29 ವರ್ಷಗಳ ದಾಂಪತ್ಯ ಬಳಿಕ ಸಂಗೀತ ನಿರ್ದೇಶಕ ಎ.ಆರ್. ರಹ್ಮಾನ್, ಪತ್ನಿ ಸೈರಾಬಾನು ವಿವಾಹ ವಿಚ್ಛೇಧನದತ್ತ
ಚೆನ್ನೈ: ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರಹ್ಮಾನ್ ಹಾಗೂ ಪತ್ನಿ ಸೈರಾ ಬಾನು ವಿವಾಹ ವಿಚ್ಛೇದನಗೊಳ್ಳಲಿದ್ದಾರೆಂದು ಹೇಳಲಾಗುತ್ತಿದೆ. ಮದುವೆಯ ೨೯ ವರ್ಷಗಳ ಬಳಿಕ ತಾವು ವಿವಾಹ ವಿಚ್ಛೇದನ ಹೊಂದುವುದಾಗಿ ಸೈರಾ ಬಾನು ಬಹಿರಂಗಪಡಿಸಿದ್ದಾರೆ.
ಅವರ ನ್ಯಾಯವಾದಿ ವಂದನಾಶಾ ಎಂಬವರು ಈ ಹೇಳಿಕೆಯನ್ನು ರಾಷ್ಟ್ರೀಯ ಚಾನೆಲ್ಗೆ ನೀಡಿದ್ದಾರೆ.
1995ರಲ್ಲಿ ವಿವಾಹಿತರಾದ ಎ.ಆರ್. ರಹ್ಮಾನ್ ಹಾಗೂ ಸೈರಾ ಬಾನು ದಂಪತಿಗೆ ಖದೀಜ, ರಹೀಮ, ಅಮೀನ್ ಎಂಬೀ ಮೂವರು ಮಕ್ಕಳಿದ್ದಾರೆ. ಈ ಪೈಕಿ ಖದೀಜ ರಹ್ಮಾನ್ 2020ರಲ್ಲಿ ವಿವಾ ಹಿತರಾಗಿದ್ದಾರೆ.