ದಿನನಿತ್ಯ ನೂರಾರು ವಾಹನಗಳು ಸಂಚರಿಸುವ ರಸ್ತೆ ದುಸ್ಥಿತಿಯಲ್ಲಿ: ಪೆರ್ಲ-ಸ್ವರ್ಗ ರಸ್ತೆ ಅಭಿವೃದ್ಧಿಆಗ್ರಹಿಸಿ ಶಾಸಕರಿಗೆ ಮನವಿ
ಪೆರ್ಲ: ಸ್ವರ್ಗ- ಪೆರ್ಲ (ಸೂರಂಬೈಲ್) ರಸ್ತೆ ಅಭಿವೃದ್ಧಿ ಆಗ್ರಹಿಸಿ ಎಣ್ಮಕಜೆ ಮಂಡಲ ೮ನೇ ವಾರ್ಡ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಶಾಸಕ ಎಕೆಎಂ ಅಶ್ರಫ್‌ರಿಗೆ ಮನವಿ ನೀಡಲಾಯಿತು. ಪೆರ್ಲ ಪೇಟೆಯಿಂದ ಪಾಣಾಜೆ ಮೂಲಕ ಪುತ್ತೂರು ಸಂಪರ್ಕಿಸುವ ಪೆರ್ಲ-ಸ್ವರ್ಗ ರಸ್ತೆಯನ್ನು ಅಗಲಗೊಳಿಸಿ ನವೀಕರಿಸುವಂತೆ ಸಮಿತಿ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದೆ. ಕರ್ನಾಟಕದ ಪುತ್ತೂರು ಮಾತ್ರವಲ್ಲದೆ ಬೆಳ್ಳೂರು ಪಂಚಾಯತ್ ವ್ಯಾಪ್ತಿ ಮೂಲಕ ಸುಳ್ಯಪದವು, ಈಶ್ವರಮಂಗಲ, ಮುಳ್ಳೇರಿಯ, ಕುಂಬ್ಡಾಜೆ ಪಂಚಾಯತ್‌ನ ಏತಡ್ಕ ಸಹಿತ ವಿವಿಧ ಭಾಗಗಳಿಗೆ ಸಂಪರ್ಕಿಸುವ ಪ್ರಧಾನ ರಸ್ತೆ ಇದಾಗಿದೆ. ಕಾಸರಗೋಡು, ಕುಂಬಳೆ, …