5.140 ಗ್ರಾಂ ಎಂಡಿಎಂಎ ವಶ: ಯುವಕ ಸೆರೆ
ಕಾಸರಗೋಡು: ಹೊಸದುರ್ಗ ರೈಲು ನಿಲ್ದಾಣ ಪರಿಸರದಲ್ಲಿ ಹೊಸದುರ್ಗ ಪೊಲೀಸರು ನಡೆಸಿದ ಕಾರ್ಯಾ ಚರಣೆಯಲ್ಲಿ ಮಾದಕ ದ್ರವ್ಯವಾದ 5.140 ಗ್ರಾಂ ಎಂಡಿ ಎಂಎ ಪತ್ತೆಹಚ್ಚಿ ವಶಪಡಿಸಿಕೊಂ ಡಿದ್ದಾರೆ. ಇದಕ್ಕೆ ಸಂಬಂಧಿಸಿ ಹೊಸದುರ್ಗ ಕೊವ್ವಲ್‌ಪಳ್ಳಿ ಫೌಸಿಯಾ ಮಂಜಿಲ್‌ನ ಶರೀಫ್ ಟಿ.ಕೆ (25) ಎಂಬಾತನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿ ಸಿಕೊಂಡಿದ್ದಾರೆ.
ಹೊಸದುರ್ಗ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಅಜಿತ್ ಕುಮಾರ್ ಪಿ ನೀಡಿದ ನಿರ್ದೇಶ ಪ್ರಕಾರ ಎಸ್‌ಐ ಗಳಾದ ಅಖಿಲ್ ಟಿ, ಮೋಹನ್ ವಿ, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ರಾಕೇಶ್ ಎ.ವಿ ಮತ್ತು ಚಾಲಕ ರಾಕೇಶ್ ಎಂಬವರನ್ನೊ ಗೊಂಡ ಪೊಲೀಸರ ತಂಡ ಹೊಸದುರ್ಗ ರೈಲು ನಿಲ್ದಾಣದಲ್ಲಿ ಆರೋಪಿ ಸಂಚರಿಸುತ್ತಿದ್ದ ಕಾರನ್ನು ತಡೆದು ನಿಲ್ಲಿಸಿ ಆತನ ದೇಹ ತಪಾಸಣೆ ನಡೆಸಿದಾಗ ಎಂಡಿಎಂಎ ಪತ್ತೆಯಾಗಿದೆ.