ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿಯ ಪರಿಚಾರಿಕೆಗೆ ಬಂದ ಪತ್ನಿಯ 52,000 ರೂ. ಒಳಗೊಂಡ ಪರ್ಸ್ ಕಳವು

ಕಾಸರಗೋಡು: ಚಿಕಿತ್ಸೆಗಾಗಿ ಆಸ್ಪತ್ರೆ ಯಲ್ಲಿ ದಾಖಲಾಗಿದ್ದ ಪತಿಯ ಪರಿಚಾ ರಿಕೆಗಾಗಿ ಬಂದಿದ್ದ ಪತ್ನಿಯ 52,000 ರೂ. ಒಳಗೊಂಡ ಪರ್ಸ್ ಕಳವುಗೈದ ಆರೋಪಿಯನ್ನು ಕಾಸರಗೋಡು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮೆಲ್ವಿನ್ ಜೋಸ್ ಮತ್ತು ಎಸ್‌ಐ ಮನು ನೇತೃತ್ವದ ಪೊಲೀಸರ ತಂಡ ಕಣ್ಣೂರಿ ನಿಂದ ಬಂಧಿಸಿದೆ. ಕಣ್ಣೂರು ಇರಿಟ್ಟಿ ಪಳ್ಳಂಜೇರಿಮುಖ್ ನಿವಾಸಿ ರಾಜೇಶ್ ಕುಮಾರ್ (30) ಬಂಧಿತ ವ್ಯಕ್ತಿ.  ಮಾಯಿಪ್ಪಾಡಿ ತೈವಳಪ್ಪು ಹೌಸ್‌ನ ಎಂ. ಅಬ್ಬಾಸ್ ಎಂಬವರನ್ನು ಚಿಕಿತ್ಸೆಗಾಗಿ ಕಾಸರಗೋಡು ನುಳ್ಳಿಪ್ಪಾಡಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿತ್ತು.   ಈ ವೇಳೆ …

ಹತ್ತನೇ ತರಗತಿ ವಿದ್ಯಾರ್ಥಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಹತ್ತನೇ ತರಗತಿ ವಿದ್ಯಾರ್ಥಿಯೋರ್ವ ಮನೆಯಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪಳ್ಳಿಕೆರೆ ಕೀಕಾನದ ಧ್ಯಾನ್‌ರಾಜ್ (15) ಸಾವಿಗೀಡಾದ ಬಾಲಕ. ಈತ ಕಾಸರಗೋಡಿನ ಶಾಲೆಯೊಂದರ ವಿದ್ಯಾರ್ಥಿಯಾಗಿದ್ದಾನೆ  ಧ್ಯಾನ್ ರಾಜ್ ನಿನ್ನೆ ಸಂಜೆ ಮನೆಯ ಅಡ್ಡಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾ ಗಿದ್ದನು. ಕೂಡಲೇ ಅತನನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಪರೀಕ್ಷೆಯಲ್ಲಿ ಅಂಕ ಕಡಿಮೆಯಾದುದರಿಂದ ಮನನೊಂದು ಈತ ನೇಣು ಹಾಕಿ ಸಾವಿಗೆ ಶರಣಾಗಿರಬಹುದೇ ಎಂದು ಸಂಶಯಿಸಲಾಗುತ್ತಿದೆಯೆಂದು  ಹೇಳಲಾಗುತ್ತಿದೆ. ಘಟನೆ ಬಗ್ಗೆ …

ತೀವ್ರಗೊಂಡ ವಿದ್ಯುತ್ ಬಿಕ್ಕಟ್ಟು: ತುರ್ತು ಪರಿಹಾರಕ್ಕೆ ಮುಖ್ಯಮಂತ್ರಿ ನೇತೃತ್ವದಲ್ಲಿ ತೀವ್ರ ಕ್ರಮ

