ಯುವಕ ಹಾಗೂ ಗೆಳತಿಯನ್ನು ಆಕ್ರಮಿಸಿ ಚಿನ್ನ, ಹಣ ಅಪಹರಣ: ವಸತಿಗೃಹದಲ್ಲಿ ನಡೆದ ಘಟನೆಯಲ್ಲಿ 17ರ ಬಾಲಕ ಸಹಿತ ಮೂರು ಮಂದಿ ಸೆರೆ

ಕಾಸರಗೋಡು: ಪನತ್ತಡಿ ನಿವಾಸಿ ಹಾಗೂ ಗೆಳತಿಯನ್ನು ವಸತಿಗೃಹದ ಕೊಠಡಿಯಲ್ಲಿ ಆಕ್ರಮಿಸಿದ ಬಳಿಕ ಚಿನ್ನ ಹಾಗೂ ನಗದು ಅಪಹರಿಸಿರುವು ದಾಗಿ ದೂರಲಾಗಿದೆ. ಕೇಸು ದಾಖಲಿ ಸಿದ ಕಾಸರಗೋಡು ನಗರ ಠಾಣೆ ಪೊಲೀಸರು 17ರ ಹರೆಯದ ಬಾಲಕ ಸಹಿತ ಮೂರು ಮಂದಿಯನ್ನು ಬಂ ಧಿಸಿದ್ದಾರೆ. ಹಲವಾರು ಪ್ರಕರಣಗಳಲ್ಲಿ ಆರೋಪಿ ಹಾಗೂ ಮಧೂರು ಎಸ್‌ಪಿ ನಗರ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಸಾಬಿತ್ (30, ನಾಯಮ್ಮಾರ್ ಮೂಲೆ ಅಕ್ಕರಪಳ್ಳ ನಿವಾಸಿ ಅಮೀರ್‌ಅಲಿ (30), ಇನ್ನೋರ್ವ 17ರ ಬಾಲಕನನ್ನು ಬಂಧಿಸಲಾಗಿದೆ. ರಾಜಪುರಂ ಪೊಲೀಸ್ ಠಾಣೆ ವ್ಯಾಪ್ತಿಯ …

3.37 ಗ್ರಾಂ ಎಂಡಿಎಂಎ ಸಹಿತ ಯುವಕ ಸೆರೆ

ಕಾಸರಗೋಡು: ಕಾಸರಗೋಡು ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಮಾರಕ ಮಾದಕ ದ್ರವ್ಯವಾದ 3.37 ಗ್ರಾಂ ಎಂಡಿಎಂಎ ಸಹಿತ ಯುವಕನೋರ್ವನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಸರಗೋಡು ನೆಲ್ಲಿಕುಂಜೆ ಕಸಬಾ ಬೀಚ್‌ನ ಅಭಿಜಿತ್ ಪಿ. (26) ಬಂಧಿತ ಆರೋಪಿ. ಕಾಸರಗೋಡು ಪೊಲೀಸ್ ಠಾಣೆಯ ಎಸ್‌ಐ ಮನು ಪಿ.ವಿ.ಯವರ ನೇತೃತ್ವದ ಪೊಲೀಸರು ನಿನ್ನೆ ಸಂಜೆ ಆರೋಪಿಯ ಮನೆಗೆ ದಾಳಿ ನಡೆಸಿ ಆ ಮನೆಯ ಬೆಡ್‌ರೂಮ್ ತಪಾಸಣೆ ಮಾಡಿದಾಗ ಅಲ್ಲಿದ್ದ ಬ್ಯಾಗ್‌ನೊಳಗೆ ಬಚ್ಚಿಡಲಾಗಿದ್ದ ಎಂಡಿಎಂಎ ಪತ್ತೆಯಾಗಿದೆ. ಅದರಂತೆ ಆತನನ್ನು ಬಂಧಿಸಲಾಯಿತೆಂದು ಪೊಲೀಸರು ತಿಳಿಸಿದ್ದಾರೆ. …

