ಧಾರಾಕಾರ ಮಳೆ: ಹಾನಿಗೀಡಾದ ನಗರದ  ರಸ್ತೆಗಳು

ಕಾಸರಗೋಡು: ಭಾರೀ ಮಳೆಗೆ ಕಾಸರಗೋಡು ನಗರದ ಹಲವು ರಸ್ತೆಗಳು ಹದಗೆಟ್ಟು ವಾಹನ ಸಂಚಾರಕ್ಕೆ ಸಮಸ್ಯೆ ಸೃಷ್ಟಿಯಾಗಿದೆ. ತಿಂಗಳುಗಳ ಹಿಂದೆಯಷ್ಟೇ ನೆಲ್ಲಿಕುಂಜೆ ಬಂದರು ಹಾಗೂ ಲೈಟ್‌ಹೌಸ್ ಭಾಗದತ್ತ ಸಾಗುವ ಬೀಚ್ ರಸ್ತೆಗೆ  ಮೆಕ್ಕಡಾಂ ಡಾಮರೀಕರಣ ನಡೆಸಲಾಗಿತ್ತು.   ಬಳಿಕ ಸುರಿದ ಮಳೆಗೆ ಈ ರಸ್ತೆ ಪೂರ್ಣವಾಗಿ ಹಾನಿಗೀಡಾಗತೊಡಗಿದೆ. ರಸ್ತೆಯಲ್ಲಿ ಬೃಹದಾಕಾರದ ಹೊಂಡಗಳು ಸೃಷ್ಟಿಯಾಗಿದ್ದು ಅದರಲ್ಲಿ ಮಳೆ ನೀರು ತುಂಬಿಕೊಂಡಿದೆ.  ರಸ್ತೆ ಹದಗೆಟ್ಟಿರುವು ದರಿಂದಾಗಿ ದ್ವಿಚಕ್ರ ವಾಹನಗಳು ಸಹಿತ ಇತರ ವಾಹನಗಳು ಕೂಡಾ ಅಪಘಾತಕ್ಕೀಡಾಗುತ್ತಿರುವುದು ಸಾಮಾನ್ಯವಾಗಿದೆ. ಹಾನಿಗೀಡಾದ ರಸ್ತೆಯ ಕೆಲವೆಡೆಗಳಲ್ಲಿ ಇಂಟರ್ …

ಯುವಕ ನಾಪತ್ತೆ

ಉಪ್ಪಳ: ಯುವಕನೋರ್ವ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಉಪ್ಪಳ ಅಂಚಿಕಟ್ಟೆ  ಅಶ್ರಫ್ ಮಂಜಿಲ್‌ನ ಹಮೀದ್ ಹಾಜಿಯವರ ಪುತ್ರ ಅಬ್ದುಲ್ ರಹಿಮಾನ್ ಯು.ಎಚ್ (48) ನಾಪತ್ತೆಯಾದ ಯುವಕ. ಜುಲೈ ೨೫ರಂದು ಬೆಳಿಗ್ಗೆ 10 ಗಂಟೆಗೆ ಇವರು ಮನೆಯಿಂದ ಹೊರಗೆ ತೆರಳಿದ್ದು, ಅನಂತರ ಮರಳಿ ಬಂದಿಲ್ಲ ಎನ್ನಲಾಗಿದೆ. ವಿವಿಧೆಡೆ ಹುಡುಕಿದರೂ ಪತ್ತೆಹಚ್ಚಲಾಗದ ಹಿನ್ನೆಲೆಯಲ್ಲಿ ಸಹೋದರ ಮೊಹಮ್ಮದ್ ಬಶೀರ್ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಕುಂಬಳೆ ಸಾಮೂಹಿಕ ಆರೋಗ್ಯ ಕೇಂದ್ರಕ್ಕೆ   ನುಗ್ಗಿ ದಾಂಧಲೆ: ಆರೋಪಿಗಳಿಗಾಗಿ ಶೋಧ

