4 ತಿಂಗಳ ಗರ್ಭಿಣಿ ಯುವತಿ ಪತಿ ಗೃಹದಲ್ಲಿ ನೇಣು ಬಿಗಿದು ಮೃತ್ಯು: ನಿಗೂಢತೆ ಆರೋಪ

ಕೊಲ್ಲಂ: ನಾಲ್ಕು ತಿಂಗಳ ಗರ್ಭಿಣಿ ಯಾದ ಯುವತಿ ಪತಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾಳೆ. ಕೊಲ್ಲಂ ಕಡೈಕಲ್ ಇಟ್ಟಿವ ಫಿಲ್ಗಿರಿಯ ನಿವಾಸಿ ಸುಬಿನ್‌ರ ಪತ್ನಿ ಶರಣ್ಯ (26)ರ ಮೃತದೇಹ ಮಲಗುವ ಕೊಠಡಿಯ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಘಟನೆಯಲ್ಲಿ ನಿಗೂಢತೆ ಆರೋಪಿಸಿ ಯುವತಿಯ ಕುಟುಂಬ ಪೊಲೀಸರಿಗೆ ದೂರು ನೀಡಿದೆ. ಕಣ್ಣೂರು ನಿವಾಸಿ ಯಾದ ಶರಣ್ಯ ಹಾಗೂ ಸುಬಿನ್ ಒಂದು ವರ್ಷದ ಹಿಂದೆ ವಿವಾಹಿತರಾ ಗಿದ್ದರು. ನಿನ್ನೆ ಸಂಜೆ ನೆರೆಮನೆಯ ವಿದ್ಯಾರ್ಥಿ ಶರಣ್ಯಳ ಮನೆಗೆ ತಲುಪಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಶರಣ್ಯ ಕಂಡು ಬಂದಿದ್ದಾರೆ. ಕೂಡಲೇ ಸ್ಥಳೀಯರಲ್ಲಿ ವಿದ್ಯಾರ್ಥಿ ವಿಷಯ ತಿಳಿಸಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಟ್ಟಾರಕರ ತಹಶೀಲ್ದಾರರ ಉಪಸ್ಥಿತಿಯಲ್ಲಿ ಪ್ರಾಥಮಿಕ ಕ್ರಮಗಳನ್ನು ಪೂರ್ತಿಗೊಳಿಸಿ ಮೃತದೇಹವನ್ನು ಪಾರಿಪಳ್ಳಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡ ಲಾಗಿದೆ. ಪತಿ ಸುಬಿನ್ ಮಗಳನ್ನು ನಿರಂತರ ಹಲ್ಲೆಗೊಳಿಸುತ್ತಿರುವುದಾ ಗಿಯೂ ಈ ಬಗ್ಗೆ ಶರಣ್ಯ ತನ್ನಲ್ಲಿ ತಿಳಿಸಿರು ವುದಾಗಿ  ತಂದೆ ಚಂದ್ರನ್ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.

You cannot copy contents of this page