ಇರಿತ: ನಾಲ್ವರು ಯುವಕರಿಗೆ ಗಾಯ; ಸಹೋದರರ ವಿರುದ್ಧ ಪ್ರಕರಣ ದಾಖಲು

ಕುಂಬಳೆ: ಪೂರ್ವ ದ್ವೇಷದಿಂದ ನಾಲ್ವರು ಯುವಕರಿಗೆ ಇರಿದು ಗಾಯಗೊ ಳಿಸಿದ ದೂರಿನಂತೆ ಸಹೋದರರಾದ ಇಬ್ಬರ ವಿರುದ್ಧ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಚ್ಲಂಗೋಡು ಪಚ್ಚಂಬಳ ಸಫಾನಗರದ ಶರೀಫ್ ಎಸ್.ಎ. (36) ಪಚ್ಚಂಬಳದ ನವಾಜ್ (30), ಮಹಮ್ಮೂದ್ (30) ಮತ್ತು ರಫೀಕ್ (30) ಎಂಬವರು ಈ ರೀತಿ ಇರಿತಕ್ಕೊಳಗಾಗಿದ್ದು, ಆ ಬಗ್ಗೆ ಗಾಯಗೊಂಡ ಶರೀಫ್ ನೀಡಿದ ದೂರಿ ನಂತೆ ಸಹೋದರರಾದ ಇರ್ಷಾದ್ ಮತ್ತು ದಿಲ್‌ಶಾದ್ ಎಂಬವರ ವಿರುದ್ಧ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿ ದ್ದಾರೆ. ನವೆಂಬರ್ ೩ರಂದು ರಾತ್ರಿ …

ಅಂಗನವಾಡಿ ಅಧ್ಯಾಪಿಕೆ  ವಿಷ ಸೇವಿಸಿ  ಮೃತ್ಯು

ಮುಳ್ಳೇರಿಯ: ಅಂಗನವಾಡಿ ಅಧ್ಯಾಪಿಕೆ  ವಿಷ ಸೇವಿಸಿ  ಮೃತಪಟ್ಟ ಘಟನೆ ನಡೆದಿದೆ.  ಬೇಂಗತ್ತಡ್ಕ ನಿವಾಸಿ ಸುಂದರ ಎಂಬವರ ಪತ್ನಿ ಬೇಬಿ (46) ಮೃತಪಟ್ಟ ಅಧ್ಯಾಪಿಕೆ. ಇವರು ಕಾನಕ್ಕೋಡು  ಆಜಾದ್‌ನಗರದಲ್ಲಿ ಅಂಗನವಾಡಿ ಅಧ್ಯಾಪಿಕೆಯಾಗಿದ್ದರು. ನಿನ್ನೆ ಮಧ್ಯಾಹ್ನ  ಇಲ್ಲಿಗೆ ಸಮೀಪ ಪ್ಲಾಂಟೇಶನ್ ಕಾರ್ಪೋರೇಶನ್‌ನ ಗೇರು ತೋಟದಲ್ಲಿ  ವಿಷ ಸೇವಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.   ಕೂಡಲೇ ಮುಳ್ಳೇರಿಯದ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾ ಗಲಿಲ್ಲ. ಮೃತದೇಹವನ್ನು ಕಾಸರ ಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮನೆಗೆ ತಲುಪಿಸಲಾಯಿತು. ಅಲ್ಲಿ ಸಂಬಂಧಿಕರ ಸಹಿತ …

ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ವಂಚನೆ: ಜಿಲ್ಲೆಯಲ್ಲಿ ಸಮಗ್ರ ತನಿಖೆಗೆ ಎಂ.ಎಲ್. ಅಶ್ವಿನಿ ಒತ್ತಾಯ

ಕಾಸರಗೋಡು:  ಮಂಜೇಶ್ವರ ಬ್ಲೋಕ್ ಪಂಚಾಯತ್‌ನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ (ಪಿಎಂಎವೈ)ಯಿಂದ ಅಧಿಕಾರಿಯೋರ್ವ 16 ಲಕ್ಷ ರೂಪಾಯಿಗಳಷ್ಟು ಹಣವನ್ನು ಲಪಟಾಯಿಸಿದ ಪ್ರಕರಣದಲ್ಲಿ ಸಮಗ್ರ ತನಿಖೆ ನಡೆಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಒತ್ತಾಯಿಸಿದ್ದಾರೆ. ಮಂಜೇಶ್ವರ ಬ್ಲೋಕ್ ಪಂಚಾ ಯತ್‌ನಲ್ಲಿ ನಡೆದ ಈ ವಂಚನೆಯನ್ನು ಅಪರೂಪದ ಘಟನೆಯಾಗಿ ಕಾಣದೆ ಜಿಲ್ಲೆಯ ಇತರ ಬ್ಲೋಕ್ ಪಂಚಾಯತ್‌ಗಳು ಹಾಗೂ ಗ್ರಾಮ ಪಂಚಾಯತ್ ಗಳಲ್ಲೂ ತನಿಖೆ ನಡೆಸಬೇಕು. ಯೋಜನೆಯ ಯತಾರ್ಥ ಫಲಾನುಭವಿಗಳಿಗೆ  ಲಭಿಸಬೇಕಾದ ಹಣಕಾಸು ಸಹಾಯಕ್ಕೆ ಅಡಚಣೆ ಸೃಷ್ಟಿಸಿ ಯೋಜನೆಯನ್ನು ಬುಡಮೇಲುಗೊಳಿಸಲು ಪ್ರಯತ್ನ ನಡೆದಿದೆಯೇ …

