ಬಿಎಂಎಸ್ ಜಿಲ್ಲಾ ಸಮ್ಮೇಳನ ಯಶಸ್ವಿಗೆ 501 ಸದಸ್ಯರ ಸ್ವಾಗತ ಸಮಿತಿ ರೂಪೀಕರಣ

ಕಾಸರಗೋಡು: ಅಕ್ಟೋಬರ್ 24,25ರಂದು ನಡೆಯಲಿರುವ ಬಿಎಂಎಸ್ ಜಿಲ್ಲಾ ಸಮ್ಮೇಳನದ ಯಶಸ್ವಿಗೆ 501 ಸದಸ್ಯರ ಸ್ವಾಗತ ಸಮಿತಿ ರೂಪೀಕರಿಸಲಾಯಿತು. ಪದಾಧಿಕಾರಿಗಳಾಗಿ ನ್ಯಾಯವಾದಿ ಎ.ಸಿ. ಅಶೋಕ್ ಕುಮಾರ್ (ಅಧ್ಯಕ್ಷ), ಕೆ.ವಿ. ಬಾಬು (ಪ್ರಧಾನ ಸಂಚಾಲಕ), ಮನೀಸ್ ಬಿ.(ಕೋಶಾಧಿಕಾರಿ) ಸಹಿತ ೫೦೧ ಮಂದಿಯನ್ನು ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಬಿಎಂಎಸ್ ಜಿಲ್ಲಾ ಅಧ್ಯಕ್ಷ ಕೆ. ಉಪೇಂದ್ರನ್ ಅಧ್ಯಕ್ಷತೆ ವಹಿಸಿದರು. ದಕ್ಷಿಣ ವಲಯ ಸಂಘಟನಾ ಕಾರ್ಯದರ್ಶಿ ಎಂ.ಪಿ. ರಾಜೀವನ್ ಉದ್ಘಾಟಿಸಿದರು. ರಾಜ್ಯ ಉಪಾಧ್ಯಕ್ಷ ಪಿ. ಮುರಳೀಧರನ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಿ.ವಿ. ಬಾಲಕೃಷ್ಣನ್, ಟಿ. ಕೃಷ್ಣನ್ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಸ್ವಾಗತಿಸಿ, ವಲಯ ಕಾರ್ಯದರ್ಶಿ ಬಾಬುಮೋನ್ ವಂದಿಸಿದರು.

RELATED NEWS

You cannot copy contents of this page