ಅವಯವ ಅವ್ಯವಹಾರ ಪ್ರಕರಣ: ಮುಖ್ಯ ಸೂತ್ರಧಾರ ನಜೀಬ್‌ನ ಕಾಸರಗೋಡಿನ ಮನೆ ಸಹಿತ ರಾಜ್ಯದ ವಿವಿಧೆಡೆ ಇ.ಡಿ. ದಾಳಿ

ಕಾಸರಗೋಡು: ಕೇರಳವನ್ನು ಕೇಂದ್ರವನ್ನಾಗಿಸಿ ನಡೆಸುತ್ತಿರುವ ಅಕ್ರಮ ಅವಯವ ಅವ್ಯವಹಾರ ದಂಧೆಯ ಪ್ರಧಾನ ಸೂತ್ರಧಾರ ಕಾಸರಗೋಡು  ಮುಹಮ್ಮದ್ ನಜೀಬ್ ಕಲ್ಲಟ್ರನ  ಕಳನಾಡಿನಲ್ಲಿ ರುವ ಮನೆ ಸಹಿತ  ರಾಜ್ಯದ ವಿವಿಧೆಡೆಗಳಲ್ಲಿ  ಇಂದು ಇ.ಡಿ ದಾಳಿ ನಡೆಸುತ್ತಿದೆ.   ಎರ್ನಾಕುಳಂ, ಕೊಲ್ಲಂನ ಕೆಲವು ಆಸ್ಪತ್ರೆಗಳು ಹಾಗೂ ವ್ಯವಹಾರದ ಕೇಂದ್ರಗಳಲ್ಲಿ ಇಂದು ಬೆಳಿಗ್ಗಿನಿಂದ ಏಕ ಕಾಲದಲ್ಲಿ ಇ.ಡಿ ದಾಳಿ ನಡೆಸಿ ತಪಾಸಣೆ ಆರಂಭಿಸಿದೆ. ಇದೊಂದು ಅಂತಾರಾಷ್ಟ್ರೀಯ ಅವಯವ ಸಾಗಾಟ ದಂಧೆಯಾಗಿದೆ ಯೆಂದು ಇ.ಡಿ ನಡೆಸಿದ ತನಿಖೆ ಯಲ್ಲಿ ತಿಳಿದುಬಂದಿರುವುದಾಗಿ ವರದಿಯಾಗಿದೆ. ಅವಯವ ದಾನಕ್ಕಾಗಿ ಮುಂದಾಗುವವರಿಗೆ …

ಆಶಾ ಹೋಟೆಲ್ ಮಾಲಕ ನಿಧನ

ಕಾಸರಗೋಡು: ಹಳೆ ಬಸ್ ನಿಲ್ದಾಣದ ಬಳಿಯ ಆಶಾ ಹೋಟೆಲ್ ಮಾಲಕರಾಗಿದ್ದ  ಪುರುಷೋತ್ತಮನ್ (85) ನಿಧನ ಹೊಂದಿದರು. ನುಳ್ಳಿಪ್ಪಾಡಿ ತಳಂಗರೆ ಕ್ಲಸ್ಟರ್ ಸೌಪರ್ಣಿಕ ನಿವಾಸದಲ್ಲಿ ವಾಸವಾಗಿದ್ದರು. ಮೃತರು ಪತ್ನಿ ಲಲಿತ, ಮಕ್ಕಳಾದ ಉಮೇಶ್ (ಆಶಾ ಹೋಟೆಲ್ ಮಾಲಕ), ದಿನೇಶ್ (ಗಲ್ಫ್), ಆಶಾ, ಅಳಿಯಂದಿರಾದ ಮನೋಹರನ್, ಶ್ರೀಕುಮಾರ್, ಸೊಸೆಯಂದಿರಾದ ಮೇಘನ, ಉಷಾ, ಸಹೋದರ- ಸಹೋದರಿ ಯರಾದ  ಬಾಲಕೃಷ್ಣನ್, ರಾಘವನ್, ನವೀನ್, ಲೀಲಾ, ರಾಧಾ,  ಭಾಗ್ಯಶ್ರೀ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಓರ್ವೆ ಪುತ್ರಿ ಉಷಾ ಹಾಗೂ ಓರ್ವೆ ಸಹೋದರಿ ಸೀಮಂತಿ …

