ಲಕ್ಷ್ಮಿ ನಿಧನ

ಬದಿಯಡ್ಕ: ಪಳ್ಳತ್ತಡ್ಕ ಸಮೀಪದ ಚೊಟ್ಟತ್ತಡ್ಕ ನಿವಾಸಿ ಬಟ್ಯ ನಾಯ್ಕ್‌ರ ಪತ್ನಿ ಲಕ್ಷ್ಮಿ (68) ನಿಧನ ಹೊಂದಿ ದರು. ಮೃತರು ಪತಿ, ಮಕ್ಕಳಾದ ಚಂದ್ರ, ಗೀತ, ಜಯಶ್ರೀ, ಶಶಿಕಲ, ಅಳಿಯಂ ದಿರಾದ ಸುಬ್ರಾಯ, ಅಪ್ಪಯ ನಾಯ್ಕ, ಸೊಸೆ ಸೂಜಾತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಅಳಿಯ ಕೃಷ್ಣ ಈ ಹಿಂದೆ  ನಿಧನ  ಹೊಂದಿದ್ದಾರೆ.

ಡಾಕ್ಟರ್‌ಗಳಿಲ್ಲ: ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಂಕಷ್ಟ, ಪ್ರತಿಭಟನೆಗೆ ಸಿದ್ಧತೆ

ಉಪ್ಪಳ: ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಶೋಚನೀಯಾವಸ್ಥೆ, ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸಬೇಕೆಂದು ಆಗ್ರಹಿಸಿ ಸಮಾಜಸೇವಕ ಮೆಹಮೂದ್ ಕೈಕಂಬ ಆಸ್ಪತ್ರೆ ಮುಂಭಾಗದಲ್ಲಿ ಜನಪರ ಸಹಕಾರದೊಂದಿಗೆ ಅನಿರ್ದಿಷ್ಟ ಕಾಲ ಉಪವಾಸ ಮುಷ್ಕರ ನಡೆಸುವ ಸಿದ್ಧತೆಯಲ್ಲಿದ್ದಾರೆ. ದಿನಂಪ್ರತಿ ನೂರಾರು ರೋಗಿಗಳು ಚಿಕಿತ್ಸೆಗಾಗಿ ತಲುಪುವ ಈ ಆಸ್ಪತ್ರೆಯಲ್ಲಿ ಡಾಕ್ಟರ್ ಗಳು ಇಲ್ಲದ ಕಾರಣ ಸಮಸ್ಯೆಯಾಗುತ್ತಿದೆ. ಮಂಗಲ್ಪಾಡಿ ತಾಲೂಕಿನ ವಿವಿಧ ಭಾಗಗಳಿಂದ ಹಾಗೂ ಒಳ ಪ್ರದೇಶಗಳಿಂದ ತಲುಪುವ ಬಡ ರೋಗಿಗಳು ಗಂಟೆಗಳ ಕಾಲ ಕಾದು ನಿಂತರೂ ಚಿಕಿತ್ಸೆ ಲಭಿಸದೆ ಹಿಂತಿರುಗಬೇಕಾಗುತ್ತಿದೆ. ಆಸ್ಪತ್ರೆಯಲ್ಲಿ ರೋಗಿಗಳ ಸಂದಣಿ …