ತಿರುವನಂತಪುರ: ರಾಜ್ಯದಲ್ಲಿ ವಿದ್ಯುತ್ ಬಿಕ್ಕಟ್ಟು ನಿರಂತರವಾಗಿ ಪರಾಕಾಷ್ಟೆಗೇರುತ್ತಿರುವುದು ತೀವ್ರ ಜನಾಕ್ರೋಶಕ್ಕೆ ಕಾರಣವಾಗುವಂತೆ ಮಾಡಿರುವ ಹಿನ್ನೆಲೆಯಲ್ಲಿ ಅದಕ್ಕೆ ತುರ್ತು ಪರಿಹಾರ ಕಂಡುಕೊಳ್ಳಲು ಸ್ವತಃ ಮುಖ್ಯಮಂತ್ರಿ ವಿ.ಡಿ ಸತೀಶನ್‌ರೇ ನೇರವಾಗಿ ರಂಗಕ್ಕಿಳಿದಿದ್ದಾರೆ. ಇದರಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಬಿಶ್ವನಾಥ್ ಸಿನ್ಹಾ, ರಾಜ್ಯ ವಿದ್ಯುನ್ಮಂಡಳಿ ಆಡಳಿತ ನಿರ್ದೇಶಕ ಎಂ.ಜಿ. ರಾಜಮಾಣಿಕ್ಯಂರನ್ನು ಮುಖ್ಯಮಂತ್ರಿ ನೇರವಾಗಿ ಕರೆಸಿ ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ತುರ್ತು ನಿರ್ದೇಶ ನೀಡಿದ್ದಾರೆ. ವಿದ್ಯುತ್ ಕೊರತೆ ನೀಗಿಸಲು ಹೊರಗಿನಿಂದ ಸ್ವಂತವಾಗಿ ಅಗತ್ಯದಷ್ಟು ವಿದ್ಯುತ್ ಖರೀದಿಸಲು, ಅದಕ್ಕೆ ತಗಲಿರುವ ವೆಚ್ಚ, ಅದಕ್ಕೆ …

ಕ್ಷೇತ್ರ ದರ್ಶನಕ್ಕೆ ತಲುಪಿದ ಜ್ಯೋತಿಷಿಯ ಮೊಬೈಲ್ ಫೋನ್ ಕಳವು: ಅಮಾನತುಗೊಳಿಸಲ್ಪಟ್ಟ ಪೊಲೀಸ್ ಬಂಧನ

ಕಾಸರಗೋಡು: ಕರ್ತವ್ಯ ಲೋಪವೆಸಗಿದ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತುಗೊಳಿ ಸಲ್ಪಟ್ಟ ಪೊಲೀಸ್ ಸಿಬ್ಬಂದಿಯೋರ್ವ ಮೊಬೈಲ್ ಫೋನ್ ಕಳವುಗೈದ ಪ್ರಕರಣದಲ್ಲಿ ಸೆರೆಗೀಡಾಗಿದ್ದಾನೆ. ಅನ್ನೂರು ಪುದಿಯಂಕಾವ್‌ನ ವೆಳ್ಳೋರ ಮಠತ್ತಿಲ್‌ನ ವಿ.ಎಂ. ವಿಪಿನ್ ಕುಮಾರ್ (40) ಎಂಬಾತ  ಸೆರೆಗೀಡಾದ ಆರೋಪಿ. ಈತ ಈ ಹಿಂದೆ ಕುಂಬಳೆ   ಠಾಣೆಯಲ್ಲಿ  ಪೊಲೀಸ್ ಆಗಿದ್ದನು. ಉದ್ಯೋಗಕ್ಕೆ ಸೇರ್ಪಡೆಗೊಂಡ ಬಳಿಕ ವಿಪಿನ್ ಕು ಮಾರ್ ಸರಿಯಾಗಿ ಕೆಲಸ ನಿರ್ವಹಿಸುತ್ತಿರಲಿಲ್ಲವೆನ್ನಲಾಗಿದೆ. ಅಲ್ಲದೆ ಕರ್ತವ್ಯಕ್ಕೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದ ಈತನನ್ನು  ಅಮಾನತುಗೊಳಿಸಿದ್ದು, ಸೇವೆಯಿಂದ ವಜಾಗೊಳಿಸಲಿರುವ ಕ್ರಮಗಳು  ನಡೆಯುತ್ತಿದೆ.  ಕಳೆದ ಗುರುವಾರ ಬೆಳಿಗ್ಗೆ ತಳಿಪರಂಬ …

ವಾಸಿಯಾಗದ ಗಂಟಲುನೋವು: ಗೃಹಿಣಿ ಹಟ್ಟಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ವಾಸಿಯಾಗದ ಗಂಟಲುನೋವಿನಿಂದ ಮನನೊಂದು ಗೃಹಿಣಿ ಹಟ್ಟಿಯಲ್ಲಿ ನೇಣು ಬಿಗಿದು ಮೃತಪಟ್ಟ ಘಟನೆ ನಡೆದಿದೆ. ಮುಳ್ಳೇರಿಯ ಕಾರ್ಲೆ ನಿವಾಸಿ ವಿಜಯ ಎಂಬವರ ಪತ್ನಿ ಸುಲೋಚನ (46) ಮೃತಪಟ್ಟವರು. ಮೊನ್ನೆ ರಾತ್ರಿ ಆಹಾರ ಸೇವಿಸಿ ನಿದ್ರಿಸಿದ್ದು ಆದರೆ ನಿನ್ನೆ ಬೆಳಿಗ್ಗೆ ನೋಡುವಾಗ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಹಟ್ಟಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಆದೂರು ಪೊಲೀಸರು ಅಸಹಜ ಸಾವಿಗೆ ಕೇಸು ದಾಖಲಿಸಿದ್ದಾರೆ. ಅಡೂರು ನಿವಾಸಿ ಅಂಬಾಡಿ- ಲಕ್ಷ್ಮಿ ದಂಪತಿ ಪುತ್ರಿಯಾದ ಸುಲೋಚನ ಪತಿ, ಮಕ್ಕಳಾದ ಋತೇಶ್, …