ಬಸ್ ಕಂಡಕ್ಟರ್ ನಿಧನ

ಬಂದ್ಯೋಡು:  ಫಿರ್ದೌಸ್ ಬಸ್ ಕಂಡಕ್ಟರ್ ಆಗಿದ್ದ ಯೂಸಫ್ ಸಾಹಿದ್ (65) ನಿಧನ ಹೊಂದಿದರು. ಮೊಗ್ರಾಲ್ ನಿವಾಸಿಯಾದ ಇವರು ಬಂದ್ಯೋಡು ಅಡ್ಕದಲ್ಲಿ ವಾಸವಾಗಿದ್ದರು. ಮೃತರು ಪತ್ನಿ ಸಾರ, ಮಕ್ಕಳಾದ ಶೇಖ್ ಮುಹಮ್ಮದ್ ಸಿಯಾನ್, ಸನ, ಫಾತಿಮ, ಸೊಸೆ ಮುನೀಸ ಮಂಜೇಶ್ವರ, ಸಹೋದರಿ ಯರಾದ ಖೈರುನ್ನಿಸ, ಆಸ್ಯ, ಖುರ್ಷಿದ, ಬದ್ರುನ್ನಿಸ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಸಮಾಜಘಾತಕರನ್ನು ಮಟ್ಟಹಾಕಲು ಹೊಸ ಕ್ರಿಯಾ ಯೋಜನೆ-ಎಸ್.ಪಿ ನಿತಿನ್‌ರಾಜ್

ಕಾಸರಗೋಡು: ಸಮಾಜಘಾತಕರನ್ನು ಹಾಗೂ ಅಪರಾಧ ಕೃತ್ಯಗಳನ್ನು ಮಟ್ಟಾ ಹಾಕಲು ಹೊಸ ಕ್ರಿಯಾ ಯೋಜನೆಗೆ ರೂಪು ನೀಡಲಾಗುವುದೆಂದು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯಾಗಿ  ನಿನ್ನೆ ಕರ್ತವ್ಯ ವಹಿಸಿಕೊಂಡ ಕಾಸರಗೋಡು ಜಿಲ್ಲೆಯವರೇ ಆಗಿರುವ ಪಿ. ನಿತಿನ್‌ರಾಜ್ ಹೇಳಿದ್ದಾರೆ. ಗೂಂಡಾಗಳ ಸದ್ದಡಗಿಸಲಾಗುವುದು. ಮಾದಕದ್ರವ್ಯ ದಂಧೆಯನ್ನು ಬೇರು ಸಹಿತ ಕಿತ್ತುಹಾಕಲು ಮೊದಲ ಆದ್ಯತೆ ನೀಡಲಾಗುವುದು ಮತ್ತು ಮಾದಕ  ವ್ಯಸನದ ದುಷ್ಪರಿಣಾಮಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರ ಮಗಳನ್ನು ಹಮ್ಮಿಕೊಳ್ಳಲಾಗುವುದು. ಮಾದಕದ್ರವ್ಯ ದಂಧೆಯಲ್ಲಿ ತೊಡಗಿದವರು ಆ ಬಗ್ಗೆ ಸ್ವಯಂ ಚಿಂತನೆ ನಡೆಸಿ ಅದನ್ನು …

