ಜಿಲ್ಲೆಯ ಸ್ವಾತಂತ್ರ್ಯ ದಿನಾಚರಣೆ: ಸಚಿವ ಕೆ.ಎಂ. ಶಾಜಿ ಧ್ವಜಾರೋಹಣ

ಕಾಸರಗೋಡು: ಆಗಸ್ಟ್ 15ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕಾಸರಗೋಡು ನಗರಸಭಾ ಮೈದಾನದಲ್ಲಿ ನಡೆಯುವ ಪರೇಡ್‌ನಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವ ಕೆ.ಎಂ. ಶಾಜಿ  ಧ್ವಜಾರೋಹಣ ಗೈದು ಅಭಿವಂದನೆ ಸ್ವೀಕರಿಸುವರು. ಸ್ವಾತಂತ್ರ್ಯ ದಿನಾಚರಣೆಯ ಪೂರ್ವಸಿದ್ಧತೆಗಳು ನಡೆಸಲಾಗುತ್ತಿದ್ದು, ನಿನ್ನೆ ಅಭ್ಯಾಸ ಪರೇಡ್ ಆರಂಭಗೊಂಡಿದೆ. ಪರೇಡ್‌ನಲ್ಲಿ ಸಶಸ್ತ್ರ ಸೇನೆಗಳು, ಪೊಲೀಸ್, ಅಬಕಾರಿ, ವೊಕೇಶನಲ್ ಹೈಯರ್ ಸೆಕೆಂಡರಿ, ಸ್ಟುಡೆಂಟ್ಸ್ ಪೊಲೀಸ್ ಕೆಡೆಟ್‌ಗಳು, ಎನ್‌ಸಿಸಿ, ಶಾಲಾ ಬ್ಯಾಂಡ್‌ಸೆಟ್‌ಗಳು ಸಹಿತ 16 ತಂಡಗಳು ಭಾಗವಹಿಸಲಿವೆ. ಸ್ವಾತಂತ್ರ್ಯ ಹೋರಾಟಗಾರರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು, ಸರಕಾರಿ ನೌಕರರು ಭಾಗವಹಿಸಬೇಕೆಂದು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ತಿಳಿಸಿದ್ದಾರೆ.

You cannot copy contents of this page