ದೈವಪಾತ್ರಿ ನಿಧನ

ಕಾಸರಗೋಡು: ನೆಲ್ಲಿಕುಂಜೆ ಶ್ರೀ ಕೋಮರಾಡಿ ದೈವಸ್ಥಾನದ ನಿವೃತ್ತ ಅರ್ಚಕ ತಳಂಗರೆ ಕೊಪ್ಪಳ ನಿವಾಸಿ ಅಂಗಾರ ಪೂಜಾರಿ  (79)ಇಂದು ಬೆಳಿಗ್ಗೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಇವರು ಶ್ರೀ ವಿಷ್ಣುಮೂರ್ತಿ ದೈವಪಾತ್ರಿ ಯಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ, ಮಕ್ಕಳ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನಿವೃತ್ತ ಬಿಎಸ್‌ಎನ್‌ಎಲ್ ಅಧಿಕಾರಿ ಲಿಂಗಪ್ಪ ನಿಧನ

 ಕುಂಬಳೆ: ಇಲ್ಲಿನ ಕೃಷ್ಣನಗರ ನಿವಾಸಿ, ನಿವೃತ್ತ ಬಿಎಸ್‌ಎನ್‌ಎಲ್ ಅಧಿಕಾರಿ ಲಿಂಗಪ್ಪ (68) ನಿಧನಹೊಂದಿದರು. ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದರು. ರಾಮಚಂದ್ರ-ಭಾಗೀರಥಿ ದಂಪತಿ ಪುತ್ರನಾದ ಮೃತರು ಪತ್ನಿ ರಾಜೇಶ್ವರಿ, ಪುತ್ರಿ ಲಲಿತ (ಅಮೆರಿಕ), ಅಳಿಯ ಮನು (ಅಮೆರಿಕ), ಸಹೋದರ-ಸಹೋದರಿಯರಾದ ದಾಮೋದರ (ಆರಿಕ್ಕಾಡಿ), ರಾಧಾಕೃಷ್ಣ (ಬಿಎಸ್‌ಎನ್‌ಎಲ್), ಚಂದ್ರಹಾಸ, ಯೋಗೀಶ, ಭಾಸ್ಕರ, ಕಮಲಾಕ್ಷ, ಸುರೇಶ, ಶಾರದ, ಜಲಜಾಕ್ಷಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಬಾಯಾರು: ನೂತನ ಗಣೇಶ ಮಂದಿರ ಲೋಕಾರ್ಪಣೆ, ಗಣೇಶೋತ್ಸವ ಇಂದಿನಿಂದ

ಬಾಯಾರು: ಮುಳಿಗದ್ದೆ ಗಣೇಶಗಿರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ಆಶ್ರಯದಲ್ಲಿ ನೂತನ ಗಣೇಶ ಮಂದಿರ ಲೋಕಾರ್ಪಣೆ ಹಾಗೂ 43ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಇಂದಿನಿಂದ 15ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಇಂದು ಅಪರಾಹ್ನ 3 ಗಂಟೆಗೆ ಹೊರೆಕಾಣಿಕೆ ಮೆರವಣಿಗೆ ಬಾಯಾರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಗಣೇಶಗಿರಿಗೆ ಹೊರಡಲಿದೆ. ನಾಳೆ ಬೆಳಿಗ್ಗೆ 8.30ರ ವೇಳೆ ನೂತನ ಮಂದಿರದ ಪ್ರವೇಶೋತ್ಸವ, 1೦.3೦ಕ್ಕೆ ಗಣೇಶಮಂದಿರ ಲೋಕಾರ್ಪಣೆ, ಸಭೆ, ಅಪರಾಹ್ನ 2ರಿಂದ ಬಾಲಗೋಕುಲ ಮಕ್ಕಳಿಂದ ನೃತ್ಯ ವೈವಿದ್ಯ, ಸಂಜೆ …