ಕುಂಬಳೆ: ಕುಂಬಳೆ ಸಾಮೂಹಿಕ ಆರೋಗ್ಯ ಕೇಂದ್ರಕ್ಕೆ ಅತಿಕ್ರಮಿಸಿ ನುಗ್ಗಿ ದಾಂಧಲೆ ನಡೆಸಿದ ತಂಡದ ವಿರುದ್ಧ  ಕೇಸು ದಾಖಲಿಸಿಕೊಂಡ  ಕುಂಬಳೆ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.  ಆರೋಪಿಗಳ ಮಾಹಿತಿ ಲಭಿಸಿದೆಯೆಂದೂ ಅವರನ್ನು ಶೀಘ್ರ ಬಂಧಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಯ ನರ್ಸಿಂಗ್ ಸೀನಿಯರ್ ಆಫೀಸರ್ ರೇಖಾ ಆರ್ ನಾಯರ್ ನೀಡಿದ ದೂರಿನಂತೆ ಕಂಡರೆ ಪತ್ತಹಚ್ಚಬಹುದಾದ ಮೂವರ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ತಿಂಗಳ ೨ರಂದು ಮಧ್ಯಾಹ್ನ ೧ ಗಂಟೆ ವೇಳೆ ಘಟನೆ ನಡೆದಿದೆ. ಒ.ಪಿ ಟಿಕೆಟ್ ನಿಲ್ಲಿಸಲಾಯಿತೆಂದು ಆರೋಪಿಸಿ ತಂಡ  …

ಯುವಕ ನೆರೆಮನೆಯ  ಬಾವಿಗೆ ಹಾರಿ ಆತ್ಮಹತ್ಯೆ

ಉಪ್ಪಳ: ಯುವಕನೋರ್ವ ನೆರೆಮನೆಯ ಬಾವಿಗೆ ಹಾರಿ ಆತ್ಮಹತ್ಯೆಗೈದ ಘಟನೆ ನಡೆದಿದೆ. ಕೊಡ್ಲಮೊಗರು ಭಂಡಾರಮನೆಯ ಕಾಂತಪ್ಪ ಪೂಜಾರಿ ಎಂಬವರ ಪುತ್ರ ಕೆ.ನವೀನ್ (38) ಸಾವಿಗೆ ಶರಣಾದ ವ್ಯಕ್ತಿ.  ನಿನ್ನೆ ರಾತ್ರಿ ೭.೪೫ರ ವೇಳೆ ಇವರು ಬಾವಿಗೆ ಹಾರಿದ್ದಾರೆನ್ನ ಲಾಗಿದೆ.  ಈಬಗ್ಗೆ ಮನೆಯವರು ಕೂಡಲೇ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದರು. ಇದರಂತೆ ಉಪ್ಪಳದಿಂದ ತಲುಪಿದ ಅಗ್ನಿಶಾಮಕದಳ ಬಾವಿಯಿಂದ ನವೀನ್‌ರನ್ನು ಮೇಲಕ್ಕೆತ್ತಿದರೂ ಅವರ ಜೀವ ರಕ್ಷಿಸಲಾಗಲಿಲ್ಲ.  ನವೀನ್‌ರಿಗೆ ಅಸೌಖ್ಯ ಬಾಧಿಸಿತ್ತೆಂದೂ ಅದು ವಾಸಿಯಾಗದುದರಿಂದ ಮನನೊಂದು ಅವರು ಬಾವಿಗೆ ಹಾರಿರುವುದಾಗಿ ಸಂಶಯಿಸಲಾಗುತ್ತಿದೆಯೆಂದು ಹೇಳಲಾಗುತ್ತಿದೆ. ಮರಣೋತ್ತರ …

