಕಾರ್ಯಾಚರಿಸುವಂತೆ ಮಾಡಬೇಕಾಗುತ್ತದೆ. ಮೇಲಿನ ಆದೇಶದಿಂದ ಪೆಟ್ರೋಲ್ ಬಂಕ್‌ನಿಂದ ಪೆಟ್ರೋಲ್ ಅಥವಾ ಡೀಸೆಲ್ ಲಭಿಸುವುದಿಲ್ಲ. ಆಸ್ಪತ್ರೆ ಸಹಿತದ ವ್ಯಾಪಾರ, ವಾಣಿಜ್ಯ ಸಂಸ್ಥೆಗಳು ಈ ಆದೇಶದಿಂದ ಬಹಳ ಸಂಕಷ್ಟದಲ್ಲಿವೆ. ವಿದ್ಯುತ್ ಮೊಟಕಾದಾಗ ಹೋಟೆಲ್‌ಗಳು, ಐಸ್‌ಕ್ರೀಂ, ಮೀನು, …

ಪ್ರೊ. ಸಿ.ಎಚ್. ಯೂಸುಫ್‌ ನಿಧನ

ಕುಂಬಳೆ: ಬಾಡೂರು ಚಾಕಟೆ ಚಾಲ್ ನಿವಾಸಿ ದಿ| ಸಿ.ಎಚ್. ಅಬ್ದುಲ್ಲರ ಪುತ್ರ, ಕಲ್ಲಿಕೋಟೆ ಫಾರೂಕ್ ಕಾಲೇಜಿನ ನಿವೃತ್ತ ಪ್ರೊಫೆಸರ್ ಸಿ.ಎಚ್. ಯೂಸುಫ್ (79) ನಿನ್ನೆ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸತ್ರೆಯಲ್ಲಿ ನಿಧನಹೊಂ ದಿದರು.ಫಾರೂಕ್ ಕಾಲೇಜಿನಿಂದ ನಿವೃತ್ತಿ ಹೊಂದಿದ ಬಳಿಕ  ಕಾಸರಗೋಡು ಸಅದಿಯ ಕಾಲೇಜು ಪ್ರಾಂಶುಪಾ ಲರಾಗಿ, ಕುಂಬಳೆ ಖನ್ಸ ಉಮನ್ಸ್ ಕಾಲೇಜು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಪುತ್ತಿಗೆ ಮುಹಿ ಮ್ಮಾತ್ ಎಜ್ಯುಕೇಶನ್ ಸೆಂಟರ್‌ನ ಆಡಿಟರ್ ಆಗಿ ಸೇವೆ ಸಲ್ಲಿಸಿದ್ದರು. ಬಾಡೂರು ರಹ್ಮಾನಿಯ ಜುಮಾ ಮಸೀದಿ ಸಮಿತಿ …

ಅಸೌಖ್ಯ: ನಿಧನ

ಮಜೀರ್ಪಳ್ಳ: ಕೋಳ್ಯೂರುಪದವು ನಿವಾಸಿ ಶಿವಪ್ಪ ಯಾನೆ ಶಿವರಾಜ್ (38) ಇಂದು ಬೆಳಿಗ್ಗೆ ನಿಧನ ಹೊಂದಿ ದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಮೃತರು ತಾಯಿ ಲಲಿತ, ಸಹೋದರ ನಾಗರಾಜ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ತಂದೆ ಕೃಷ್ಣಪ್ಪ ಈ ಹಿಂದೆ ನಿಧನ ಹೊಂದಿದ್ದಾರೆ. ನಿಧನಕ್ಕೆ ಸ್ಪಂದನ ಟ್ರಸ್ಟ್ ಕೋಳ್ಯೂರು, ಓಂಕಾರ್ ಫ್ರೆಂಡ್ಸ್ ಕೋಳ್ಯೂರು, ಸತ್ಯದೇವತೆ ಫ್ರೆಂಡ್ಸ್ ಕಳಿಯೂರ್ ಸಿಂತಾಜೆ, ಸಂಘ ಪರಿವಾರ ಸಂತಾಪ ಸೂಚಿಸಿದೆ.

ಫ್ಯಾಮಿಲಿ ಹೆಲ್ತ್ ಸೆಂಟರ್‌ನ ಆರೋಗ್ಯವೇ ಹದಗೆಟ್ಟಿದೆ: ರೋಗಿಗಳಿಗೆ ದಿನನಿತ್ಯ ಸಂಕಷ್ಟ

ಕುಂಬಳೆ: ಪಂಚಾಯತ್‌ನಲ್ಲಿರುವ ಸುಮಾರು 75ವರ್ಷ ಹಳೆಯದಾದ ಸರಕಾರಿ ಆಸ್ಪತ್ರೆ ಬ್ಲೋಕ್ ಫ್ಯಾಮಿಲಿ ಹೆಲ್ತ್ ಸೆಂಟರ್‌ನಿಂದ ರೋಗಿಗಳಿಗೆ ಸಂಕಷ್ಟ ಎಂಬ ಆರೋಪವುಂಟಾಗಿದೆ. ಈ ಮೊದಲು ಇದು ಕಮ್ಯೂನಿಟಿ ಹೆಲ್ತ್ ಸೆಂಟರ್ ಆಗಿತ್ತು. ಕಳೆದ ವರ್ಷ ಇದನ್ನು ಬ್ಲೋಕ್ ಫ್ಯಾಮಿಲಿ ಹೆಸ್ತ್ ಸೆಂಟರ್ ಆಗಿ ಭಡ್ತಿಗೊಳಿಸಲಾಗಿತ್ತು. ಆದರೆ ಮೂಲಭೂತ ಸೌಕರ್ಯ ಅಭಿವೃದ್ಧಿಯಲ್ಲಿ ಈ ಆರೋಗ್ಯ ಕೇಂದ್ರ ಎರಡು ದಶಕಗಳಿಂದ ಅವಗಣನೆ ಯನ್ನು ಎದುರಿಸುತ್ತಿದೆ. ಹಳೆಯದಾದ ಹೆಂಚು ಹಾಸಿದ ಕಟ್ಟಡದಲ್ಲಿ ಆಸ್ಪತ್ರೆ ಈಗಲೂ ಕಾರ್ಯಾಚರಿಸುತ್ತಿದೆ. ಇದರಲ್ಲಿ ಒಂದು ಕಟ್ಟಡ ಸೋರುತ್ತಿದ್ದು, ಮೇಲ್ಛಾವಣಿ …