25 ವರ್ಷಗಳ ಹಿಂದೆ ವಾಹನ ಅಪಘಾತ: ಕಾಲುಗಳ ಬಲ ಕಳೆದುಕೊಂಡು ಹಾಸಿಗೆ ಹಿಡಿದ ಮನೆಯೊಡೆಯ; ಚಿಕಿತ್ಸೆಗೆ ಬೇಕು ಭಾರೀ ಮೊತ್ತ; ದಾನಿಗಳ ಸಹಾಯ ನಿರೀಕ್ಷೆಯಲ್ಲಿ ಕುಟುಂಬ

ಪೆರ್ಲ: 25 ವರ್ಷಗಳ ಹಿಂದೆ ಸಂಭವಿಸಿದ ವಾಹನ ಅಪಘಾತದಲ್ಲಿ ಕಾಲುಗಳಿಗೆ ಉಂಟಾದ ಏಟು ವ್ಯಕ್ತಿಯ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದರ ಪರಿಣಾಮ ಒಂದು ಕಾಲು ಬಲಹೀನಗೊಂಡು ನಡೆದಾಡಲು ಕಷ್ಟಪಡುತ್ತಿದ್ದು ಇದರಿಂದ ಕುಟುಂಬದ ಜೀವನ ಸಂಕಷ್ಟ ಮಯವಾಗಿ ಮಾರ್ಪಾಡುಗೊಂಡಿದೆ.

