ಮಾಯಾ ಟ್ರೇಡರ್ಸ್ ಗ್ರಾಂಡ್  ದೀಪಾವಳಿ ಸ್ಕ್ರಾಚ್ ಕಾರ್ಡ್ ಬಿಡುಗಡೆ

ಮಂಗಳೂರು: ದೀಪಾವಳಿ ಸಂ ಭ್ರಮವನ್ನು ಮತ್ತಷ್ಟು ವಿಶೇಷವಾಗಿಸಲು ಮಾಯಾ ಟ್ರೇಡರ್ಸ್ ‘ಗ್ರ‍್ಯಾಂಡ್ ದೀಪಾವಳಿ ಬಂಪರ್ ಕೊಡುಗೆ’ಯನ್ನು ಘೋಷಿಸಿದೆ. ಹಬ್ಬದ ಖರೀದಿಯ ಸಂತಸದೊAದಿಗೆ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನೂ ಕಲ್ಪಿಸಿರುವ ಈ ವಿಶೇಷ ಕೊಡುಗೆ, ಗ್ರಾಹಕರಿಗೆ ದೀಪಾವಳಿಯನ್ನು ಇನ್ನಷ್ಟು ಸ್ಮರಣೀಯವಾಗಿಸಲಿದೆ.ಎಂ.ಜಿ ರಸ್ತೆಯಲ್ಲಿರುವ ಪ್ರವೀಣ್ ಶೇಟ್ ಕ್ರೇಕರ್ಸ್ ಶಾಪ್‌ನಲ್ಲಿ ಜರಗಿದ ಸಮಾರಂಭದಲ್ಲಿ ಶಾಸಕ ಡಿ. ವೇದವ್ಯಾಸ್ ಕಾಮತ್ ಸ್ಕಾçö್ತಚ್ ಕಾರ್ಡ್ ಬಿಡುಗಡೆಗೊಳಿಸಿದರು. ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತಸರ ಪ್ರವೀಣ್ ಶೇಟ್ ನಾಗ್ವೇಕರ್, ಮೊಕ್ತಸರ ವಿನಾಯಕ ಕೆ. ಶೇಟ್, …

ಮಂಜೇಶ್ವರ ಬ್ಲೋಕ್ ಪಂ. ಅಧ್ಯಕ್ಷ ರಾಜೀನಾಮೆಗೆ ಬಿಜೆಪಿ ಆಗ್ರಹ

ಮಂಜೇಶ್ವರ: ಮಂಜೇಶ್ವರ ಬ್ಲಾಕ್ ವ್ಯಾಪ್ತಿಯಲ್ಲಿ ಬಡ ಜನತೆಗೆ ಸಿಗಬೇಕಾದ ಪಿಎಂ ಅವಾಸ್ ಯೋಜನೆಯ 17ಲಕ್ಷ ರೂ.ಗಳನ್ನು ಅವ್ಯವಹಾರ ನಡೆಸಿರುವುದರ ಬಗ್ಗೆ ಸಮಗ್ರ ತನಿಖೆ ನಡೆಸಲು ಬಿಜೆಪಿ ಮಂಡಲ ಸಮಿತಿ ಪ್ರಧಾನಮಂತ್ರಿ ಕಚೇರಿಗೆ ದೂರು ನೀಡಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ತಿಳಿಸಿದ್ದಾರೆ. ಅವ್ಯವಹಾರ ಹಿನ್ನೆಲೆಯಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸೈಫುಲ್ಲ ತಂಙಳ್ ನೈತಿಕತೆ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ ಆಗ್ರಹಿಸಿದ್ದಾರೆ. ಬಡವರ ಮನೆ ನಿರ್ಮಾಣಕ್ಕೆ ಕೇಂದ್ರ …

ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ಸಮಾಪ್ತಿ :ಸಮಗ್ರ ಪ್ರಶಸ್ತಿ ಗೆದ್ದುಕೊಂಡ ಪೆರಡಾಲ ಎನ್‌ಎಚ್‌ಎಸ್

ಬದಿಯಡ್ಕ: ಕಳೆದ ಮೂರು ದಿನಗಳಿಂದ  ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯುತ್ತಿದ್ದ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ನಿನ್ನೆ ಸಮಾಪ್ತಿಗೊಂಡಿತು.  ಕಲೋತ್ಸವದಲ್ಲಿ ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆ 448 ಅಂಕಗಳೊಂ ದಿಗೆ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದೆ. ಮುಹಿಮ್ಮಾತ್‌ನಗರ ಮುಹಿಮ್ಮಾತ್ ಎಚ್‌ಎಸ್‌ಎಸ್ 418 ಅಂಕಗಳೊಂದಿಗೆ ದ್ವಿತೀಯ, ಎಂಎಸ್‌ಸಿಎಚ್‌ಎಸ್ ನೀರ್ಚಾಲು 412 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದೆ. ಎಸ್‌ಎಸ್‌ಎಚ್‌ಎಸ್ ಶೇಣಿ 388 ಜಿವಿಎಚ್‌ಎಸ್‌ಎಸ್ ಕಾರಡ್ಕ 381, ಎಸ್‌ಎಪಿಎಚ್‌ಎಸ್ ಅಗಲ್ಪಾಡಿ 348, ಎಸ್‌ಎಸ್‌ಎಚ್ ಎಸ್‌ಎಸ್ ಕಾಟುಕುಕ್ಕೆ 344, ಜಿವಿಎಚ್‌ಎಸ್‌ಎಸ್ …

ಕೆನರಾ ಬ್ಯಾಂಕ್ ಕಲೆಕ್ಷನ್ ಏಜೆಂಟ್ ನಿಧನ

ಕಾಸರಗೋಡು: ನಾಟಕ ನಟ, ಎಲ್‌ಐಸಿ ಏಜೆಂಟ್ ಆಗಿದ್ದ ಓಲ್ಡ್ ಪ್ರೆಸ್ ಕ್ಲಬ್ ಜಂಕ್ಷನ್ ಬಳಿ ನಿವಾಸಿ ಕೆ. ನಾಗರಾಜ (69) ನಿಧನ ಹೊಂದಿದರು. ಕೆನರಾ ಬ್ಯಾಂಕ್‌ನ ಕಲೆಕ್ಷನ್ ಏಜೆಂಟ್ ಆಗಿದ್ದ ಇವರು ಯವನಿಕ ಕಲಾವೇದಿಯ ನಾಟಕ ನಟರೂ ಆಗಿದ್ದರು. ತಂದೆ ಶ್ರೀನಿವಾಸ, ತಾಯಿ ಗಿರೀಜ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಪತ್ನಿ ಆಶಾ, ಪುತ್ರಿ ಭಾಗ್ಯಶ್ರೀ (ಮಂಗಳೂರು ಎಸ್‌ಡಿಎಂ ಕಾಲೇಜಿನ ಎಂ.ಬಿ.ಎ.ವಿದ್ಯಾರ್ಥಿನಿ), ಸಹೋದರಿ ಚಂದ್ರಾವತಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.