ನಗರದ ಸಾರಿಗೆ ತಡೆಯನ್ನು ನಿಯಂತ್ರಿಸಲು ನಗರಸಭಾ ಯೋಜನೆ: ಹೊಸ ಬಸ್ ನಿಲ್ದಾಣದಿಂದ ನಾಯಮ್ಮಾರ್‌ಮೂಲೆ ವರೆಗೆ ಸರ್ವೀಸ್ ರಸ್ತೆಯಲ್ಲಿ ಏಕಮುಖ ಸಂಚಾರ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಸ ಬಸ್ ನಿಲ್ದಾಣದಿಂದ ಆರಂಭಿಸಿ ನಾಯಮ್ಮಾರ್ ಮೂಲೆವರೆಗಿ ರುವ ಸರ್ವೀಸ್ ರಸ್ತೆಯಲ್ಲಿ ಪೂರ್ಣವಾಗಿ ಏಕಮುಖ ರಸ್ತೆಯನ್ನಾಗಿ ಮಾಡಲು ಕಾಸರಗೋಡು ನಗರಸಭಾ ಟ್ರಾಫಿಕ್ ರೆಗ್ಯುಲೇಟರಿ ಸಮಿತಿ ಸಭೆಯಲ್ಲಿ ತೀರ್ಮಾ ನಿಸಲಾಗಿದೆ. ನಗರದ ಪ್ರಧಾನ ರಸ್ತೆಗಳಲ್ಲಿ ಕಂಡುಬರುವ ಸಂಚಾರ ತಡೆಯನ್ನು ನಿಯಂತ್ರಿಸಲು ಕೈಗೊಳ್ಳುವ ಕ್ರಮಗಳ ಅಂಗವಾಗಿ ಈ ತೀರ್ಮಾನ ಉಂಟಾಗಿದೆ. ಪ್ರಸ್ತುತ ಈ ರಸ್ತೆಯ ಮೂಲಕ ಇಕ್ಕಡೆಗಳಿಗೂ ವಾಹನಗಳು ಸಂಚರಿಸುತ್ತಿವೆ. ಒಂದೇ ಸಮಯದಲ್ಲಿ ವಾಹನಗಳ ಇಕ್ಕಡೆ ಸಂಚಾರಗಳಿಂದಾಗಿ ತೀವ್ರ ಸಂಚಾರ ತಡೆಗೆ ಕಾರಣವಾಗುತ್ತದೆ ಎಂದು ಸಮಿತಿ …