ಕುಂಬಳೆ: ಬಾಡೂರು ಚಾಕಟೆ ಚಾಲ್ ನಿವಾಸಿ ದಿ| ಸಿ.ಎಚ್. ಅಬ್ದುಲ್ಲರ ಪುತ್ರ, ಕಲ್ಲಿಕೋಟೆ ಫಾರೂಕ್ ಕಾಲೇಜಿನ ನಿವೃತ್ತ ಪ್ರೊಫೆಸರ್ ಸಿ.ಎಚ್. ಯೂಸುಫ್ (79) ನಿನ್ನೆ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸತ್ರೆಯಲ್ಲಿ ನಿಧನಹೊಂ ದಿದರು.ಫಾರೂಕ್ ಕಾಲೇಜಿನಿಂದ ನಿವೃತ್ತಿ ಹೊಂದಿದ ಬಳಿಕ ಕಾಸರಗೋಡು ಸಅದಿಯ ಕಾಲೇಜು ಪ್ರಾಂಶುಪಾ ಲರಾಗಿ, ಕುಂಬಳೆ ಖನ್ಸ ಉಮನ್ಸ್ ಕಾಲೇಜು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಪುತ್ತಿಗೆ ಮುಹಿ ಮ್ಮಾತ್ ಎಜ್ಯುಕೇಶನ್ ಸೆಂಟರ್‌ನ ಆಡಿಟರ್ ಆಗಿ ಸೇವೆ ಸಲ್ಲಿಸಿದ್ದರು. ಬಾಡೂರು ರಹ್ಮಾನಿಯ ಜುಮಾ ಮಸೀದಿ ಸಮಿತಿ ಕೋಶಾಧಿಕಾ ರಿಯೂ ಆಗಿದ್ದರು. ಮೃತರು ಪತ್ನಿ ಮರಿಯಾಂ ಮುಗು, ಮಕ್ಕಳು: ಅಬ್ದುಲ್ ಸಮದ್ ಸಿ.ಎಚ್ (ಕುವೈತ್), ಮುಹಮ್ಮದ್ ಶಫೀಕ್ ಸಿ.ಎಚ್ (ಖತ್ತರ್), ಸಿ.ಎಚ್. ಸಮೀರ, ಸಹೋದರ-ಸಹೋದರಿ ಯರು: ದಿ| ಸಿ.ಎಚ್.ಅಬ್ದುಲ್ ಖಾದರ್ ಹಾಜಿ, ಸಿ.ಎಚ್. ಇಬ್ರಾಹಿಂ ಹಾಜಿ, ಸಿ.ಎಚ್. ಆಯಿಶ, ಸಿ.ಎಚ್. ಅಬ್ದುಲ್ ರಹಿಮಾನ್, ಸಿ.ಎಚ್. ಮುಹಮ್ಮದ್, ಸಿ.ಎಚ್. ಅಬೂಬಕ್ಕರ್, ಸಿ.ಎಚ್. ಅಬ್ದುಲ್ ಹಮೀದ್, ಸಿ.ಎಚ್. ಹಸೈನಾರ್ ಎಂಬಿವರನ್ನು ಅಗಲಿದ್ದಾರೆ.