ನಗರದ ಎಂ.ಜಿ ರಸ್ತೆಯಲ್ಲಿ ಸಾರಿಗೆ ಅಡಚಣೆ: ಚಳವಳಿ ನಡೆಸಿದವರ ವಿರುದ್ಧ ಕೇಸು

ಕಾಸರಗೋಡು: ನಗರದ ಎಂ.ಜಿ ರಸ್ತೆಯಲ್ಲಿ ಸಾರಿಗೆ ಅಡಚಣೆಗೆ ಪರಿಹಾರ ಕಾಣಬೇಕೆಂದು ಒತ್ತಾಯಿಸಿ ಚಳವಳಿ ನಡೆಸಿದ ೨೫ ಮಂದಿ ವಿರುದ್ಧ ನಗರಸಭೆಯ ಅಧಿಕಾರಿಗಳ ದೂರಿನಂತೆ  ಪೊಲೀಸರು ಕೇಸು ದಾಖಲಿಸಿಕೊಂಡಿರುವು ದಾಗಿ ಜನಪರ ಅಭಿವೃದ್ಧಿ  ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.  ನಗರದಲ್ಲಿ  ವ್ಯಾಪಾರಿಯಾಗಿದ್ದ ಹನೀಫ್ ಎಂಬವರು  ಸಾರಿಗೆ ಅಡಚಣೆಯಲ್ಲಿ ಸಿಲುಕಿ ಮೃತಪಟ್ಟ ರೀತಿಯ ಘಟನೆ  ಪುನರಾವರ್ತಿಸುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜನಪರ ಅಭಿವೃದ್ಧಿ ಸಮಿತಿ ಮಾನವ ಸರಪಳಿ ಚಳವಳಿ ಹಾಗೂ ನಗರಸಭಾ ಕಚೇರಿಗೆ ಮಾರ್ಚ್ ನಡೆಸಿತ್ತು.ಅನಂತರ ನಗರಸಭಾ ಕಚೇರಿಗೆ  ಮನವಿ …

ಡಬಲ್‌ಗೇಟ್ ಬಳಿ ಮರದಲ್ಲಿ ಕಣಜದ ಗೂಡು: ಸ್ಥಳೀಯರಲ್ಲಿ ಆತಂಕ

ಉಪ್ಪಳ: ಬಂದ್ಯೋಡು-ಪೆರ್ಮುದೆ ರಸ್ತೆಯ ಡಬಲ್‌ಗೇಟ್‌ನ ಬಳಿ ಮರವೊಂದರಲ್ಲಿ ಕಣಜದ ಹುಳು ಎಂದು ಅಂದಾಜಿಸಲಾಗುತ್ತಿರುವ ಗೂಡು ಪತ್ತೆಯಾಗಿದ್ದು, ಇದು ಊರವರಲ್ಲಿ ಆತಂಕ ಉಂಟುಮಾಡಿದೆ. ಕಳೆದ ಒಂದು ತಿಂಗಳಿAದ ಇಲ್ಲಿನ ಮರದಲ್ಲಿ ಗೂಡು ಕಂಡುಬAದಿದ್ದು, ದಾಳಿ ಮಾಡುವ ಸಾಧ್ಯೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಪರಿಸರದಿಂದ ಶಾಲೆ, ಅಂಗನವಾಡಿ ಮಕ್ಕಳ ಸಹಿತ ಹಲವಾರು ಮಂದಿ ನಡೆದು ಹೋಗುತ್ತಿದ್ದಾರೆ. ಅಲ್ಲದೆ ಈ ಪರಿಸರದಲ್ಲಿ ಮನೆ, ಅಂಗಡಿ ಕೂಡಾ ಇದ್ದು, ಆತಂಕಕ್ಕೆ ಕಾರಣವಾಗಿದೆ. ಇದನ್ನು ತೆರವುಗೊಳಿಸಲು ಕ್ರಮಕೈಗೊಳ್ಳಬೇಕೆಂದು ಊರವರು ಒತ್ತಾಯಿಸಿದ್ದಾರೆ.

