50 ಗ್ರಾಂ ಎಂಡಿಎಂಎ ಸಹಿತ ಕರ್ನಾಟಕ ನಿವಾಸಿ ಸೆರೆ

ಕಾಸರಗೋಡು: ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಕೈನೋತ್ತ್ ಎಂಬಲ್ಲಿ ಭಾರೀ ಪ್ರಮಾಣದ ಎಂಡಿಎಂಎ ವಶಪಡಿಸಿಕೊಂಡು, ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕದ ಮೂಡಿಗೆರೆ ಚಿಕ್ಕಮಗಳೂರಿನ ಅಬ್ದುಲ್ ರಹ್ಮಾನ್  ಯಾನೆ ರವಿ (28) ಎಂಬಾತನನ್ನು ಮೇಲ್ಪರಂಬ ಎಸ್‌ಐ ವಿ.ಕೆ. ಅನೀಶ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ.    ಆರೋಪಿಯ ಕೈಯಿಂದ ೫೦ ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ಕೊಪ್ಪಲ್‌ನ ಮನೆಯೊಂದರ ತೋಟದಲ್ಲಿ ಈತ ಕೆಲಸಕ್ಕಿದ್ದನು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾರಿಗೆ ಲಭಿಸಿದ ಗುಪ್ತ ಮಾಹಿತಿಯ ಆಧಾರದಲ್ಲಿ ಎಸ್‌ಐ ನೇತೃತ್ವದಲ್ಲಿ ನಿನ್ನೆ ರಾತ್ರಿ ಕೈನೋತ್ತ್ ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಯುವಕ ಸ್ಕೂಟರ್‌ನಲ್ಲಿ ತಲುಪಿದ್ದಾನೆ.  ಪೊಲೀಸರು ನಿಲ್ಲಿಸಲು ಸೂಚಿಸಿದಾಗ ಸ್ಕೂಟರ್ ನಿಲ್ಲಿಸಿ ಇಳಿದು ಓಡಿದ ಯುವಕನನ್ನು ಪೊಲೀಸರು ಬೆನ್ನಟ್ಟಿ ಸೆರೆಹಿಡಿದಿದ್ದಾರೆ. ಆತನ ದೇಹ ತಪಾಸಣೆ ನಡೆಸಿದಾಗ ಎಂಡಿಎಂಎ ಪತ್ತೆಯಾಗಿದೆ. ಪೊಲೀ ಸ್ ತಂಡದಲ್ಲಿ ಎಸ್‌ಐ ಶಶಿಧರನ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ರಂಜಿತ್, ಚಾಲಕ ಸಜಿತ್ ಎಂಬಿವರಿದ್ದರು.

RELATED NEWS

You cannot copy contents of this page