ಹಿರಿಯ ಸೈಕಲ್ ವ್ಯಾಪಾರಿ ನಿಧನ

ಕಾಸರಗೋಡು: ಚಕ್ಕರಬಜಾರ್‌ನ ಹಿರಿಯ ಸೈಕಲ್ ಅಂಗಡಿ ಮಾಲಕ ನಾಗಿದ್ದ ಅಡ್ಕತ್ತಬೈಲು ಕೋಟವಳಪ್ ನಿವಾಸಿ ಕೆ.ಟಿ. ರವಿಶಂಕರ್ (63) ನಿಧನ ಹೊಂದಿದರು. ಮೃತರು ಪತ್ನಿ ಟಿ. ಬೇಬಿ, ಮಕ್ಕಳಾದ ಶಿಲ್ಪ, ಹರ್ಷಿತ, ಶಿಜಿನ, ರಮಿತ, ಅಳಿಯಂದಿರಾದ ಸುನಿಲ್, ರಾಜನ್, ಪ್ರಮೋದ್, ಮಂಜುಪ್ರಸಾದ್, ಸಹೋದರ ಸಹೋದರಿಯರಾದ ಎಸ್. ಸುಬ್ರಹ್ಮಣ್ಯನ್, ಪ್ರೇಮ, ಜಯಂತಿ, ಜ್ಯೋತಿ, ಶಶಿಕಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಹೃದಯಾಘಾತ ಶಾಲಾ ನೌಕರೆ ನಿಧನ

ಕಾಸರಗೋಡು: ಶಾಲೆಯ ನೌಕರೆಯಾದ ಯುವತಿ ಹೃದಯಾಘಾತದಿಂದ ಮೃತಪಟ್ಟರು. ವೆಳ್ಳಿಕ್ಕೋತ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಆಫೀಸ್ ಅಸಿಸ್ಟೆಂಟ್, ಮಾಣಿಕೋತ್ ಶಾಲೆ ಸಮೀಪ ನಿವಾಸಿಯಾದ ಬಿಂದು (45) ಮೃತಪಟ್ಟವರು. ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಕಾಸರಗೋಡು ಆಸ್ಪತ್ರೆಗೆ  ಕೊಂಡೊಯ್ಯಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಇವರ ಪತಿ ಉತ್ತೇಶ್ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಪಾರ್ವಣೇಂದು, ದೇವನಂದನ್, ಸಹೋದರರಾದ ಜಯರಾಮನ್, ಯಶವಾನಂದನ್, ಕುಂದಿರಿಯಾಕ್ಷನ್, ಹಿತೇಶನ್, ಸಹೋದರಿಯರಾದ ಚಂದ್ರಾವತಿ, ಶ್ರೀಲತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಚಾಲಕ ಅಸ್ವಸ್ಥ: ನಿಯಂತ್ರಣ ತಪ್ಪಿದ ಸಾರಿಗೆ ಬಸ್ ಢಿಕ್ಕಿ ಹೊಡೆದು ಪಾದಚಾರಿ ಮಹಿಳೆ ಮೃತ್ಯು

ತೃಶೂರು: ಚಾಲಕನಿಗೆ ಅಸ್ವಸ್ಥತೆ ಉಂಟಾದ ಹಿನ್ನೆಲೆಯಲ್ಲಿ ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ ಹೊಡೆದು ಪಾದಚಾರಿ ಮಹಿಳೆ ಮೃತಪಟ್ಟರು. ಕಾಞೂರು ನಿವಾಸಿ ಬಿಂದು (49) ಮೃತಪಟ್ಟ ಮಹಿಳೆ. ಇಂದು ಬೆಳಿಗ್ಗೆ ೭ ಗಂಟೆ ವೇಳೆ ಪುದುಕ್ಕಾಡ್‌ನಲ್ಲಿ ಅಪಘಾತ ಸಂಭವಿಸಿದೆ. ನಡೆದುಕೊಂಡು ಹೋಗುತ್ತಿದ್ದ ಈಕೆಗೆ ಬಸ್ ಢಿಕ್ಕಿ ಹೊಡೆದ ಬಳಿಕ ಮುಂದುವರಿದು ಸಾಗಿದ ಬಸ್ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿರುವ ಅಂಗಡಿಗೆ ನುಗ್ಗಿದೆ. ಚಾಲಕ ಸೀಟ್‌ನಲ್ಲಿ ಕುಸಿದು ಬಿದ್ದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಸ್ಥಳಕ್ಕೆ ತಲುಪಿದವರು ಚಾಲಕನನ್ನು ಕೂಡಲೇ ಆಸ್ಪತ್ರೆಗೆ …

ಕಿಳಿಂಗಾರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ  ಆಮಂತ್ರಣ ಪತ್ರಿಕೆ ಬಿಡುಗಡೆ

ನೀರ್ಚಾಲು: ಕಿಳಿಂಗಾರು ಯುವಕೇಸರಿ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಏಕಲವ್ಯ ಬಾಲಗೋಕುಲದ ವತಿಯಿಂದ ಸೆಪ್ಟಂಬರ್ 6ರಂದು ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿಯ ಆಮಂತ್ರಣಪತ್ರಿಕೆಯನ್ನು ಕಿಳಿಂಗಾರು ಶಾಲಾ ಪರಿಸರದಲ್ಲಿ ತಾಲೂಕು ಸಪ್ಲೈ ಆಫೀಸರ್ ಕೃಷ್ಣ ನಾಯ್ಕ್ ಬಂಡ್ರಡ್ಕ ಬಿಡುಗಡೆಗೊಳಿಸಿದರು. ಕ್ಲಬ್‌ನ ಅಧ್ಯಕ್ಷ ಸುಧಾಕರ ಅನ್ನೆಪಲ್ಲಡ್ಕ ಅಧ್ಯಕ್ಷತೆ ವಹಿಸಿದರು. ಕ್ಲಬ್ ಸಂಚಾಲಕ ವಸಂತ ಅನ್ನೆಪಲ್ಲಡ್ಕ, ರಾಮ ಬೇರಿಗೆ, ರಂಜಿತ್ ಕಿಳಿಂಗಾರು, ಜಯರಾಜ ಅನ್ನೆಪಲ್ಲಡ್ಕ, ಯಜ್ಞ ಕುಮಾರ್, ಉದಯ, ರಕ್ಷಿತ್, ಏಕಲವ್ಯ, ರಾಜೇಶ್ ಉಪಸ್ಥಿತರಿದ್ದರು. ಕೋಶಾಧಿಕಾರಿ ಪ್ರಕಾಶ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ …

ಬಿರುಸಿನ ಮಳೆ: ಜಿಲ್ಲಾ ವಿಕೋಪ ನಿವಾರಣಾ ಪ್ರಾಧಿಕಾರ ಸಭೆಯಲ್ಲಿ ಸ್ಥಿತಿಗತಿಗಳ ಅವಲೋಕನ

ಕಾಸರಗೋಡು: ಜಿಲ್ಲಾ ವಿಕೋಪ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್‌ರ ಅಧ್ಯಕ್ಷತೆಯಲ್ಲಿ ಜಿಲ್ಲಾ ವಿಕೋಪ ನಿವಾರಣಾ ಪ್ರಾಧಿಕಾರ ಸಭೆ ಸೇರಿ ಮಳೆಗಾಲಕ್ಕೆ ಸಂಬಂಧಿಸಿದ ಜಿಲ್ಲೆಯ ಸ್ಥಿತಿಗತಿಗಳ ಮೌಲೀಕರಣ ನಡೆಸಿದೆ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಲ್ಲಿ ಅಧಿಕಾರಿಗಳು ಫೀಲ್ಡ್‌ನಲ್ಲಿ ಇದ್ದರು ಎಂದು ಎಲ್ಲಾ ಚಟುವಟಿಕೆಗಳನ್ನು ಸೂಕ್ತವಾಗಿ ಸಂಯೋಜಿಸಲು ಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಇನ್ನೆರಡು ದಿನ ಕೂಡಾ ಜಾಗ್ರತೆಯೊಂದಿಗೆ ಕಾರ್ಯಾಚರಿಸಬೇಕೆಂದು ಅವರು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಎಬ್ರಹಾಂ, ಎಡಿಎಂ ಪಿ. ಉದಯಕುಮಾರ್, ಕಾಞಂಗಾಡ್ ಆರ್‌ಡಿಒ …