ಎಸ್‌ಕೆಎಸ್‌ಎಸ್‌ಎಫ್ ಧಾರ್ಮಿಕ ಪ್ರವಚನ 8ರಂದು

ಕುಂಬಳೆ: ಎಸ್‌ಕೆಎಸ್‌ಎಸ್‌ಎಫ್ ಅಡ್ಕ ಘಟಕದ ನೇತೃತ್ವದಲ್ಲಿ ಏಕದಿನ ಧಾರ್ಮಿಕ ಪ್ರವಚನ ಈ ತಿಂಗಳ 8ರಂದು ನಡೆಯಲಿದೆಯೆಂದು ಕುಂಬಳೆ ಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳು ತಿಳಿಸಿದ್ದಾರೆ. ಅಂದು ರಾತ್ರಿ 7ಕ್ಕೆ ಕೆ.ಎಸ್. ಮೊಹಮ್ಮದ್ ಶಮೀಮ್ ತಂಙಳ್ ಕುಂಬೋಳ್ ಉದ್ಘಾಟಿಸುವರು. ಸಿಂಸಾರುಲ್ ಹಕ್ ಹುದವಿ ಪ್ರಧಾನ ಭಾಷಣ ಮಾಡುವರು.  ಈ ಬಗ್ಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಯೂಸಫ್ ಸಿ.ಎ., ಒ.ಕೆ. ಇಬ್ರಾಹಿಂ, ಫೈಸಲ್ ದಾರಿಮಿ, ಅಬ್ದುಲ್ ರಹ್‌ಮಾನ್ ಹಾಜಿ ಬಂಡಸಾಲೆ, ಮುಹಮ್ಮದ್ ಮುಟ್ಟಂ, ಮೊದೀನ್ ಭಾಗವಹಿಸಿದರು.

ಬದಿಯಡ್ಕದಲ್ಲಿ ಗೋಪೂಜೆ 8ರಂದು

ಬದಿಯಡ್ಕ: ವಿಶ್ವ ಹಿಂದು ಪರಿಷತ್, ಬಜರಂಗ ದಳ ಬದಿಯಡ್ಕ ಪ್ರಖಂಡ ಸಮಿತಿಯ ಆಶ್ರಯದಲ್ಲಿ ಗೋಪೂಜಾ ಕಾರ್ಯಕ್ರಮ ನ. 8ರಂದು ಜರಗಲಿದೆ. ಸಾಯಂಕಾಲ ೩.೩೦ ಕ್ಕೆ ಬೋಳುಕಟ್ಟೆ ಮೈದಾನದಿಂದ ಬೃಹತ್ ಶೋಭಾಯಾತ್ರೆ ಹೊರಡಲಿದ್ದು, ಬದಿಯಡ್ಕ ಬಸ್ ನಿಲ್ದಾಣ ಪರಿಸರದಲ್ಲಿ ಸಮಾಪ್ತಿಗೊಳ್ಳಲಿದೆ. ನಂತರ ನಡೆಯುವ ಸಭಾ ಕಾರ್ಯಕ್ರಮವನ್ನು ಗುರುಪುರ ಶ್ರೀ ರಾಜಶೇಖರಾನಂದ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡುವರು. ಕೇಂದ್ರ ಮಾಜಿ ಸಚಿವ ಬಸವನ ಗೌಡ ಆರ್ ಪಾಟೀಲ್ ದಿಕ್ಸೂಚಿ ಭಾಷಣ ಮಾಡುವರು. ಹರಿಪ್ರಸಾದ್ ರೈ ಪುತ್ರಕಳ ಅಧ್ಯಕ್ಷತೆ ವಹಿಸುವರು. ಡಾ. …

ಮುಳ್ಳೇರಿಯದಲ್ಲಿ ಕುಟುಂಬ ಆರೋಗ್ಯ  ಕೇಂದ್ರ ಲ್ಯಾಬ್ ಕಟ್ಟಡ ಉದ್ಘಾಟನೆ 9ರಂದು

ಮುಳ್ಳೇರಿಯ: ಇಲ್ಲಿನ ಕುಟುಂಬ ಆರೋಗ್ಯ ಕೇಂದ್ರದ ನೂತನ ಲ್ಯಾಬ್ ಕಟ್ಟಡವನ್ನು  ಈ ತಿಂಗಳ 9ರಂದು ಸಂಜೆ 4 ಗಂಟೆಗೆ   ಆರೋಗ್ಯ ಇಲಾಖೆ ಸಚಿವ ಕೆ. ಮುರಳೀಧರನ್ ಉದ್ಘಾಟಿಸುವರು.  ಶಾಸಕ ಕಲ್ಲಟ್ರ ಮಾಹಿನ್ ಅಧ್ಯಕ್ಷತೆ ವಹಿಸುವರು. ಲ್ಯಾಬನ್ನು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಸಭಾಂಗಣವನ್ನು ಶಾಸಕ ಕೆ. ನೀಲಕಂಠನ್ ಉದ್ಘಾಟಿಸುವರು. ಪಾಲಿಯೇಟಿವ್ ಕೊಠಡಿಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ, ಎಂಡೋಸಲ್ಫಾನ್ ಕೊಠಡಿಯನ್ನು ಜಿಲ್ಲಾಧಿಕಾರಿ ಶ್ರೀಧನ್ಯಾ ಸುರೇಶ್ ಉದ್ಘಾಟಿಸುವರು. ಕಾರಡ್ಕ ಪಂ. ಅಧ್ಯಕ್ಷೆ ಜನನಿ ಎಂ, ಬ್ಲೋಕ್ ಪಂ. …