ಪಿಗ್ಮಿ ಸಂಗ್ರಾಹಕ ನಿಧನ

ಮಂಜೇಶ್ವರ: ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್‌ನ ಪಿಗ್ಮಿ ಸಂಗ್ರಾಹಕ, ಮಂಜೇಶ್ವರ ನಿವಾಸಿ ಶಾಂತರಾಮ.ಜಿ (೬೨) ನಿಧನ ಹೊಂದಿದರು. ಇವರು ಬ್ಯಾಂಕ್‌ನ ಪ್ರಧಾನ ಶಾಖೆಯಲ್ಲಿ ಹಲವು ವರ್ಷ ಗಳಿಂದ ಪಿಗ್ಮಿ ಸಂಗ್ರಾಹಕರಾಗಿ ದ್ದರು. ನಿನ್ನೆ ಸಂಜೆ ಇವರಿಗೆ ಮನೆ ಯಲ್ಲಿ ಹೃದಯÁಘಾತ ಉಂಟಾ ಗಿದ್ದು, ಕೂಡಲೇ ಹೊಸಂಗಡಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸ ಲಾಯಿತಾದರೂ ಅಷ್ಟರಲ್ಲಿ ನಿಧನ ಹೊಂದಿದ್ದಾರೆ. ಮೃತರು ಪತ್ನಿ ಶಾರದಾ, ಮಕ್ಕಳಾದ ಪ್ರಣನ್ಯ, ಪ್ರಣಮ್ಯ, ಸಹೋದರಿಯರಾದ ಸಾವಿತ್ರಿ, ಸತ್ಯಾವತಿ, ಚಂದ್ರಾವತಿ ಹಾಗೂ ಅಪಾರ ಬಂಧು-ಬಳಗ ವನ್ನು ಅಗಲಿದ್ದಾರೆ. …

ಧಾರ್ಮಿಕ ಮುಖಂಡ ನಿಧನ

ಕಾಸರಗೋಡು: ಪೆರ್ಣೆ ಶ್ರೀ ಮುಚ್ಚಿಲೋಟು ಭಗವತಿ ಕ್ಷೇತ್ರದ ಲೆಕ್ಕ ಪರಿಶೋಧಕ (ಚೇನಪ್ಪರ್), ಕ್ಷೇತ್ರ ಸಮಿತಿ ಅಧ್ಯಕ್ಷರಾಗಿದ್ದ ಸೂರ್ಲು (ಚೂರಿ) ನಿವಾಸಿ ಅಪ್ಪು ಪಾಟಾಳಿ (79) ಇಂದು ಮುಂ ಜಾನೆ ನಿಧನ ಹೊಂದಿದರು. ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ಕಾಸರಗೋಡು ಶ್ರೀ ಧರ್ಮಶಾಸ್ತಾ ಸೇವಾ ಸಂಘದ ಮಾಜಿ ಕಾರ್ಯದರ್ಶಿಯಾಗಿದ್ದರು. ಕೃಷಿಕರಾಗಿದ್ದ ಇವರು ಹಿರಿಯ ವ್ಯಾಪಾರಿಯಾಗಿದ್ದಾರೆ. ಮೃತರು ಪತ್ನಿ ಕುಸುಮಾವತಿ, ಮಕ್ಕಳಾದ ಮಹೇಶ್ (ಗಲ್ಫ್), ಗಣೇಶ್, ಮನೋಜ್ ಕುಮಾರ್, ವಾಣಿಶ್ರೀ, ಅಳಿಯ ಭಾಸ್ಕರ, ಸೊಸೆಯಂದಿರಾದ ವಿನುತಾ, ಜಯ ಲಕ್ಷ್ಮಿ, ಶೋಭಿತಾ, ಸಹೋದರ …

ವಿದ್ಯಾರ್ಥಿಗಳಲ್ಲಿ ಕನಕದಾಸರ ಚಿಂತನೆ ಬಿತ್ತಿ ಧರ್ಮತ್ತಡ್ಕ ಶಾಲೆಯಲ್ಲಿ ಜಿಲ್ಲಾ ಮಟ್ಟದ ‘ಕನಕಾಭಿಯಾನ’

ಧರ್ಮತ್ತಡ್ಕ: ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠ ಹಾಗೂ ಕನಕದಾಸ ಸಂಶೋಧನಾ ಕೇಂದ್ರ, ಮಂಗಳ ಗಂಗೋತ್ರಿ ಇದರ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಕಾಸರಗೋಡು ಜಿಲ್ಲಾ ಮಟ್ಟದ ‘ಕನಕ ಚಿಂತನೆ ಪ್ರಸಾರ ಮಾಲಿಕೆ – ಕನಕಾಭಿಯಾನ’ ಕಾರ್ಯಕ್ರಮ ಧರ್ಮತ್ತಡ್ಕದ ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ನೇರೋಳು ಸುಬ್ಬಣ್ಣ ಭಟ್ ಸಭಾಂಗಣದಲ್ಲಿ ನಡೆಯಿತು.ಶಾಲಾ ಪ್ರಬಂಧಕ ಶಂಕರ ನಾರಾಯಣ ಭಟ್ ಉದ್ಘಾಟಿಸಿ, ಕನಕದಾಸರ ಆದರ್ಶಗಳು ಇಂದಿನ ವಿದ್ಯಾರ್ಥಿ ಸಮುದಾಯಕ್ಕೆ ದಾರಿದೀಪವಾಗಿದ್ದು, ಅವರ ವಿಚಾರ ಧಾರೆಗಳನ್ನು ಯುವಜನತೆಗೆ ತಲುಪಿ ಸುವ …

ರಸ್ತೆ ಬದಿ ಬಿದ್ದು ಸಿಕ್ಕಿದ ಪರ್ಸ್ ಪೊಲೀಸ್ ಠಾಣೆಗೆ  ತಲುಪಿಸಿ ಮೆಚ್ಚುಗೆಗೆ ಪಾತ್ರರಾದ ವಿದ್ಯಾರ್ಥಿಗಳು

ಕುಂಬಳೆ: ರಸ್ತೆ ಬದಿಯಲ್ಲಿ ಬಿದ್ದು ಸಿಕ್ಕಿದ ಹಣ, ದಾಖಲೆಪತ್ರಗಳನ್ನೊಳ ಗೊಂಡ ಪರ್ಸ್‌ನ್ನು ಶಾಲಾ ವಿದ್ಯಾರ್ಥಿಗಳು ಪೊಲೀಸ್ ಠಾಣೆಗೆ ತಲುಪಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೊಗ್ರಾಲ್  ಜಿವಿಎಚ್‌ಎಸ್‌ಎಸ್‌ನ ವಿದ್ಯಾರ್ಥಿಗಳಾದ ಶರ್ವಾಸ್, ಅಕ್ಷರ್, ಅಫೀಸ್, ಇರ್ಫಾನ್, ಮಿಥ್ಲಾಜ್ ಎಂಬಿವರು ನಿನ್ನೆ ಸಂಜೆ ಶಾಲೆ ಬಿಟ್ಟು ಮನೆಗೆ ಹೋಗುತ್ತಿದ್ದ ವೇಳೆ ಆರಿಕ್ಕಾಡಿ ತಂಙಳ್‌ರ ಮನೆ ಬಳಿಯ ರಸ್ತೆ ಬದಿಯಲ್ಲಿ  ಪರ್ಸ್ ಬಿದ್ದು ಸಿಕ್ಕಿದೆ.  ವಿದ್ಯಾರ್ಥಿಗಳು ಪರ್ಸ್ ತೆರೆದು ನೋಡಿದಾಗ ಅದರಲ್ಲಿ ಹಣ, ಎಟಿಎಂ ಕಾರ್ಡ್, ಪಾನ್ ಕಾರ್ಡ್ ಸಹಿತ ದಾಖಲೆಪತ್ರಗಳಿದ್ದವು. ಕೂಡಲೇ …

ಚವರ್ಕಾಡ್‌ನಲ್ಲಿ ಅಂಚೆ ಕಚೇರಿ ಬೇಡಿಕೆ ಇಲಾಖೆ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

ಚವರ್ಕಾಡ್: ಚವರ್ಕಾಡ್‌ನಲ್ಲಿ ಹೊಸ ಅಂಚೆ ಕಚೇರಿ ಸ್ಥಾಪನೆಗೆ ಸಂಬAಧಿಸಿದAತೆ ಅಂಚೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚವರ್ಕಾಡ್ ಪ್ರದೇಶದ ಜನಸಂಖ್ಯೆ, ಸಾರ್ವಜನಿಕರ ಅಗತ್ಯತೆ, ಸುತ್ತಮುತ್ತಲಿನ ಗ್ರಾಮಗಳಿಗೆ ಲಭ್ಯವಿರುವ ಅಂಚೆ ಸೇವೆಗಳು ಹಾಗೂ ಸೂಕ್ತ ಕಟ್ಟಡದ ವ್ಯವಸ್ಥೆ ಸೇರಿದಂತೆ ವಿವಿಧ ಅಂಶಗಳನ್ನು ಅಧಿಕಾರಿಗಳು ಪರಿಶೀಲಿಸಿದರು. ಪ್ರದೇಶದ ಜನರು ಎದುರಿಸುತ್ತಿರುವ ಅಂಚೆ ಸೇವೆಗಳ ತೊಂದರೆಗಳನ್ನು ಸ್ಥಳೀಯ ನಿವಾಸಿಗಳು ಮತ್ತು ಮುಖಂಡರು ವಿವರಿಸಿ, ಶೀಘ್ರವೇ ಚವರ್ಕಾಡ್‌ನಲ್ಲಿ ಅಂಚೆ ಕಚೇರಿ ಆರಂಭಿಸುವAತೆ ಮನವಿ ಮಾಡಿದರು.ಚವರ್ಕಾಡ್ ಮತ್ತು ಸುತ್ತಮುತ್ತ ಲಿನ …

ಖಾಸಗಿ ಬಸ್ ವಲಯ ನಷ್ಟದಲ್ಲಿ: ತುರ್ತು ಕ್ರಮ ಸರಕಾರ  ಕೈಗೊಳ್ಳಬೇಕೆಂದು ಬಸ್ ಆಪರೇಟರ್ಸ್ ಫೆಡರೇಶನ್ ಬೇಡಿಕೆ

ಕಾಸರಗೋಡು: ಪ್ರಿಯದರ್ಶಿನಿ ಯೋಜನೆಯಿಂದಾಗಿ ರಾಜ್ಯದ ಖಾಸಗಿ ಬಸ್ ವಲಯ ತೀವ್ರ ಸಂದಿಗ್ಧತೆಯನ್ನು ಎದುರಿಸುತ್ತಿದೆ ಎಂದು, ಬಸ್ ವಲಯವನ್ನು ಸಂರಕ್ಷಿಸಲು ಸರಕಾರ ತುರ್ತು ಮಧ್ಯಪ್ರವೇಶ ಮಾಡಬೇಕೆಂದು  ಬಸ್ ಆಪರೇಟರ್ಸ್ ಫೆಡರೇಶನ್ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆ ಆಗ್ರಹಿಸಿದೆ. ತೀವ್ರ ರೀತಿಯಲ್ಲಿ ಇಂಧನ ಬೆಲೆ ಹೆಚ್ಚಳ, ಬಿಡಿ ಭಾಗಗಳ ಬೆಲೆಯೇರಿಕೆ, ವಿಮಾ ಮೊತ್ತದಲ್ಲಿ ಉಂಟಾಗಿರುವ ಹೆಚ್ಚಳ ಎಂಬಿವುಗಳಿಂ ದಾಗಿ ಬಸ್ ವಲಯವನ್ನು ಮುಂದಕ್ಕೆ ಕೊಂಡೊಯ್ಯಲು ಸಂಕಷ್ಟಪಡುವ ಬಸ್ ಮಾಲಕರಿಗೆ ಪ್ರಿಯದರ್ಶಿನಿ ಯೋಜನೆ ಇಮ್ಮಡಿ ಹೊಡೆತವಾಗಿ ಬದಲಾಗಿದೆ ಎಂದು ಅವರು ದೂರಿದ್ದಾರೆ. …