ಜಿಲ್ಲಾ ಶಾಲಾ ಕಲೋತ್ಸವ  ಕೂಡ್ಲು ಶಾಲಾ ತಂಡ ರಾಜ್ಯಮಟ್ಟಕ್ಕೆ

ಕಾಸರಗೋಡು: ಪೆರಿಯ ಸರಕಾರಿ ಪ್ರೌಢ ಶಾಲೆಯಲ್ಲಿ ಜರಗಿದ ಕಂದಾಯ ಜಿಲ್ಲಾಮಟ್ಟದ ಶಾಲಾ ಕಲೋತ್ಸವದ ಯಕ್ಷಗಾನ ಸ್ಪರ್ಧೆಯಲ್ಲಿ ಕೂಡ್ಲು ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆ ತಂಡ ಎ ಗ್ರೇಡ್‌ನೊಂದಿಗೆ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಒಟ್ಟು ನಾಲ್ಕು ತಂಡಗಳು ಭಾಗವಹಿಸಿದ್ದು, ಕೂಡ್ಲು ಶಾಲೆಯ ತಂಡ ‘ತರಣಿ ಸೇನ ಕಾಳಗ’ ಪ್ರದರ್ಶಿಸಿತ್ತು. ಇವರ ಪ್ರದರ್ಶನ ಪ್ರೇಕ್ಷಕರ ಮನ ಮುದಗೊಳಿಸಿತು. ಗುರು ರಂಜಿತ್ ಗೋಳಿಯಡ್ಕ ನಿರ್ದೇಶಿಸಿದ ತಂಡದಲ್ಲಿ ಕೃಪನಿಧಿ, ದ್ವಿತಿ, ಶರಣ್ ಪಾಯಿಚ್ಚಾಲ್, ಮನ್ವಿತ್,  ಅದ್ವಿತ್, ಯಶ್ವನ್ ಶೆಟ್ಟಿ, ಧನ್ವಿ …

ಕಾಸರಗೋಡು ಉಪಜಿಲ್ಲೆಗೆ ತೀವ್ರ ಸ್ಪರ್ಧೆವೊಡ್ಡಿದ ಹೊಸದುರ್ಗ ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ಇಂದು ಸಮಾರೋಪ

ಕಾಸರಗೋಡು: ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ಇಂದು ಸಮಾರೋಪ ಗೊಳ್ಳಲಿರುವಂತೆ ಕಾಸರಗೋಡು ಉಪಜಿಲ್ಲೆ, ಹೊಸದುರ್ಗ ಉಪಜಿಲ್ಲೆ ಜಿದ್ದಾಜಿದ್ದಿನ ಪೈಪೋಟಿ ನೀಡಿ ಮುಂದುವರಿಯುತ್ತಿದೆ756 ಅಂಕ ಗಳಿಸಿದ ಕಾಸರಗೋಡು ಉಪಜಿಲ್ಲೆ ಹಾಗೂ 352 ಅಂಕಗಳೊಂದಿಗೆ ಹೊಸದುರ್ಗ ಉಪಜಿಲ್ಲೆ ಮುನ್ನಡೆಯುತ್ತಿದೆ. 684 ಅಂಕ ಗಳಿಸಿದ ಚಿತ್ತಾರಿಕಲ್ ಉಪಜಿಲ್ಲೆ ತೃತೀಯ ಸ್ಥಾನದಲ್ಲಿದೆ. ಶಾಲಾ ಮಟ್ಟದಲ್ಲಿ ದುರ್ಗಾ ಹೈಯರ್ ಸೆಕೆಂಡರಿ ಶಾಲೆ 214 ಅಂಕದೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, 151 ಅಂಕದೊಂದಿಗೆ ಪಿಲಿಕೋಡ್ ಸಿಕೆಎನ್‌ಎಸ್‌ಜಿಎಚ್‌ಎಸ್‌ಎಸ್ ದ್ವಿತೀಯ ಸ್ಥಾನದಲ್ಲಿದೆ. ಇಂದು ವೇದಿಕೆ 3ರಲ್ಲಿ ಜನಪದ ನೃತ್ಯ, ಸಮೂಹ …