ಕಡಲ್ಕೊರೆತದಿಂದ ಹಾನಿಯಾದ ಉಪ್ಪಳ ಶಾರದಾನಗರ ಪ್ರದೇಶಕ್ಕೆ ಬಿಜೆಪಿ ತಂಡ ಭೇಟಿ

ಉಪ್ಪಳ: ಬಿಜೆಪಿ ತಂಡ ಜಿಲ್ಲಾಧಿಕಾರಿಗೆ ದೂರು ನೀಡಿದ ಬೆನ್ನಲ್ಲೇ, ಗ್ರಾಮ ಅಧಿಕಾರಿ ಮತ್ತು ತಹಶೀಲ್ದಾರ್ ಸ್ಥಳಕ್ಕೆ ತಲುಪಿದರು. ಬಿಜೆಪಿ ತಂಡ ಮಂಗಲ್ಪಾಡಿ ಪಂಚಾಯತ್, ಶಾರದನಗರ, ಮೂಸೋಡಿ ಮತ್ತು ಮಣಿಮುಂಡದಲ್ಲಿ ಕಡಲ್ಕೊರೆತ ತೀವ್ರವಾಗಿದ್ದ ಪ್ರದೇಶಗಳಿಗೆ ಭೇಟಿ ನೀಡಿದೆ. ಮನೆಗಳು ಸಮುದ್ರದಲ್ಲಿ ಮುಳುಗುವ ಹಂತದಲ್ಲಿರುವ ಈ ಪ್ರದೇಶಗಳಿಗೆ ಶಾಸಕರು ಅಥವಾ ಪಂಚಾಯತ್ ಸದಸ್ಯರು ಈ ಮೊದಲು ಭೇಟಿ ನೀಡದಿರುವುದನ್ನು ಬಿಜೆಪಿ ಖಂಡಿಸಿದೆ. ಈ ಸಮಯದಲ್ಲಿ ಜನರ ಜೀವ, ಆಸ್ತಿ ಮತ್ತು ವಸತಿ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಬಿಜೆಪಿ ಕುಂಬಳೆ …

ಬಿರುಸಿನ ಮಳೆ: ಜಿಲ್ಲಾ ವಿಕೋಪ ನಿವಾರಣಾ ಪ್ರಾಧಿಕಾರ ಸಭೆಯಲ್ಲಿ ಸ್ಥಿತಿಗತಿಗಳ ಅವಲೋಕನ

ಕಾಸರಗೋಡು: ಜಿಲ್ಲಾ ವಿಕೋಪ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್‌ರ ಅಧ್ಯಕ್ಷತೆಯಲ್ಲಿ ಜಿಲ್ಲಾ ವಿಕೋಪ ನಿವಾರಣಾ ಪ್ರಾಧಿಕಾರ ಸಭೆ ಸೇರಿ ಮಳೆಗಾಲಕ್ಕೆ ಸಂಬಂಧಿಸಿದ ಜಿಲ್ಲೆಯ ಸ್ಥಿತಿಗತಿಗಳ ಮೌಲೀಕರಣ ನಡೆಸಿದೆ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಲ್ಲಿ ಅಧಿಕಾರಿಗಳು ಫೀಲ್ಡ್‌ನಲ್ಲಿ ಇದ್ದರು ಎಂದು ಎಲ್ಲಾ ಚಟುವಟಿಕೆಗಳನ್ನು ಸೂಕ್ತವಾಗಿ ಸಂಯೋಜಿಸಲು ಸಾಧ್ಯವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಇನ್ನೆರಡು ದಿನ ಕೂಡಾ ಜಾಗ್ರತೆಯೊಂದಿಗೆ ಕಾರ್ಯಾಚರಿಸಬೇಕೆಂದು ಅವರು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಎಬ್ರಹಾಂ, ಎಡಿಎಂ ಪಿ. ಉದಯಕುಮಾರ್, ಕಾಞಂಗಾಡ್ ಆರ್‌ಡಿಒ …

ಕೃಷಿಕ ನಿಧನ 

ಉಪ್ಪಳ: ಬಾಯಾರು ತಲೆಂಗಳ ನಿವಾಸಿ ಪ್ರಗತಿಪರ ಕೃಷಿಕ, ಸಾಯಿ ಭಕ್ತ ಕೃಷ್ಣ ಭಟ್ (88) ಶುಕ್ರವಾರ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಬಾಯಾರು ಪ್ರಶಾಂತಿ ವಿದ್ಯಾ ಕೇಂದ್ರದ ಸಂಸ್ಥಾಪಕ ಟ್ರಸ್ಟಿಗಳಲ್ಲಿ ಓರ್ವರಾಗಿದ್ದರು. ಬಾಯಾರು ಸತ್ಯಸಾಯಿ ಸೇವಾ ಸಮಿತಿಯ ಹಿರಿಯ ಸದಸ್ಯರಾಗಿದ್ದರು. ಮೃತರು ಪತ್ನಿ ಸುಶೀಲ, ಮಕ್ಕಳಾದ ಶ್ರೀರಾಮ ಭಟ್ (ನಿವೃತ್ತ ಡಿ.ವೈ.ಎಸ್.ಪಿ ಕೇರಳ ಪೊಲೀಸ್), ಶ್ರೀಹರಿ ಭಟ್, ಶ್ರೀದೇವಿ, ಸೊಸೆಯಂದಿರಾದ ಗಾಯತ್ರಿ, ಗೀತಾ, ಅಳಿಯ ರಮೇಶ್ ಭರಣ್ಯ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.