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕೆಯ 30 ಸಾವಿರ ರೂ. ಕಳವು

ಕುಂಬಳೆ: ಕೇರಳ ರಾಜ್ಯ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ 30 ಸಾವಿರ ರೂಪಾಯಿ ಕಳವಿಗೀಡಾದ ಬಗ್ಗೆ ದೂರಲಾಗಿದೆ.  ಈ ಹಿನ್ನೆಲೆಯಲ್ಲಿ ಬಸ್ಸನ್ನು ಪೊಲೀಸ್ ಠಾಣೆಗೆ ತಲುಪಿಸಿ ಎಲ್ಲಾ ಪ್ರಯಾಣಿಕ ರನ್ನು ಪರಿಶೀಲಿಸಿದರೂ  ಹಣ ಪತ್ತೆಹಚ್ಚಲಾಗಲಿಲ್ಲ. ನಿನ್ನೆ ಸಂಜೆ 6 ಗಂಟೆಗೆ ಕಾಸರಗೋಡಿನಿಂದ ಮಂಗ ಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕಾಸರಗೋಡಿನಿಂದ ಪ್ರಯಾಣಿಸಿದ ಮೊಗ್ರಾಲ್ ಪುತ್ತೂರು ನಿವಾಸಿಯಾದ ಮಹಿಳೆಯ ಹಣ ಕಳವಿಗೀಡಾಗಿದೆ. ಬಸ್ ಚೌಕಿಗೆ ತಲುಪಿದೊಡನೆ ಮಹಿಳೆ ಪರ್ಸ್ ಪರಿಶೀಲಿಸಿದಾಗ ಅದರಲ್ಲಿದ್ದ 30 ಸಾವಿರ ರೂಪಾಯಿ ನಾಪತ್ತೆಯಾಗಿ ತ್ತೆನ್ನಲಾಗಿದೆ. …

ರಾಜ್ಯದಲ್ಲಿ ವಿವಿಧ ರೋಗ ವ್ಯಾಪಕಗೊಂಡಿರುವಾಗ ಜಿಲ್ಲೆಯ ವಿವಿಧೆಡೆ ನೊಣಗಳ ಹಾವಳಿ

ಕಾಸರಗೋಡು: ರಾಜ್ಯದಲ್ಲಿ ವಿವಿಧ ರೀತಿಯ ಸಾಂಕ್ರಾಮಿಕ ರೋಗಗಳು ವ್ಯಾಪಕಗೊಂಡ ಬಗ್ಗೆ ವರದಿಯಾಗುತ್ತಿರುವ ಮಧ್ಯೆಯೇ ಕಾಸರಗೋಡಿನ ವಿವಿಧೆಡೆ ರೋಗ ಹರಡುವ ಭೀತಿ ಹುಟ್ಟಿಕೊಂಡಿದೆ. ಮಳೆಗಾಲ  ಆರಂಭಗೊಂಡೊಡನೆ ಆಹಾರ ವಸ್ತುಗಳನ್ನು ಮಾರಾಟ ನಡೆಸುವ ಸಂಸ್ಥೆಗಳಲ್ಲ್ಲಿ  ನೊಣಗಳ ಹಾವಳಿ ತೀವ್ರಗೊಂಡಿದೆ.  ಮೀನು ಮಾರುಕಟ್ಟೆ ಸಹಿತ ಮಾಂಸದಂಗಡಿಗಳಲ್ಲೂ ನೊಣಗಳು ತುಂಬಿಕೊಂಡಿರುವುದು ಕಂಡುಬರುತ್ತಿದೆ. ಈ ನೊಣಗಳನ್ನು ಅಲ್ಪವಾದರೂ ಇಲ್ಲದಾಗಿಸಬಹುದಾದ ನೊಣ ನಾಶಕದಂತಹ ಇಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸದಿರುವುದೇ ಮಾರುಕಟ್ಟೆ ಸಹಿತ ವಿವಿಧೆಡೆ ಸಮಸ್ಯೆ ತೀವ್ರಗೊಳ್ಳಲು ಕಾರಣವಾಗಿದೆ. ಇದೇ ವೇಳೆ ಇದೆಲ್ಲಾ ತಿಳಿದಿದ್ದರೂ ಆರೋಗ್ಯ ಇಲಾಖೆ ಕಣ್ಮುಚ್ಚಿ …

ಅಡೂರು:  ಪ್ಲಸ್‌ಟು ವಿದ್ಯಾರ್ಥಿ ನೇಣುಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ; ಶೋಕಸಾಗರ

ಮುಳ್ಳೇರಿಯ: ಅಡೂರು ಪಾಂಡಿಯಲ್ಲಿ ಪ್ಲಸ್‌ಟು ವಿದ್ಯಾರ್ಥಿ ನೇಣು ಬಿಗಿದು ಸಾವಿಗೀಡಾದ ಘಟನೆ ಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಪಾಂಡಿ ಬಳಿಯ ಬೆಳ್ಳಚ್ಚೇರಿ ನಿವಾಸಿ ಶಶಿ ಎಂಬವರ ಪುತ್ರ ಗೋಕುಲ್ (17) ಮೃತಪಟ್ಟ ಬಾಲಕನಾಗಿದ್ದಾನೆ. ಈತ ಪಾಂಡಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್‌ಟು ವಿದ್ಯಾರ್ಥಿಯಾಗಿದ್ದಾನೆ. ಮೊನ್ನೆ  ರಾತ್ರಿ 10.30ರ ವೇಳೆ ಗೋಕುಲ್ ಮನೆಯ ಬೆಡ್‌ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಕೂಡಲೇ ಆತನನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಘಟನೆ ವೇಳೆ ತಾಯಿ ಧನ್ಯ ಹಾಗೂ ಗೋಕುಲ್ …

ಕುಣಿಯದಲ್ಲಿ ಬೀದಿ ನಾಯಿಗಳ ಕಾಟ: 18ಕೋಳಿಗಳ ಕೊಂದ ನಾಯಿ ಹಿಂಡು

ಕಾಸರಗೋಡು: ಪುಲ್ಲೂರು ಪೆರಿಯ ಪಂಚಾಯತ್‌ನ ಕುಣಿಯದಲ್ಲಿ ಬೀದಿ ನಾಯಿಗಳ ಉಪಟಳ ತೀವ್ರಗೊಂಡಿದೆ ಎಂದು ದೂರಲಾಗಿದೆ. ಶಾಲೆ, ಮದ್ರಸ ವಿದ್ಯಾರ್ಥಿಗಳು ಭೀತಿಯೊಂದಿಗೆ ಪ್ರಯಾಣಿಸುತ್ತಿದ್ದಾರೆ. ಈ ಮಧ್ಯೆ ಪುಣಿಯ ತೆಕ್ಕೇಕುನ್‌ನ ನಾಸರ್‌ರ ಮನೆಯಂಗಳದಲ್ಲಿ ಕೋಳಿಗೂಡನ್ನು ಹಾನಿಗೊಳಿಸಿದ ಬೀದಿನಾಯಿಗಳ ಹಿಂಡು 18 ಕೋಳಿಗಳನ್ನು ತಿಂದಿದೆ.  ನಾಲ್ಕು ಕೋಳಿಗಳನ್ನು ಬೀದಿನಾಯಿಗಳು ಕಚ್ಚಿಕೊಂಡು ಹೋಗಿರುವುದಾಗಿಯೂ ಮನೆ ಮಂದಿ ತಿಳಿಸಿದ್ದಾರೆ. ಇಂದು ಬೆಳಿಗ್ಗೆ ನಾಯಿಗಳ ಉಪಟಳ ತೀವ್ರಗೊಂಡಿ ರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ವಾಮಾಚಾರದ ಭಾಗವೆಂದು ತಿಳಿಸಿ ಪೂಜೆ ಮಧ್ಯೆ ಬಾಲಕಿಗೆ ಲೈಂಗಿಕ ಉಪಟಳ: ಬಿಜೆಪಿ ಮುಖಂಡ, ಅರ್ಚಕ ಪೋಕ್ಸೋ ಪ್ರಕಾರ ಸೆರೆ

ಕೊಲ್ಲಂ: ವಾಮಾಚಾರದ ಮರೆಯಲ್ಲಿ 15ರ ಹರೆಯದ ಬಾಲಕಿಯನ್ನು ದೌರ್ಜನ್ಯಗೈಯ್ಯಲು ಯತ್ನಿಸಿದ ಪ್ರಕರಣದಲ್ಲಿ ಬಿಜೆಪಿ ಸ್ಥಳೀಯ ಮುಖಂಡನಾದ ಅರ್ಚಕ ಸೆರೆಯಾಗಿದ್ದಾನೆ. ಕೊಲ್ಲಂ ಈಸ್ಟ್ ಜಿಲ್ಲಾ ಸಮಿತಿ ಸದಸ್ಯ ಬಿಜು (50) ಸೆರೆಯಾದ ವ್ಯಕ್ತಿ. ಅಡೂರು ನೆಲ್ಲುಮುಳ್ ನಿವಾಸಿಯಾದ 15ರ ಹರೆಯದ ಬಾಲಕಿಯನ್ನು ಈತ ದೌರ್ಜನ್ಯಗೈಯ್ಯಲು ಯತ್ನಿಸಿದ್ದ. ಬಾಲಕಿಯ ಮನೆಯಲ್ಲಿ ಪೂಜೆಗೆ ಬಿಜು ತಲುಪಿದ್ದನು. ಮನೆಯೊಳಗೆ ಪೂಜೆಗೆ ಬೇಕಾದ ಸಿದ್ಧತೆಗಳನ್ನು ನಡೆಸಿದ ಬಳಿಕ ಹೆತ್ತವರನ್ನು ಕೊಠಡಿಯಿಂದ ಹೊರಗೆ ಕಳುಹಿಸಿ ಬಾಗಿಲು ಮುಚ್ಚಿದನು. ಬಳಿಕ ವಾಮಾಚಾರದ ಭಾಗವೆಂದು ತಿಳಿಸಿ ಬಾಲಕಿಗೆ ಉಪಟಳ …

ಮಜಲ್ ರಸ್ತೆ ಸಂಚಾರಯೋಗ್ಯಗೊಳಿಸಲು ಪಂ. ಉಪಾಧ್ಯಕ್ಷೆಯಿಂದ ಮುಖ್ಯಮಂತ್ರಿಗೆ ಮನವಿ

ಕಾಸರಗೋಡು: ಮೊಗ್ರಾಲ್ ಪುತ್ತೂರು ಪಂಚಾಯತ್‌ನ ಮಜಲ್ ರಸ್ತೆಯನ್ನು ಸಂಚಾರಯೋಗ್ಯ ಗೊಳಿಸಬೇಕೆಂದು ಪಂಚಾಯತ್ ಉಪಾಧ್ಯಕ್ಷೆ ಅರ್ಫಾನಾ ನಜೀಬ್ ಮುಖ್ಯಮಂತ್ರಿ ವಿ.ಡಿ. ಸತೀಶನ್, ಲೋಕೋಪಯೋಗಿ ಇಲಾಖೆ ಸಚಿವ ಪಿ.ಕೆ. ಬಶೀರ್, ಚೀಫ್ ಇಂಜಿನಿಯರ್, ಜನಪ್ರತಿನಿಧಿಗಳು ಎಂಬಿವರಲ್ಲಿ ಮನವಿ ಮೂಲಕ ಆಗ್ರಹಿಸಿದ್ದಾರೆ. ಕಳೆದ ೮ ವರ್ಷದಿಂದ ದುರಸ್ತಿ ನಡೆಸದೆ ಉಪೇಕ್ಷಿಸಿರುವ ರಸ್ತೆ ಅಪಘಾತ ಭೀತಿಯೊಡ್ಡುತ್ತಿದೆ. ವಿದ್ಯಾರ್ಥಿಗಳು, ವೃದ್ದರು, ಸ್ಥಳೀಯರು ಈ ರಸ್ತೆಯಲ್ಲಿ ಸಂಚರಿಸುವುದಕ್ಕೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಚರಂಡಿಯ ಅಭಾವ ರಸ್ತೆಯನ್ನು ಶೋಚನೀಯಗೊಳಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಮಜಲ್ ನಿವಾಸಿಗಳ ಹಲವು ಕಾಲದ …