7 ತಿಂಗಳಿಂದ ವೇತನವಿಲ್ಲ: ಮೇಘ ಕಂಪೆನಿ ಕಚೇರಿ ಮುಂಭಾಗ ಕಾರ್ಮಿಕರಿಂದ ಪ್ರತಿಭಟನೆ

ಕಾಸರಗೋಡು: ಕಳೆದ ೭ ತಿಂಗ ಳಿಂದ ಸರಿಯಾಗಿ ವೇತನ ಲಭಿಸದಿ ರುವುದನ್ನು ಪ್ರತಿಭಟಿಸಿ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆ ಕಂಪೆನಿಯಾದ ಮೇಘ ಕನ್‌ಸ್ಟ್ರಕ್ಷನ್‌ನ ಬಟ್ಟತ್ತೂರಿನಲ್ಲಿರುವ ಕಚೇರಿ ಮುಂಭಾಗ ಕಾರ್ಮಿಕರು, ಚಾಲಕರು ಕೆಲಸ ಸ್ಥಗಿತ ಮುಷ್ಕರ ನಡೆಸಿದರು. ಸಿಐಟಿಯು ಮುಖಂಡರು, ಕಾರ್ಮಿಕ ಪ್ರತಿನಿಧಿಗಳು, ಮೇಘ ಕಂಪೆನಿ ಲೈಸನ್ ಆಫೀಸರ್ ಅಬ್ದುಲ್ ನಿಸಾರ್‌ನೊಂದಿಗೆ ನಡೆಸಿದ ಚರ್ಚೆಯಲ್ಲಿ ೨೫ರ ಮುಂಚಿತ ಎಲ್ಲರಿಗೂ ಕೂಲಿ ನೀಡುವುದಾಗಿ ಕಂಪೆನಿ ಅಧಿಕಾರಿಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ ಕಾರ್ಮಿಕರು ಮುಷ್ಕರದಿಂದ ಹಿಂದೆ ಸರಿದರು. ರಾಷ್ಟ್ರೀಯ ಹೆದ್ದಾರಿ ಎರಡನೇ ರೀಚ್‌ನಲ್ಲಿ ಮೇಘ ಕನ್‌ಸ್ಟ್ರಕ್ಷನ್‌ನ  ನೇತೃತ್ವದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಳೆದ ಏಳು ತಿಂಗಳಿಂದ ಕೂಲಿ ನೀಡದಿರುವುದು ಪ್ರತಿಭಟನಾ ರ್ಹವೆಂದು ಸಿಐಟಿಯು ಜಿಲ್ಲಾ ಸಮಿತಿ ಆರೋಪಿಸಿದೆ. ಕಂಪೆನಿಗಾಗಿ ವಾಹನ ಬಿಟ್ಟುಕೊಟ್ಟ ಗುತ್ತಿಗೆ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಬಾಂಡ್‌ನಲ್ಲಿ ಬಿಜೆಪಿಗೆ ಕೋಟ್ಯಂತರ ರೂ. ನೀಡುವ ಕಂಪೆನಿ ಕಾರ್ಮಿಕರಿಗೆ ಕೂಲಿ ನೀಡದೆ ವಂಚಿಸುತ್ತಿರುವುದು ಸರಿಯಲ್ಲವೆಂದು ಕೂಡಲೇ ಕೂಲಿ ನೀಡದಿದ್ದರೆ ಕಂಪೆನಿ ವಿರುದ್ಧ ಪ್ರತಿಭಟನೆ ತೀವ್ರಗೊಳಿಸುವು ದಾಗಿ ಸಂಘಟನೆಯ ಜಿಲ್ಲಾಧ್ಯಕ್ಷ ಪಿ. ಮಣಿಮೋಹನನ್, ಜನರಲ್ ಸೆಕ್ರೆಟರಿ ಸಾಬು ಎಬ್ರಹಾಂ ತಿಳಿಸಿದ್ದಾರೆ.

ಸಿಐಟಿಯು ಜಿಲ್ಲಾ ಅಧ್ಯಕ್ಷ, ಉದುಮ ಏರಿಯಾ ಕಾರ್ಯದರ್ಶಿ  ಇ. ಮನೋಜ್ ಕುಮಾರ್, ಡಿವೈಎಫ್‌ಐ ಬ್ಲೋಕ್ ಕಾರ್ಯದರ್ಶಿ ಕೆ. ಮಹೇಶ್ ಎಂಬಿವರು ಕಂಪೆನಿ ಪ್ರತಿನಿಧಿಗಳೊಂದಿಗೆ ಚರ್ಚೆಯಲ್ಲಿ ಭಾಗವಹಿಸಿದರು.

You cannot copy contents of this page