ಜಿಲ್ಲೆಗೆ ಕೇಂದ್ರ ಸರಕಾರದ ಓಣಂ ಹಬ್ಬದ ಕೊಡುಗೆ: ಕೋಟಿಕುಳಂ ರೈಲ್ವೇ ಮೇಲ್ಸೇತುವೆ ಸಾಕಾರದತ್ತ

ಕಾಸರಗೋಡು: ಕೋಟಿಕುಳಂ ರೈಲ್ವೇ ಮೇಲ್ಸೇತುವೆಯ ಡಿಪಿಆರ್‌ಗೆ ಅಂಗೀಕಾರ ಲಭಿಸಿದೆ. ನಿರ್ಮಾಣ ಚಟುವಟಿಕೆಗಳನ್ನು ಕೂಡಲೇ ಆರಂಭಿಸಬಹುದಾಗಿದೆ. ಜಿಲ್ಲೆಗೆ ಕೇಂದ್ರ ಸರಕಾರದ ಓಣಂ ಹಬ್ಬದ ಕೊಡುಗೆಯಾಗಿದೆ ಇದೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ತಿಳಿಸಿದ್ದಾರೆ. ಇದರೊಂದಿಗೆ ಈ ಪ್ರದೇಶದ ಹಲವು ಕಾಲದ ಬೇಡಿಕೆ ಕೂಗಿಗೆ ಪರಿಹಾರವಾ ಗಲಿದೆ. ಜನರ ಈ ಆಗ್ರಹಕ್ಕೆ ಬೇಕಾಗಿ ಮಧ್ಯೆ ಪ್ರವೇಶಿಸಲು ಸಾಧ್ಯವಾಗಿರುವುದ ರಲ್ಲಿ ಅತಿಯಾದ ಅಭಿಮಾನವಿದೆ ಎಂದು ಅಶ್ವಿನಿ ನುಡಿದರು. ಇದಕ್ಕೆ ಬೇಕಾಗಿ ಸಹಾಯ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ರೈಲ್ವೇ ಸಚಿವ ಅಶ್ವಿನಿ …

ಕಾರ್ಮಿಕರಿಗೆ ಪ್ರತಿಕೂಲವಾಗುವ ಲೇಬರ್  ಕೋಡ್‌ಗಳನ್ನು ಪುನರ್ ಪರಿಶೀಲಿಸಬೇಕು- ಬಿಎಂಎಸ್

ಕಾಸರಗೋಡು: ೨೯ ಲೇಬರ್ ಕಾನೂನುಗಳನ್ನು ನಾಲ್ಕು ಕೋಡ್‌ಗಳಾಗಿ ಸಂಕ್ಷಿಪ್ತಗೊಳಿಸುವಾಗ ಅದರಲ್ಲಿ ಕಾರ್ಮಿಕರಿಗೆ ಪ್ರತಿಕೂಲವಾಗಿ ಬಾಧಿಸುವ ಕೋಡ್‌ಗಳನ್ನು ಪುನರ್ ಪರಿಶೀಲಿಸಬೇಕೆಂದು ಬಿಎಂಎಸ್ ಕಾಸರಗೋಡು ವಲಯ ಸಮ್ಮೇಳನದಲ್ಲಿ ಆಗ್ರಹಿಸಲಾಯಿತು. ವಲಯ ಉಪಾಧ್ಯಕ್ಷ ಜನಾರ್ದನ ಕಡಪ್ಪುರ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಮ್ಮೇಳನವನ್ನು ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಉದ್ಘಾಟಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಪ್ರದೀಪ್ ಕೇಳೋತ್ ಶುಭ ಕೋರಿದರು. ವಲಯ ಕಾರ್ಯದರ್ಶಿ ಬಾಬುಮೋನ್ ಚೆಂಗಳ ಚಟುವಟಿಕಾ ವರದಿ, ವಲಯ ಕೋಶಾಧಿಕಾರಿ ಪುಷ್ಪರಾಜ್ ಆಯ ವ್ಯಯಲೆಕ್ಕ ಮಂಡಿಸಿದರು. ವಲಯ ಪ್ರಬಾರ ಗುರುದಾಸ್ …

ನಗರದ ಹಿರಿಯ ವ್ಯಾಪಾರಿ ನಿಧನ

ಕಾಸರಗೋಡು: ನಗರದ ವ್ಯಾಪಾರಿ ಹಾಗೂ ಸೂಪರ್ ಎಂಟರ್‌ಪ್ರೈಸಸ್ ಮಾಲಕ ಪಳ್ಳಂ ಹೈದ್ರೋಸ್ ಮಸೀದಿ ಮಾಜಿ ಕಾರ್ಯದರ್ಶಿಯಾಗಿದ್ದ ನೆಲ್ಲಿಕುಂಜೆ ಮುಹಿಯುದ್ದೀನ್ ಜುಮಾ ಮಸೀದಿ ಸಮೀಪದ ನಿವಾಸಿ ಅಬ್ದುಲ್ಲ ಸೂಪರ್ ಪಳ್ಳಂ (83) ನಿಧನ ಹೊಂದಿದರು. ಮೃತರು ಪತ್ನಿ ನಫೀಸ, ಮಕ್ಕಳಾದ ಅಶ್ರಫ್, ಫಿರೋಜ್, ಮಿಸ್ರಿಯ, ಶಹರ್ಬಾನು, ಅಳಿಯಂದಿ ರಾದ ಅಬ್ದುಲ್ ಜಲೀಲ್ ಚೂರಿ, ಜಬ್ಬಾರ್ ಕೋಳಿಯಾಡ್, ಸಮೀರ್ ಪಟ್ಲ, ಸೊಸೆಯಂದಿರಾದ ನಸೀಮ, ಹಬೀಬ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.