ಕಾಸರಗೋಡು ಉಪಜಿಲ್ಲೆಗೆ ತೀವ್ರ ಸ್ಪರ್ಧೆವೊಡ್ಡಿದ ಹೊಸದುರ್ಗ ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ಇಂದು ಸಮಾರೋಪ

ಕಾಸರಗೋಡು: ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ಇಂದು ಸಮಾರೋಪ ಗೊಳ್ಳಲಿರುವಂತೆ ಕಾಸರಗೋಡು ಉಪಜಿಲ್ಲೆ, ಹೊಸದುರ್ಗ ಉಪಜಿಲ್ಲೆ ಜಿದ್ದಾಜಿದ್ದಿನ ಪೈಪೋಟಿ ನೀಡಿ ಮುಂದುವರಿಯುತ್ತಿದೆ756 ಅಂಕ ಗಳಿಸಿದ ಕಾಸರಗೋಡು ಉಪಜಿಲ್ಲೆ ಹಾಗೂ 352 ಅಂಕಗಳೊಂದಿಗೆ ಹೊಸದುರ್ಗ ಉಪಜಿಲ್ಲೆ ಮುನ್ನಡೆಯುತ್ತಿದೆ. 684 ಅಂಕ ಗಳಿಸಿದ ಚಿತ್ತಾರಿಕಲ್ ಉಪಜಿಲ್ಲೆ ತೃತೀಯ ಸ್ಥಾನದಲ್ಲಿದೆ. ಶಾಲಾ ಮಟ್ಟದಲ್ಲಿ ದುರ್ಗಾ ಹೈಯರ್ ಸೆಕೆಂಡರಿ ಶಾಲೆ 214 ಅಂಕದೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, 151 ಅಂಕದೊಂದಿಗೆ ಪಿಲಿಕೋಡ್ ಸಿಕೆಎನ್‌ಎಸ್‌ಜಿಎಚ್‌ಎಸ್‌ಎಸ್ ದ್ವಿತೀಯ ಸ್ಥಾನದಲ್ಲಿದೆ. ಇಂದು ವೇದಿಕೆ 3ರಲ್ಲಿ ಜನಪದ ನೃತ್ಯ, ಸಮೂಹ ನೃತ್ಯ, ವೇದಿಕೆ 2ರಲ್ಲಿ ಕಥಕ್ಕಳಿ, ನಾಟಕ, ವೇದಿಕೆ ೩ರಲ್ಲಿ ಮೋಹಿನಿಯಾಟ್ಟಂ ಮೊದಲಾದ ಸ್ಪರ್ಧೆಗಳು ನಡೆಯಲಿದೆ. ಅರಬನಮುಟ್ಟ್, ಕೋಲಾಟ, ಮಾಪಿಳಪಾಟ್, ದಫ್‌ಮುಟ್ಟ್ ಮೊದಲಾದ ಸ್ಪರ್ಧೆಗಳು ಇಂದು ನಡೆಯಲಿದೆ. ಸಂಜೆ ಸಮಾರೋಪ ಸಮಾರಂಭ ಜರಗಲಿದೆ.

RELATED NEWS

You cannot copy contents of this page