45 ಲೀಟರ್ ಹುಳಿರಸ ವಶ
ಕಾಸರಗೋಡು: ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಸಿ.ಕೆ.ವಿ. ಸುರೇಶ್‌ರ ನೇತೃತ್ವದ ತಂಡ ನಿನ್ನೆ ಭೀಮನಡಿ ಕೂವಪ್ಪಾರ ಕಾಲನಿಯಲ್ಲಿ ನಡೆಸಿದ ಕಾರ್ಯಾಚರಣೆ ಯಲ್ಲಿ ಕಳ್ಳಭಟ್ಟಿ ಸಾರಾಯಿ ನಿರ್ಮಿಸಲು ಸಿದ್ಧಪಡಿಸ ಲಾಗಿದ್ದ 45 ಲೀಟರ್ ಹುಳಿರಸ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.
ಇದಕ್ಕೆ ಸಂಬಂಧಿಸಿ ಕೂವಪ್ಪಾರ ಕಾಲನಿಯ ಪ್ರಭು ಕೆ. ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಗ್ರೇಡ್ ಪ್ರಿವೆಂಟೀವ್ ಆಫೀಸರ್‌ಗ ಳಾದ ಪ್ರಶಾಂತ್ ಕುಮಾರ್, ನೌಶಾದ್, ಸಿಇಒಗಳಾದ ಅತುಲ್, ಧನ್ಯ, ಸಜೀಶ್ (ಚಾಲಕ) ಎಂಬ ವರು ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದಾರೆ.