ಜಿಲ್ಲೆಯ ಸ್ವಾತಂತ್ರ್ಯ ದಿನಾಚರಣೆ: ಸಚಿವ ಕೆ.ಎಂ. ಶಾಜಿ ಧ್ವಜಾರೋಹಣ

ಕಾಸರಗೋಡು: ಆಗಸ್ಟ್ 15ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕಾಸರಗೋಡು ನಗರಸಭಾ ಮೈದಾನದಲ್ಲಿ ನಡೆಯುವ ಪರೇಡ್‌ನಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವ ಕೆ.ಎಂ. ಶಾಜಿ  ಧ್ವಜಾರೋಹಣ ಗೈದು ಅಭಿವಂದನೆ ಸ್ವೀಕರಿಸುವರು. ಸ್ವಾತಂತ್ರ್ಯ ದಿನಾಚರಣೆಯ ಪೂರ್ವಸಿದ್ಧತೆಗಳು ನಡೆಸಲಾಗುತ್ತಿದ್ದು, ನಿನ್ನೆ ಅಭ್ಯಾಸ ಪರೇಡ್ ಆರಂಭಗೊಂಡಿದೆ. ಪರೇಡ್‌ನಲ್ಲಿ ಸಶಸ್ತ್ರ ಸೇನೆಗಳು, ಪೊಲೀಸ್, ಅಬಕಾರಿ, ವೊಕೇಶನಲ್ ಹೈಯರ್ ಸೆಕೆಂಡರಿ, ಸ್ಟುಡೆಂಟ್ಸ್ ಪೊಲೀಸ್ ಕೆಡೆಟ್‌ಗಳು, ಎನ್‌ಸಿಸಿ, ಶಾಲಾ ಬ್ಯಾಂಡ್‌ಸೆಟ್‌ಗಳು ಸಹಿತ 16 ತಂಡಗಳು ಭಾಗವಹಿಸಲಿವೆ. ಸ್ವಾತಂತ್ರ್ಯ ಹೋರಾಟಗಾರರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು, …

ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಬದಿಯಡ್ಕ ಘಟಕದಿಂದ ವ್ಯಾಪಾರಿ ದಿನಾಚರಣೆ

ಬದಿಯಡ್ಕ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಬದಿಯಡ್ಕ ಘಟಕದ ನೇತೃತ್ವದಲ್ಲಿ ವ್ಯಾಪಾರಿ ದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಘಟಕದ ಅಧ್ಯಕ್ಷ ನರೇಂದ್ರನ್ ಧ್ವಜಾರೋಹಣಗೈದರು. ಪೇಟೆಯಲ್ಲಿ ಮೆರವಣಿಗೆ ನಡೆಯಿತು. ವ್ಯಾಪಾರಿ ಸಂಗಮವನ್ನು ನರೇಂದ್ರನ್‌ರ ಅಧ್ಯಕ್ಷತೆಯಲ್ಲಿ ಬದಿಯಡ್ಕ ಸಿ.ಐ ಅನೂಪ್‌ಕೃಷ್ಣ ಉದ್ಘಾಟಿಸಿದರು. ಜಿಲ್ಲಾ ಕಾರ್ಯದರ್ಶಿ ಕುಂಜಾರು ಮೊಹಮ್ಮದ್ ಹಾಜಿ ಪ್ರಧಾನ ಭಾಷಣ ಮಾಡಿದರು. ಇದೇ ವೇಳೆ ಸದಸ್ಯತ್ವ ವಿತರಣೆ ನಡೆಯಿತು. ಮಾಜಿ ಅಧ್ಯಕ್ಷ ಎಸ್.ಎನ್. ಮಯ್ಯ, ಉಪಾಧ್ಯಕ್ಷ ರಾಜು ಸ್ಟೀಫನ್, ಹಮೀದ್, ಕಾರ್ಯದರ್ಶಿಗಳಾದ ಉದಯಶಂಕರ್, ವಿಶ್ವನಾಥನ್, ರತ್ನಾಕರ ಓಡಂಗಲ್ಲು, …

