45 ದಿನದೊಳಗೆ ಸಾರಿಗೆ ವ್ಯವಸ್ಥೆಗೆ ಪರಿಹಾರ ಉಂಟಾಗದಿದ್ದರೆ ತೀವ್ರ ಆಂದೋಲನ-ಮಾನವ ಸರಪಳಿಯಲ್ಲಿ ಮುನ್ನೆಚ್ಚರಿಕೆ

ಕಾಸರಗೋಡು: ನಗರದ ತೀವ್ರ ಸಾರಿಗೆ ಸಂಚಾರ ತಡೆಗೆ ಶಾಶ್ವತ ಪರಿಹಾರ ಕಾಣಬೇಕು, ಎಂ.ಜಿ. ರಸ್ತೆ ಸಹಿತದ ಪ್ರಧಾನ ರಸ್ತೆಗಳನ್ನು ಅಭಿವೃದ್ಧಿಗೊಳಿಸಬೇಕು, ಅನಧಿಕೃತ ನಿರ್ಮಾಣದ ವಿರುದ್ಧ ಕ್ರಮ ಕೈಗೊಳ್ಳಬೇಕು, ವೈಜ್ಞಾನಿಕವಾದ ಪಾರ್ಕಿಂಗ್ ವ್ಯವಸ್ಥೆ ಏರ್ಪಡಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಜಿಲ್ಲಾ ಜನಪರ ಅಭಿವೃದ್ಧಿ ಸಮಿತಿ ಹಾಗೂ ರೋಡ್ ಟಿಕಾರೊ ಒಕ್ಕೂಟದ ನೇತೃತ್ವದಲ್ಲಿ ಮಾನವ ಸರಪಳಿ ಆಯೋಜಿಸಲಾಯಿತು. ನಿನ್ನೆ ಹೊಸ ಬಸ್ ನಿಲ್ದಾಣದ ವೃತ್ತದಿಂದ ಆರಂಭಿಸಿ ಎಂ.ಜಿ. ರಸ್ತೆ ವರೆಗಿರುವ ವಲಯದ ಸಾರಿಗೆ ಸಮಸ್ಯೆಗಳಿಗೆ ಪರಿಹಾರ ಕಾಣಬೇಕೆಂದು ನಡೆಸಿದ ಮಾನವ …

ತಾಲೂಕು ರಚನೆಯಾಗಿ 11 ವರ್ಷ: ಸ್ವಂತ ಕಚೇರಿ ಕಟ್ಟಡಕ್ಕಾಗಿ ಗೋಗರೆಯುತ್ತಿರುವ ಮಂಜೇಶ್ವರ ತಾಲೂಕು

ಉಪ್ಪಳ: ಮಂಜೇಶ್ವರ ತಾಲೂಕು ಕಚೇರಿಗೆ ಸ್ವಂತ ಕಟ್ಟಡ ಇಲ್ಲದೆ ಬಾಡಿಗೆ ಕಟ್ಟಡದಲ್ಲೇ ಈಗಲೂ ಕಾರ್ಯಾಚರಿ ಸುತ್ತಿರುವುದು ಜನರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಮಂಜೇಶ್ವರ ತಾಲೂಕು ರಚನೆಯಾಗಿ ಹಲವಾರು ವರ್ಷಗಳು ಸಂದರೂ ಈಗಲೂ ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯಚರಿಸುತ್ತಿದೆ. ಉಪ್ಪಳ ಬಸ್ ನಿಲ್ದಾಣ ಮುಂಭಾಗದ ಬಹು ಮಹಡಿ ಕಟ್ಟಡದ ಎರಡನೇ ಅಂತಸ್ತಿನಲ್ಲಿ ತಾಲೂಕು ಕಚೇರಿ ಕಾರ್ಯಾಚರಿಸುತ್ತಿದ್ದು, ಸೌಕರ್ಯಗಳ ಕೊರತೆ ಸಮಸ್ಯೆಯಾಗಿದೆ. ತಾಲೂಕು ರಚನೆಯಾಗಿ ಸುಮಾರು 11 ವರ್ಷಗಳಾದರೂ ಇನ್ನೂ ಸ್ವಂತ ಕಟ್ಟಡ ನಿರ್ಮಿಸದಿರುವುದಕ್ಕೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ÷್ಯ ಕಾರಣವೆನ್ನಲಾಗಿದೆ. ತಾಲೂಕು …

ಜನರು ತಿರಸ್ಕರಿಸಿದ ನಿರಾಶೆಯಿಂದ ಎಸ್‌ಐಆರ್ ವಿರುದ್ಧ ಪ್ರತಿಭಟನೆ- ಎಂ.ಎಲ್. ಅಶ್ವಿನಿ

ಕಾಸರಗೋಡು: ಜನರು ಪೂರ್ಣ ವಾಗಿ ತಿರಸ್ಕರಿಸಿದ ನಿರಾಶೆಯಾಗಿದೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಒಳಗೊಂಡ ಇಂಡಿಯ ಒಕ್ಕೂಟಕ್ಕಿರು ವುದು. ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ನಡೆಸುವ ಪ್ರತಿಭಟನೆ ಇದರಿಂದಾಗಿ ಉದ್ಭವಿಸಿರುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಬಿಜೆಪಿ ಕಾಸರಗೋಡು ಮಂಡಲ ಸಮಿತಿ ಆಯೋಜಿಸಿದ ಶಾಸಕ ಕಲ್ಲಟ್ರ ಮಾಹಿನ್‌ರ ಕಚೇರಿ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಮಯದಲ್ಲಿ ಎಂಟು ಬಾರಿ ಪ್ರತ್ಯೇಕ ವೋಟರ್ ಯಾದಿ ಪರಿಷ್ಕರಣೆ ಜ್ಯಾರಿಗೊಳಿಸಲಾಗಿದೆ. ೧೩.೩ ಕೋಟಿ ನಾಗರಿಕರಿಗೆ ಮತದಾನದ …