ಮೀನುಗಾರಿಕೆ ವೇಳೆ ಕಾರ್ಮಿಕ ದೋಣಿಯಲ್ಲಿ ಕುಸಿದುಬಿದ್ದು ಮೃತ್ಯು

ಕಾಸರಗೋಡು:  ಮೀನುಗಾರಿಕೆ ವೇಳೆ  ಕಾರ್ಮಿಕ ದೋಣಿಯಲ್ಲಿ ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ. ಅಡ್ಕತ್ತಬೈಲು ಶ್ರೀ ಸತ್ಯನಾರಾಯಣ ಮಠ ಸಮೀಪ  ಕೃಷ್ಣ ನಿಲಯದ ದಿ| ಕೃಷ್ಣ ಎಂಬವರ ಪುತ್ರ ಕೆ. ಬಾಬು (60) ಮೃತ ವ್ಯಕ್ತಿ.  ಎಂಟು ಮಂದಿ ಒಳಗೊಂಡ ತಂಡ ನಿನ್ನೆ ಬೆಳಗ್ಗೆ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿತ್ತು. ಈ ವೇಳೆ ಎದೆನೋವು ಅನುಭವಗೊಂಡ ಬಾಬು ದೋಣಿಯಲ್ಲಿ ಕುಸಿದು ಬಿದ್ದಿದ್ದರು. ಕೂಡಲೇ ದಡಕ್ಕೆ ತಂದು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.  ಬಾಬು ಅವರು ಕಾಸರಗೋಡು ಕಡಪ್ಪುರ ಶ್ರೀ ಕುರುಂಬಾ ಭಗವತೀ ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾಗಿದ್ದಾರೆ.

ಮೃತರು ತಾಯಿ ಮಗು, ಪತ್ನಿ ವಾರಿಜ, ಮಕ್ಕಳಾದ ಅಂಜನ, ಅಮಯ, ಸಹೋದರ-ಸಹೋದರಿ ಯರಾದ ಕುಮಾರನ್, ವಸಂತಿ, ವಳ್ಳಿ, ಸೀಮಂತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page