60 ವರ್ಷದ ವ್ಯಕ್ತಿಯಿಂದ ಯುವತಿಯ ಮಾನಭಂಗ: ಸೆರೆ
ಕಾಸರಗೋಡು: ಗೃಹಿಣಿಯಾದ ೩೭ರ ಹರೆಯದ ಯುವತಿಯನ್ನು ಮಾನಬಂಗಪಡಿಸಿರುವುದಾಗಿ ದೂರಲಾಗಿದೆ. ಚಿತ್ತಾರಿಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಯುವತಿ ದೂರುದಾತೆಯಾಗಿದ್ದಾಳೆ. ಹಲವು ಬಾರಿ ಮಾನ ಭಂಗಪಡಿಸಿರುವುದಾಗಿ ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ. ಈ ಬಗ್ಗೆ ಕೇಸು ದಾಖಲಿಸಿದ್ದ ಪೊಲೀಸರು ಕಡುಮೇನಿ ನಿವಾಸಿಯಾದ ನಾರಾಯಣ (60)ನನ್ನು ಸೆರೆ ಹಿಡಿದಿದ್ದಾರೆ. ಈತನನ್ನು ವೈದ್ಯ ತಪಾಸಣೆಗೆ ಒಳಪಡಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.