ಬದಿಯಡ್ಕ ಕೃಷಿಭವನದಿಂದ ಕೃಷಿಕರ ದಿನಾಚರಣೆ, ಸನ್ಮಾನ
ಬದಿಯಡ್ಕ: ಬದಿಯಡ್ಕ ಪಂ.ಕೃಷಿಭವನದ ನೇತೃತ್ವದಲ್ಲಿ ನಿನ್ನೆ ಬದಿಯಡ್ಕ ಕನ್ಯಾನ ಕನ್ವೆನ್ಶನ್ ಹಾಲ್‌ನಲ್ಲಿ ಕೃಷಿಕರ ದಿನಾಚರಣೆ ನಡೆಯಿತು. ಶಾಸಕ ಕಲ್ಲಟ್ರ ಮಾಹಿನ್ ಹಾಜಿ ಉದ್ಘಾಟಿಸಿ, ಮಾತನಾಡುತ್ತಾ ಆಧುನಿಕ ಯುಗದಲ್ಲಿ ಕೃಷಿ ಎದುರಿಸುತ್ತಿರುವ ಸವಾಲುಗಳು ಸಣ್ಣದಲ್ಲ. ಹವಾಮಾನ ವೈಪರೀತ್ಯ, ಕೀಟಬಾಧೆ, ಕಾರ್ಮಿಕರ ಅಭಾವ ಮತ್ತು ಸೂಕ್ತ ಮಾರುಕಟ್ಟೆ ಬೆಲೆಯ ಕೊರತೆ ರೈತರನ್ನು ಕಾಡುತ್ತಿದೆ. ಯುವಕರು ಕೃಷಿಕರತ್ತ ಆಕರ್ಷಿತರಾಗಬೇಕು ಎಂದು ಕರೆಯಿತ್ತರು. ಬದಿಯಡ್ಕ ಪಂ. ಅಧ್ಯಕ್ಷ ಶಂಕರ ಡಿ. ಅಧ್ಯಕ್ಷತೆ ವಹಿಸಿ ಮಾತನಾಡಿ, ಪಂಚಾಯತ್ ವ್ಯಾಪ್ತಿಯಲ್ಲಿ ತೆಂಗು, ಅಡಿಕೆ, ಭತ್ತ, ಕಾಳುಮೆಣಸು, …