ಪೆರ್ಲ ನಿವಾಸಿಯಾದ ಸುಬ್ರಹ್ಮಣ್ಯ ಭಟ್ (50) ಎಂಬವರು ಪ್ರಸ್ತುತ ನಡೆದಾಡಲು ಸಾಧ್ಯವಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಇವರು ೨೫ ವರ್ಷಗಳ ಹಿಂದೆ ಕರ್ನಾಟಕದಲ್ಲಿ ಆಟೋರಿಕ್ಷಾ ಚಾಲಕನಾಗಿ ದುಡಿ ಯುತ್ತಿದ್ದರು. ಈ ವೇಳೆ ಮಡಂತ್ಯಾರು ಎಂಬಲ್ಲಿ ಆಟೋರಿಕ್ಷಾ ಅಪಘಾತ ಕ್ಕೀಡಾಗಿತ್ತು. ಇದರಿಂದ ಎರಡೂ ಕಾಲುಗಳಿಗೆ ಗಂಭೀರ ಏಟು ತಗಲಿತ್ತು. ದೀರ್ಘಕಾಲ ಚಿಕಿತ್ಸೆ ಪಡೆದರೂ ಬಲದ ಕಾಲಿನ ಏಟು ವಾಸಿಯಾಗಲಿಲ್ಲ. ಇದರಿಂದ ಎರಡು ಬಾರಿ ಶಸ್ತ್ರಚಿಕಿತ್ಸೆ ನಡೆಸಿದ್ದು ಇದಕ್ಕೆ ಭಾರೀ ಮೊತ್ತವನ್ನು ಖರ್ಚು ಮಾಡಬೇಕಾಯಿತು. ಶಸ್ತ್ರಚಿಕಿತ್ಸೆ ನಡೆಸಿದರೂ ನಡೆದಾಡಲು ಸಾಧ್ಯವಾಗದೆ ಇದ್ದು ಈ ಹಿನ್ನೆಲೆಯಲ್ಲಿ ಇನ್ನೊಂದು ಬಾರಿ ಶಸ್ತ್ರಚಿಕಿತ್ಸೆ ನಡೆಸಬೇಕಾಗಿ ಕಾಸರ ಗೋಡಿನ ಖಾಸಗಿ ಆಸ್ಪತ್ರೆ ಯೊಂದರ ವೈದ್ಯರು ತಿಳಿಸಿದಾ ರೆನ್ನಲಾಗಿದೆ. ಕಾಲಿನ ನೋವು ಪದೇ ಪದೇ ಉಂಟಾಗುತ್ತಿದ್ದರೂ ಜೀವನ ಸಾಗಿಸಲು ಬೇರೆ ದಾರಿಯಿಲ್ಲ ದುದರಿಂದ ನೀರ್ಚಾಲು, ಬದಿಯಡ್ಕ, ಪೆರ್ಲದ ಹೋಟೆಲ್‌ಗಳಲ್ಲಿ ಕೆಲಸ ನಿರ್ವಹಿಸಿದ್ದರು. ಆದರೆ ದಿನ ಕಳೆದಂತೆ ಕಾಲುನೋವು ಉಲ್ಬಣಗೊಂಡು ಎದ್ದು ನಿಲ್ಲಲೂ ಸಾಧ್ಯವಾಗದುದರಿಂದ ಆ ಕೆಲಸವನ್ನು ಬಿಡಬೇಕಾಗಿ ಬಂದಿದೆ. ಮಾತ್ರವಲ್ಲ ಇದೀಗ ಮನೆಯಲ್ಲೇ ಉಳಿಯುವಂತಾಗಿದೆ. ಇವರೊಂದಿಗೆ ತಾಯಿ ಹಾಗೂ ಪತ್ನಿಯಿದ್ದು, ಅವರ ದೈನಂದಿನ ಖರ್ಚು ಚಿಕಿತ್ಸೆ ಮೊದಲಾ ದವುಗಳನ್ನು ಇವರೇನೋಡಿಕೊಳ್ಳ ಬೇಕಾಗಿದೆ. ಆದರೆ ಎದ್ದು ನಡೆದಾಡಲು ಸಾಧ್ಯವಾಗದ  ವ್ಯಕ್ತಿ ಹೇಗೆ ಹಣ ಸಂಪಾದಿಸುವುದೆಂದು ತಿಳಿಯದೆ ಕುಟುಂಬ ಆತಂಕದಲ್ಲಿದೆ. ಸುಬ್ರಹ್ಮಣ್ಯ ಭಟ್‌ರ ಕಾಲಿನ ಶಸ್ತ್ರ ಚಿಕಿತ್ಸೆ ಶೀಘ್ರ ನಡೆಸದಿದ್ದಲ್ಲಿ ಮುಂದೆ ಇನ್ನಷ್ಟು ಗಂಭೀರ ಸ್ಥಿತಿಗೆ ತಲುಪಲಿದೆ ಎಂದು ವೈದ್ಯರು ತಿಳಿಸಿದ್ದಾರೆನ್ನಲಾಗಿದೆ. ಆದರೆ ಶಸ್ತ್ರಚಿಕಿತ್ಸೆಗೆ ಕನಿಷ್ಠ ೩ ಲಕ್ಷ ರೂಪಾಯಿಯಾದರೂ ಬೇಕಾಗಿ ಬರಲಿದೆ ಎಂದೂ ತಿಳಿಸಲಾಗಿದೆ. ಆದರೆ ಇಷ್ಟು ಮೊತ್ತವನ್ನು ಎಲ್ಲಿಂದ ಸಂಪಾದಿಸುವುದೆಂದು ತಿಳಿಯದೆ ಕುಟುಂಬ ಚಿಂತೆಯಲ್ಲಿದೆ.

ಅದರಿಂದ ದಾನಿಗಳು ಸಹಾಯ ಮಾಡಬಹುದೆಂಬ ನಿರೀಕ್ಷೆಯನ್ನು ಈ ಕುಟುಂಬ ಹೊಂದಿದೆ. ಈ ಉದ್ದೇಶದಿಂದ ಕೆನರಾಬ್ಯಾಂಕ್‌ನ ಪೆರ್ಲ ಶಾಖೆಯಲ್ಲಿ ಸುಬ್ರಹ್ಮಣ್ಯ ಭಟ್‌ರ ಹೆಸರಲ್ಲಿ ಖಾತೆ ತೆರೆಯಲಾಗಿದೆ. ಖಾತೆ ನಂಬ್ರ: 42132200111627 (ಐಎಫ್‌ಎಸ್‌ಸಿ ಕೋಡ್: ಈಃಖಇ 0014213) ಆಗಿದೆ. ಸುಬ್ರಹ್ಮಣ್ಯ ಭಟ್‌ರ ಸಂಪರ್ಕಕ್ಕಾಗಿ ಮೊಬೈಲ್ ನಂಬ್ರ: 9349788521

You cannot copy contents of this page