ಚರಿತ್ರೆಯನ್ನು ರಾಜಕೀಯ ಕನ್ನಡಕದ ಮೂಲಕ ನೋಡಬಾರದು- ಎನ್‌ಟಿಯು

ಕಾಸರಗೋಡು: ಚರಿತ್ರೆಯನ್ನು  ರಾಜಕೀಯ ಕನ್ನಡಕದ ಮೂಲಕ ನೋಡಬಾರದೆಂದು ಎನ್‌ಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಅನೂಪ್ ಕುಮಾರ್ ನುಡಿದರು. ಕುಂಬಳೆ ಉಪಜಿಲ್ಲೆಯಲ್ಲಿ ನಡೆದ ಶಾಲಾ ಮಟ್ಟದ ಫ್ರೀಡಂ ಕ್ವಿಜ್ ಸ್ಪರ್ಧೆಯ ಒಂದು ಪ್ರಶ್ನೆಯಲ್ಲಿ ವೀರ ಸಾವರ್ಕರ್‌ರ ಹೆಸರು ಉತ್ತರವಾಗಿ ಬಂದಿರುವ ಹೆಸರಲ್ಲಿ ಅಧ್ಯಾಪಕನ ವಿರುದ್ಧ ಕೈಗೊಂಡ ಅಮಾನತು ಸಹಿತವಿರುವ ಶಿಸ್ತು ಕ್ರಮ ಹಿಂತೆಗೆಯಬೇಕೆಂದು ಆಗ್ರಹಿಸಿ ಎನ್‌ಟಿಯು ನಡೆಸಿದ ಕಾಸರಗೋಡು ಡಿಡಿಇ ಕಚೇರಿ ಮಾರ್ಚ್, ಧರಣಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಚರಿತ್ರೆಯ ಒಂದು ಅಂಶ ರಸಪ್ರಶ್ನೆ ಯಲ್ಲಿ ಉಪಯೋಗಿಸಿರುವುದನ್ನು …

ಸಮುದ್ರಕೊರೆತದಿಂದ ಕಷ್ಟ ಅನುಭವಿಸುವವರಿಗೆ ತಕ್ಷಣ ಪರಿಹಾರ ಒದಗಿಸಬೇಕು- ಬಿಜೆಪಿ ಜಿಲ್ಲಾಧ್ಯಕ್ಷೆ

ಕಾಸರಗೋಡು: ತೀವ್ರ ಸಮುದ್ರ ಕೊರೆತದಿಂದಾಗಿ ಕೃಷಿ ಬೆಳೆಗಳು, ಭೂಮಿ ಹಾಗೂ ಮನೆಗಳನ್ನು ಕಳೆದುಕೊಂಡ ಮೀನುಗಾರರಿಗೆ ಮತ್ತು ಇತರ ಕರಾವಳಿ ನಿವಾಸಿಗಳಿಗೆ ತಕ್ಷಣವೇ ಪರಿಹಾರ ಒದಗಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆಗ್ರಹಿಸಿದ್ದಾರೆ. ಬಿಜೆಪಿ ಕುಂಬಳೆ ಮಂಡಲ ಸಮಿತಿ ಹಾಗೂ ಶಾರದಾ ನಗರ ಸಂರಕ್ಷಣಾ ಕ್ರಿಯÁಸಮಿತಿಯ ಜಂಟಿ ಆಶ್ರಯದಲ್ಲಿ ಕಾಸರಗೋಡು ಕಲೆಕ್ಟರೇಟ್‌ಗೆ ನಡೆಸಿದ ಪ್ರತಿಭಟನಾ ಮೆರವಣಿಗೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಪ್ರತಿ ವರ್ಷ ಶಾಸಕರು, ಜನಪ್ರತಿ ನಿಧಿಗಳು ಮತ್ತು ಕಲೆಕ್ಟರ್ ಸೇರಿದಂತೆ ಅಧಿಕಾರಿಗಳು ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದರೂ, ಪರಿಹಾರ …