ಅಘೋಷಿತ ವಿದ್ಯುತ್ ಮೊಟಕು: ಡಿಫಿಯಿಂದ ಪೈವಳಿಕೆ ಕೆಎಸ್‌ಇಬಿ ಕಚೇರಿಗೆ ದೊಂದಿ ಮೆರವಣಿಗೆ

ಪೈವಳಿಕೆ: ಕೇರಳವನ್ನು ಕತ್ತಲೆಯತ್ತ ನೂಕುತ್ತಿರುವ ಅಘೋಷಿತ ವಿದ್ಯುತ್ ಕಡಿತ ವಿರುದ್ಧ ಡಿವೈಎಫ್‌ಐ ಪೈವಳಿಕೆ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಪೈವಳಿಕೆ ಕೆಎಸ್‌ಇಬಿ ಕಚೇರಿಗೆ ದೊಂದಿ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಲಾಯಿತು. ಡಿವೈಎಫ್‌ಐ ಜಿಲ್ಲಾ ಉಪಾಧ್ಯಕ್ಷ ನಾಸರುದ್ದೀನ್ ಮಲಂಕರ ಉದ್ಘಾಟಿಸಿದರು. ಮಹೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಸದಸ್ಯ ಅಬ್ದುಲ್ ಹಾರೀಸ್, ಜಕಾರಿಯ ಬಾಯಾರ್,  ಡಿಫಿ ಬ್ಲೋಕ್ ಸಮಿತಿ ಸದಸ್ಯ, ಅಬ್ದುಲ್ ಆಸಿಫ್, ಪ್ರಜ್ವಲ್ ಡಿ, ಅಜಿತ್ ಶೆಟ್ಟಿ ಲಾಲ್‌ಭಾಗ್, ಸತ್ತಾರ್ ಬೊಳ್ಳೂರು ಮಾತನಾಡಿದರು. ವಿನಯ್ ಕುಮಾರ್ ಸ್ವಾಗತಿಸಿದರು.

ಗಣೇಶೋತ್ಸವ: ಗಣಪತಿ ವಿಗ್ರಹಗಳಿಗೆ ರೂಪು ನೀಡುತ್ತಿರುವ ಲಕ್ಷ್ಮೀಶ ಆಚಾರ್ಯ

ಕಾಸರಗೋಡು: ಈ ವರ್ಷದ ಗಣೇಶೋತ್ಸವಕ್ಕೆ ನಾಡಿನಾದ್ಯಂತ ಸಿದ್ಧತೆ ಅಂತಿಮ ಹಂತದಲ್ಲಿದೆ. ಇದೇ ವೇಳೆ ಗಣೇಶೋತ್ಸವದಲ್ಲಿ ಪೂಜಿಸ ಲಾಗುವ ಶ್ರೀ ಗಣಪತಿಯ ವಿಗ್ರಹಗಳ ತಯಾರಿ ಕಾಸರಗೋಡು ನೆಲ್ಲಿಕುಂಜೆಯ ಲಕ್ಷ್ಮೀಶ ಆಚಾರ್ಯರ ಮನೆಯಲ್ಲಿ ಈಗಾಗಲೇ  ಪೂರ್ಣಗೊಂಡಿದೆ. ಕಳೆದ 34 ವರ್ಷಗಳಿಂದ ಲಕ್ಷ್ಮೀಶ ಆಚಾರ್ಯರು ಗಣಪತಿಯ ವಿಗ್ರಹ ತಯಾರಿಯಲ್ಲಿ ನಿರತರಾಗಿದ್ದು,  ಇವರ ಕೈಯಿಂದಲೇ ಸಿದ್ಧಗೊಂಡ ವಿಗ್ರಹಗಳು ನಾಡಿನ ವಿವಿಧೆಡೆ ಪೂಜಿಸಲ್ಪಡುತ್ತಿದೆ. ಕಾಸರಗೋಡು ಮಾತ್ರವಲ್ಲದೆ ಕಣ್ಣೂರು ಜಿಲ್ಲೆಯ ವಿವಿಧೆಡೆಗಳಿಗೂ ಇಲ್ಲಿಂದಲೇ  ವಿಗ್ರಹಗಳನ್ನು ಕೊಂಡೊಯ್ಯಲಾಗುತ್ತಿದೆ. ಗಣಪತಿ ವಿಗ್ರಹ  ಹೊರತು ನವರಾತ್ರಿ ಮಹೋತ್ಸವ ವೇಳೆ ಪೂಜಿಸಲ್ಪಡುವ …